ಬೆಂಗಳೂರು : ರಾಜ್ಯದಲ್ಲಿ ಲಾಕ್ ಡೌನ್ ಸಡಿಲವಾದ ಬೆನ್ನಲ್ಲೇ ಕೊರೊನಾ ಸೋಂಕು ವ್ಯಾಪಿಸುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಪ್ರಯಾಣಿಕರಿಗೂ ಹೆಲ್ತ್ ಸ್ಕ್ರೀನಿಂಗ್ ಕಡ್ಡಾಯಗೊಳಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

ರೊನಾ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್ ಡೌನ್ ಆದೇಶ ಜಾರಿಯಾಗುತ್ತಲೇ, ಅಂತರ್ ಜಿಲ್ಲಾ ಓಡಾಟವನ್ನು ನಿಷೇಧಿಸಲಾಗಿತ್ತು. ಆದ್ರೀಗ ಲಾಕ್ ಡೌನ್ ಸಡಿಲವಾಗುತ್ತಲೇ ಅಂತರ್ ಜಿಲ್ಲಾ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಗಡಿಭಾಗಗಳಲ್ಲಿನ ಚೆಕ್ ಪೋಸ್ಟ್ ಗಳಲ್ಲಿ ಪ್ರಯಾಣಿಕರಿಗೆ ತಪಾಸಣೆ ನಡೆಸಲಾಗುತ್ತಿತ್ತು. ಆದ್ರೀಗ ಗಡಿಭಾಗದಲ್ಲಿ ಆರೋಗ್ಯ ತಪಾಸಣೆಯನ್ನು ಬಂದ್ ಮಾಡಲಾಗಿದ್ದು, ಇನ್ಮುಂದೆ ಪ್ರಯಾಣಿಕರು ಬಸ್ ಅಥವಾ ರೈಲು ಹತ್ತುವುದಕ್ಕೆ ಮೊದಲು ನಿಲ್ದಾಣಗಳಲ್ಲಿಯೇ ಪ್ರಯಾಣಿಕರ ಹೆಲ್ತ್ ಸ್ಕ್ರೀನಿಂಗ್ ಕಡ್ಡಾಯವಾಗಿ ನಡೆಸಲೇ ಬೇಕು ಎಂದು ಆದೇಶಿಸಿದೆ.

ಈಗಾಗಲೇ ಕೆಎಸ್ಆರ್ ಟಿಸಿ ಹಾಗೂ ಬಿಎಂಟಿಸಿ ಅಧಿಕಾರಿಗಳಿಗೆ ಈ ಕುರಿತು ಸೂಚನೆಯನ್ನು ನೀಡಲಾಗಿದ್ದು, ಪ್ರಯಾಣಿಕರು ಬಸ್ ಹತ್ತುವ ಮೊದಲು ಕಡ್ಡಾಯವಾಗಿ ಪ್ರಯಾಣಿಕರ ಹೆಲ್ತ್ ಸ್ಕ್ರೀನಿಂಗ್ ನಡೆಸಲೇ ಬೇಕು. ಒಂದೊಮ್ಮೆ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ್ರೆ ಕೂಡಲೇ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.

ಈ ನಿಯಮ ಕೇವಲ ಸರಕಾರಿ ಬಸ್ಸು, ರೈಲು ಪ್ರಯಾಣಕ್ಕೆ ಮಾತ್ರವಲ್ಲ ಖಾಸಗಿ ಬಸ್ ಸಂಚಾರಕ್ಕೂ ಕೂಡ ಇದೇ ನಿಯಮ ಅನ್ವಯವಾಗಲಿದೆ ಎಂದು ಆರೋಗ್ಯ ಇಲಾಖೆ ಸೂಚನೆ ನೀಡ