ಕೊಲಂಬಿಯಾ: Colombia landslide: ರಸ್ತೆ ಕುಸಿದುಬಿದ್ದ ಪರಿಣಾಮ 8 ಮಕ್ಕಳು ಸೇರಿದಂತೆ 34ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವ ಘಟನೆ ಕೊಲಂಬಿಯಾದಲ್ಲಿ ನಡೆದಿದೆ.ಕೊಲಂಬಿಯಾದ ಫ್ಯೂಬ್ಲೋ ಜಿಲ್ಲೆಯ ರಿಕೊ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿದೆ. ರಸ್ತೆ ಮೇಲೆ ವಾಹನಗಳು ಚಲಿಸುತ್ತಿದ್ದಂತೆ ಏಕಾಏಕಿ ರಸ್ತೆ ಕುಸಿದು ಬಿದ್ದಿದೆ. ಪರಿಣಾಮ 8 ಮಕ್ಕಳು ಸೇರಿದಂತೆ 34ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ರಸ್ತೆ ಕುಸಿತದ ವೇಳೆ ಅದೇ ರಸ್ತೆ ಮೇಲೆ ಒಂದು ಬಸ್ , 2 ಕಾರುಗಳು, ಮತ್ತು 2 ಬೈಕ್ ಗಳು ಚಲಿಸುತ್ತಿದ್ದವು. ಏಕಾಏಕಿ ರಸ್ತೆ ಕುಸಿತಗೊಂಡ ಹಿನ್ನೆಲೆ ವಾಹನಗಳು ಸೇರಿದಂತೆ ವಾಹನ ಸವಾರರು ಬಲಿಯಾಗಿದ್ದಾರೆ. ಬಸ್ ಸಹಿತ ಕೆಲವು ವಾಹನಗಳು ಅವಶೇಷಗಳಡಿಯಲ್ಲಿ ಹೂತು ಹೋಗಿವೆ. ಕ್ಯಾಲಿ ನಗರದಿಂದ ಚೋಕೋ ಪ್ರಾಂತ್ಯದ ಕಾಂಡೀಟೊ ನಗರಕ್ಕೆ ಬಸ್ ಪ್ರಯಾಣಿಸುತ್ತಿತ್ತು. ರಸ್ತೆ ಮಧ್ಯೆ ಏಕಾಏಕಿ ಜಾರಿ ಬಂದ ಬೆಟ್ಟದ ಮಣ್ಣಿನಡಿ ಬಸ್ ಸಿಲುಕಿದ ಪರಿಣಾಮ ಬಸ್ ಸುಮಾರು 3 ಅಡಿ ಆಳಕ್ಕೆ ಹೂತುಹೋಗಿದೆ. ಪರಿಣಾಮ ಬಸ್ ನಲ್ಲಿದ್ದ ಎಲ್ಲಾ ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಈ ಪೈಕಿ 8 ಮಕ್ಕಳು ಕೂಡಾ ಇದ್ದರು ಎನ್ನಲಾಗಿದೆ.
उत्तर पश्चिम कोलंबिया में भारी बारिश के कारण भूस्खलन होने से 34 लोगों की मौत.
— Himanshu Purohit (@Himansh256370) December 6, 2022
34 Killed As #Landslide Swallows Bus On Highway In #Colombia pic.twitter.com/KmXkjj0SCA
ಇದನ್ನೂ ಓದಿ: PM Kisan New Scheme : ರೈತರಿಗೆ ಭರ್ಜರಿ ಆಫರ್ ನೀಡಿದ ಪಿಎಂ : ಖಾತೆಗೆ ಬರಲಿದೆ ರೂ.15 ಲಕ್ಷ ಕೂಡಲೇ ಅರ್ಜಿ ಸಲ್ಲಿಸಿ
ಸ್ಥಳಕ್ಕೆ ಧಾವಿಸಿದ ರಕ್ಷಣಾ ಪಡೆ 70ಕ್ಕೂ ಹೆಚ್ಚು ಜನರನ್ನು ರಕ್ಷಿಸಿದೆ. ಇನ್ನು ಕೂಡಾ ಸ್ಥಳದಲ್ಲಿ ರಕ್ಷಣಾ ಕಾರ್ಯ ಮುಂದುವರೆದಿದ್ದು, ಮೃತದೇಹಗಳನ್ನು ಹೊರತೆಗೆಯುವ ಕಾರ್ಯ ಭರದಿಂದ ಸಾಗಿದೆ. ಇನ್ನು ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದು, ಅವರನ್ನು ರಕ್ಷಣೆ ಮಾಡಿ ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಕೊಲಂಬಿಯಾದಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಅಲ್ಲಲ್ಲಿ ಭೂಕುಸಿತ ಘಟನೆಗಳು ನಡೆಯುತ್ತಿವೆ.
ಇದನ್ನೂ ಓದಿ: Newborns death: ಆಸ್ಪತ್ರೆಯಲ್ಲಿ ವಿದ್ಯುತ್ ಕಡಿತಗೊಂಡು 4 ನವಜಾತ ಶಿಶುಗಳ ಸಾವು: ತನಿಖೆಗೆ ಆದೇಶಿಸಿದ ಸರ್ಕಾರ
Colombia landslide: Huge tragedy in Colombia: Road collapsed suddenly and more than 34 people died, including 8 children