ಬೆಂಗಳೂರು: Kantara v/s Tumbbad: ಕಾಂತಾರ ಸಿನಿಮಾ ರಿಲೀಸ್ ಆದ ದಿನದಿಂದ ಒಂದೆಡೆ ಈ ಸಿನಿಮಾ ಗೆಲುವಿನ ನಾಗಲೋಟದಲ್ಲಿದ್ರೆ ಇನ್ನೊಂದೆಡೆ ಕೆಲವೊಂದು ವಿವಾದಗಳು ಈ ಸಿನಿಮಾಕ್ಕೆ ಸುತ್ತಿಕೊಂಡಿತ್ತು. ಕೊನೆಗೂ ಎಲ್ಲಾ ವಿವಾದಗಳಿಗೆ ತೆರೆ ಬಿತ್ತು ಅನ್ನುವಷ್ಟರಲ್ಲೇ ಬಾಲಿವುಡ್ ನಿರ್ಮಾಪಕರೊಬ್ಬರು ಕಾಂತಾರ ಸಿನಿಮಾದ ಬಗ್ಗೆ ಅಪಸ್ವರ ಹಾಡಿದ್ದು, ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಕನ್ನಡದಲ್ಲಿ ಕಾಂತಾರ ಸಿನಿಮಾ ಹೇಗೆ ಸೂಪರ್ ಹಿಟ್ ಎನಿಸಿಕೊಂಡಿದೆಯೋ ಮರಾಠಿಯಲ್ಲಿ 2018ರಲ್ಲಿ ತೆರೆ ಕಂಡಿದ್ದ ತುಂಬಾಡ್ ಸಿನಿಮಾ ಅಷ್ಟೇ ಸದ್ದು ಮಾಡಿತ್ತು. ಹೀಗಾಗಿ ಕಾಂತಾರ ಸಿನಿಮಾವನ್ನು ನೋಡಿದ್ದ ಹಲವರು ತುಂಬಾಡ್ ಸಿನಿಮಾಗೆ ಹೋಲಿಕೆ ಮಾಡಿದ್ದರು. ಇದೇ ವಿಚಾರಕ್ಕೆ ತುಂಬಾಡ್ ಸಿನಿಮಾದ ಸಹ ನಿರ್ಮಾಪಕ ಹಾಗೂ ಚಿತ್ರಕಥೆ ಬರಹಗಾರ ಆನಂದ್ ಗಾಂಧಿ ಟ್ವಿಟರ್ ನಲ್ಲಿ ಕಾಂತಾರ ಸಿನಿಮಾದ ಬಗ್ಗೆ ಅಪಸ್ವರ ಎತ್ತಿದ್ದಾರೆ.
ಇದನ್ನೂ ಓದಿ: IISC Recruitment:ಪತ್ರಿಕೋದ್ಯಮ ಪದವೀಧರರಿಗೆ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಉದ್ಯೋಗಾವಕಾಶ
‘ಕಾಂತಾರ ಸಿನಿಮಾ ತುಂಬಾಡ್ ನಂತಿಲ್ಲ. ತುಂಬಾಡ್ ಸಿನಿಮಾದಲ್ಲಿ ಹಾರರ್ ಅನ್ನು ಪುರುಷತ್ವದ ರೂಪಕವಾಗಿ ಬಳಸುವುದು ನಮ್ಮ ಯೋಚನೆ ಆಗಿತ್ತು. ಆದರೆ ಕಾಂತಾರ ಸಿನಿಮಾದಲ್ಲಿ ಅದು ಸಂಪೂರ್ಣ ವಿರುದ್ಧವಾಗಿದೆ. ಕಾಂತಾರದಲ್ಲಿ ಸಂಕುಚಿತತೆಯನ್ನು ವೈಭವೀಕರಿಸಲಾಗಿದೆ’ ಎಂದು ತುಂಬಾಡ್ ಸಿನಿಮಾದ ಸಹ ನಿರ್ಮಾಪಕ ಆನಂದ್ ಗಾಂಧಿ ಟ್ವೀಟ್ ಮಾಡಿದ್ದಾರೆ.
Kantara is nothing like Tumbbad. My idea behind Tumbbad was to use the horror as an allegory of toxic masculinity and parochialism.
— Anand Gandhi (@Memewala) December 3, 2022
Kantara is a celebration of these.
ಸದ್ಯ ನಿರ್ಮಾಪಕ ಆನಂದ್ ಗಾಂಧಿ ಅವರ ಟ್ವೀಟ್ ಟ್ವಿಟರ್ ನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕಾಂತಾರ ಸಿನಿಮಾವನ್ನು ಟೀಕಿಸಿದ್ದಕ್ಕೆ ಕಾಂತಾರ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ. ಅಭಿಮಾನಿಯೊಬ್ಬರು ‘ಕಾಂತಾರ ಸಿನಿಮಾ ವ್ಯಭಿಚಾರದಿಂದ ಜ್ಞಾನೋದಯದ ಕಡೆಗೆ ಪ್ರಯಾಣ ಬೆಳೆಸುವುದನ್ನು ಚಿತ್ರೀಕರಿಸುತ್ತದೆ. ಸಿನಿಮಾದಲ್ಲಿ ಸ್ಥಳೀಯತೆಯನ್ನು ಹೆಚ್ಚಾಗಿ ತೋರಿಸಲಾಗಿದೆ. ತುಂಬಾಡ್ ಇದಕ್ಕೆ ವಿರುದ್ಧವಾಗಿದೆ. ನೀವು ಹೇಳಿದ್ದು ಸರಿ. ಕಾಂತಾರ ತುಂಬಾಡ್ ನಂಥಲ್ಲ’ ಎಂದು ವ್ಯಂಗ್ಯವಾಡಿದ್ದಾರೆ.
ಕೆಲ ದಿನಗಳ ಹಿಂದೆ ಆ ದಿನಗಳು ಖ್ಯಾತಿಯ ನಟ ಚೇತನ್ ಕಾಂತಾರ ಸಿನಿಮಾದ ಬಗ್ಗೆ ಧ್ವನಿ ಎತ್ತಿ ವಿವಾದಕ್ಕೀಡಾಗಿದ್ದರು. ಇವರ ವಿರುದ್ಧ ಸಾಕಷ್ಟು ಅಸಮಾಧಾನಗಳು ಕೇಳಿಬಂದಿದ್ದವು. ಇದೀಗ ಆನಂದ್ ಗಾಂಧಿ ಕೂಡಾ ಈ ಸಾಲಿಗೆ ಸೇರ್ಪಡೆಗೊಂಡಿದ್ದು, ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇದನ್ನೂ ಓದಿ: Gangster Raju Thet: ಗ್ಯಾಂಗ್‌ಸ್ಟರ್ ರಾಜು ಥೇಟ್ ಹತ್ಯೆ: ಐವರು ಆರೋಪಿಗಳ ಬಂಧನ
Kantara v/s Tumbbad: Bollywood producer raised objections to Kantara; Fans criticized