ಭಾನುವಾರ, ಏಪ್ರಿಲ್ 27, 2025
HomeCinemaShah Rukh Khan's son Aryan : ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಶಾರುಖ್ ಖಾನ್ ಪುತ್ರ...

Shah Rukh Khan’s son Aryan : ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್

- Advertisement -

ಬಾಲಿವುಡ್‌ ಬಾದಷಾ ಶಾರುಖ್‌ ಖಾನ್‌ ಪುತ್ರ (Shah Rukh Khan’s son Aryan) ಸದ್ದಿಲ್ಲದೇ ಸಿನಿರಂಗಕ್ಕೆ ಲಗ್ಗೆ ಇಡಲು ಸಜ್ಜಾಗಿದ್ದಾರೆ. ಇದೀಗ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿರುವ ಆರ್ಯನ್‌ ಖಾನ್‌ (Aryan Khan)ನಟನಾಗಿ ಅಲ್ಲ, ನಿರ್ದೇಶಕರಾಗಿ ಎನ್ನುವುದು ವಿಶೇಷ. ಬಾಲಿವುಡ್‌ಗೆ ನಿರ್ದೇಶಕರಾಗಿ ಎಂಟ್ರಿ ಕೊಟ್ಟಿರುವ ಶಾರುಖ್‌ ಪುತ್ರ ಅದರ ಬಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸ್ಟಾರ್‌ ನಟನ ಪುತ್ರ ಆದ್ದರಿಂದ ಆರ್ಯನ್‌ ಖಾನ್‌ ಕೂಡ ಹೀರೋ ಆಗಿ ಎಂಟ್ರಿ ಕೊಡುತ್ತಾರೆ ಎಂದು ಅಭಿಮಾನಿಗಳು ಭಾವಿಸಿದ್ದರು. ಆದರೆ ಆರ್ಯನ್‌ ಖಾನ್‌ಗೆ ನಟನೆಗಿಂತಲೂ ನಿರ್ದೇಶನದಲ್ಲಿ ಆಸಕ್ತಿ ಇದೆ. ಹಾಗಾಗಿ ಕ್ಯಾಮೆರಾ ಹಿಂದೆ ನಿಂತು ಕೆಲಸ ಮಾಡಲು ಸಜ್ಜಾಗಿದ್ದಾರೆ. ತಮ್ಮ ಮೊದಲ ಪ್ರಾಜೆಕ್ಟ್‌ ಸ್ಕ್ರಿಪ್ಟ್‌ ಬರೆದು ಮುಗಿಸಿದ್ದಾರೆ. ಅದರ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸ್ಕ್ರಿಪ್ಟ್‌ ಬರದು ಮುಗಿಸಿರುವ ಆರ್ಯನ್‌ ಖಾನ್‌ ಇದೀಗ ಆಕ್ಷನ್‌ ಕಟ್‌ ಹೇಳುವುದಕ್ಕೆ ಕಾತರದಲ್ಲಿದ್ದಾರೆ. ತಂದೆಯ “ರೆಡ್‌ ಚಿಲ್ಲೀಸ್‌ ಎಂಟರ್‌ಟೇನ್ಮೆಂಟ್‌” ಬ್ಯಾನರ್‌ ಮೂಲಕ ಈ ಪ್ರಾಜೆಕ್ಟ್‌ ನಿರ್ಮಾಣ ಆಗಲಿದೆ. ಆದರೆ ಈ ಪ್ರಾಜೆಕ್ಟ್‌ನಲ್ಲಿ ಯಾರು ನಟಿಸಲಿದ್ದಾರೆ ? ತಾಂತ್ರಿಕ ವರ್ಗದಲ್ಲಿ ಯಾರು ಕೆಲಸ ಮಾಡಲಿದ್ದಾರೆ ? ಇದು ಯಾವ ಪ್ರಕಾರದ ಸಿನಿಮಾ ಎನ್ನುವ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ.

ಇದನ್ನೂ ಓದಿ : Padavi Poorva Release Date : ಡಿಸೆಂಬರ್ 30ಕ್ಕೆ ತೆರೆಗೆ ಬರಲಿದೆ ಯೋಗರಾಜ್‌ ಭಟ್ ನಿರ್ಮಾಣದ “ಪದವಿ ಪೂರ್ವ” ಸಿನಿಮಾ

ಇದನ್ನೂ ಓದಿ : Nepotism: ಡಾಲಿ ಧನಂಜಯ್ ವಿರುದ್ಧ ನೆಪೋಟಿಸಂ ಆರೋಪ: ಪ್ರೇಮ್ ಪುತ್ರಿಗೆ ಅವಕಾಶ ನೀಡಿದ್ದಕ್ಕೆ ನೆಟ್ಟಿಗರು ಗರಂ

ಇದನ್ನೂ ಓದಿ : Anushka Sharma Qala Look : ರೆಟ್ರೊ ಸ್ಟೈಲ್‌ನಲ್ಲಿ ಅನುಷ್ಕಾ ಶರ್ಮಾ : ಸಖತ್‌ ವೈರಲ್‌ ಆದ ಖಾಲಾ ಲುಕ್

ಇದನ್ನೂ ಓದಿ : Kantara Hindi OTT : “ಕಾಂತಾರ” ಹಿಂದಿ ಓಟಿಟಿ ರಿಲೀಸ್‌ ಡೇಟ್ಸ್‌ ಫಿಕ್ಸ್‌ : ನೆಟ್‌ಫ್ಲಿಕ್ಸ್‌ಗೆ ಲಗ್ಗೆ ಇಟ್ಟ ಕನ್ನಡದ ಮೊದಲ ಸಿನಿಮಾ

ಸ್ಟಾರ್‌ ನಟನ ಪುತ್ರನ ಎಂಟ್ರಿಗೆ ಬಾಲಿವುಡ್‌ನ ಅನೇಕ ಸೆಲೆಬ್ರಿಟಿಗಳು ಶುಭ ಹಾರೈಸಿದ್ದಾರೆ. ತಂದೆಯ ರೀತಿಯೇ ದೊಡ್ಡ ಯಶಸ್ಸು ಸಿಗಲಿ ಎಂದು ಆಪ್ತರು ಮತ್ತು ಅಭಿಮಾನಿಗಳು ಹಾರೈಸುತ್ತಿದ್ದಾರೆ. ಮೊದಲ ಪ್ರಾಜೆಕ್ಟ್‌ ಬಗ್ಗೆ ಆರ್ಯನ್‌ ಖಾನ್‌ ಇನ್ನಷ್ಟು ಮಾಹಿತಿ ಹಂಚಿಕೊಳ್ಳಲಿ ಎಂದು ಫ್ಯಾನ್ಸ್‌ ಕುತೂಹಲದಿಂದ ಕಾದಿದ್ದಾರೆ. ಇತ್ತೀಚೆಗೆ ಆರ್ಯನ್‌ ಖಾನ್‌ ಬಿ-ಟೌನ್‌ ಸೆಲೆಬ್ರಿಟಿಗಳ ವಲಯದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲು ಆರಂಭಿಸಿದ್ದಾರೆ. ತಂದೆಯ ಅನೇಕ ಉದ್ಯಮಗಳಲ್ಲಿ ಆಸಕ್ತಿ ತೊರುತ್ತಿದ್ದಾರೆ. ಡ್ರಗ್ಸ್‌ ಪ್ರಕರಣದ ಕಹಿ ಘಟನೆಯನ್ನು ಮರೆತು ಮುಂದೆ ಸಾಗುತ್ತಿದ್ದು, ಮಗನ ಸಿನಿ ಪ್ರಯಾಣಕ್ಕೆ ತಂದೆ ಶಾರುಖ್‌ ಖಾನ್‌ ಹಾಗೂ ತಾಯಿ ಗೌರಿ ಖಾನ್‌ ಬೆಂಬಲವಾಗಿ ನಿಂತಿದ್ದಾರೆ.

Shah Rukh Khan’s son Aryan Khan entered Bollywood

RELATED ARTICLES

Most Popular