ಸ್ಯಾಂಡಲ್‌ವುಡ್‌ನ ರೆಬಲ್ ಸ್ಟಾರ್ ಅಂಬರೀಶ್ ಮತ್ತು ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್‌ಗೆ (Ambareesh-Sumalatha) ಇಂದು ಮದುವೆ 31ನೇ ವಾರ್ಷಿಕೋತ್ಸವದ ಸಂಭ್ರಮ. ಕನ್ನಡ ಸಿನಿರಂಗಕ್ಕೆ ನಟಿಯಾಗಿ ಬಂದ ಸುಮಲತಾ ಅವರನ್ನು ನಟ ಅಂಬರೀಶ್ ಪ್ರೀತಿಸಿ ಡಿಸೆಂಬರ್ 8 ರಂದು ವಿವಾಹವಾದರು. ಅಂದು ಇವರಿಬ್ಬರ ಮದುವೆಗೆ ಅನೇಕರು ಸಾಕ್ಷಿಯಾದರು. ಇಂದು ಮೂವತ್ತು ವರ್ಷಗಳ ತಮ್ಮ ದಾಂಪತ್ಯ ಜೀವನವನ್ನು ನೆನೆದು ಸುಮಲತಾ ಅಂಬರೀಶ್ ಭಾವುಕರಾಗಿಯೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ನ್ನು ಹಂಚಿಕೊಂಡಿದ್ದಾರೆ.
ಅಂಬರೀಶ್‌ರೊಂದಗಿನ ಸುಂದರ ಪೋಟೋಗಳನ್ನು ಹಂಚಿಕೊಂಡಿರುವ ಸುಮಲತಾ, “ನಿಮ್ಮೊಂದಿಗೆ ಹೆಜ್ಜೆ ಹಾಕಿದ ಆದಿನ, ಆಕ್ಷಣ ನಿತ್ಯವೂ ಹೊಸ ಪುಳಕ. ತುಳಿದ ಸಪ್ತಪದಿಯಲ್ಲೂ ನಿಮ್ಮದೇ ಗುಣಗಾನ. ನನ್ನ ಬದುಕಿಗೆ ಬಾಳ ಸಂಗಾತಿಯಾಗಿ ನೀವು ಬಂದ ದಿನದಿಂದಲೂ ನನ್ನೊಳಗೆ ಹೊಸ ಸಂಭ್ರಮ. ಮದುವೆ ದಿನದ ಎಲ್ಲಾ ನೆನಪುಗಳ ಜೊತೆ ನೀವು ಇದ್ದೀರಿ, ಮತ್ತೆ ಮತ್ತೆ ಆ ದಿನವನ್ನು ನೆನಪಿಸುತ್ತೀರಿ. 31 ವರ್ಷಗಳಲ್ಲಿ ಜೀವಮಾನದ ನೆನಪುಗಳನ್ನು ಬಿತ್ತಿದ್ದೀರಿ. ನೀವು ನೀಡಿದ ಪ್ರೀತಿ ಮತ್ತು ಬಾಂದವ್ಯದ ಕುರುಹುಗಳು ನನ್ನ ಜೀವಿತಾವಧಿಯ ಕೂಡುಗೆಗಳು. ಮತ್ತೆ ಮತ್ತೆ ಹೇಳುತ್ತೇನೆ ಮದುವೆಯ ಈ ಬಂಧ, ಅನುರಾಗದ ಅನುಬಂಧ” ಎಂದು ಬರೆದು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : Kantara Movie in English : ಇಂಗ್ಲೀಷ್ ಭಾಷೆಗೆ ಡಬ್ ಆಗಲಿದೆ ರಿಷಬ್ ಶೆಟ್ಟಿ ನಟನೆಯ “ಕಾಂತಾರ”
ಇದನ್ನೂ ಓದಿ : Krishna G Rao: ಕೆಜಿಎಫ್ ತಾತ ಕೃಷ್ಣ ಜಿ ರಾವ್ ಇನ್ನಿಲ್ಲ; ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರು
ಇದೇ ದಿನದಂದು ಅವರ ಪುತ್ರ ಅಭಿಷೇಕ್ ನಿಶ್ಚಿತಾರ್ಥದ ವಿಷಯವನ್ನು ಅಧಿಕೃತವಾಗಿ ಹಂಚಿಕೊಳ್ಳಲಿದ್ದಾರೆ ಎನ್ನುವ ವದಂತಿ ಹರಿದಾಡಿದ್ದವು. ಆದರೆ ಇಲ್ಲಿಯವರೆಗೂ ಅಂತಹ ಯಾವುದೇ ಮಾಹಿತಿಯನ್ನು ಅವರು ನೀಡಿಲ್ಲ. ಡಿಸೆಂಬರ್ 11ರಂದು ಪ್ರಸಾದ್ ಬಿದ್ದಪ್ಪ ಅವರ ಪುತ್ರಿಯ ಜೊತೆ ಅಭಿಷೇಕ್ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಅಭಿಷೇಕ್ ನಿಶ್ಚಿತಾರ್ಥದ ವಿಷಯವನ್ನು ಈವರೆಗೂ ಅವರ ಕುಟುಂಬ ರಹಸ್ಯವಾಗಿಯೇ ಇಟ್ಟಿದೆ. ಆಪ್ತರ ಮಾಹಿತಿಯ ಪ್ರಕಾರ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ವೊಂದರಲ್ಲಿ ನಿಶ್ಚಿತಾರ್ಥ ನಡೆಯಲಿದ್ದು, ಈಗಾಗಲೇ ಹಲವು ಗಣ್ಯರಿಗೆ ಆಹ್ವಾನ ಕೂಡ ನೀಡಲಾಗಿದೆ ಎನ್ನುವ ಸುದ್ದಿ ಇದೆ.
Ambareesh-Sumalatha : Sumalatha, who Ambareesh remembers on their 31st wedding anniversary.