ಆಂಧ್ರಪ್ರದೇಶ: (tractor overturned) ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ಎರಡು ವರ್ಷದ ಬಾಲಕಿ ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದು, 20 ಮಂದಿ ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರಿನ ಪುತಲಪಟ್ಟು ಮಂಡಲದ ಲಕ್ಷ್ಮಯ್ಯ ಗ್ರಾಮದಲ್ಲಿ ಗುರುವಾರ ನಡೆದಿದೆ.
ಒಟ್ಟು 26 ಮಂದಿ ಪುತ್ಥಲಪಟ್ಟುವಿನಲ್ಲಿ ಮದುವೆ ಸಮಾರಂಭದಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಅವರು ಪ್ರಯಾಣಿಸುತ್ತಿದ್ದ ಟ್ರ್ಯಾಕ್ಟರ್ ಪಲ್ಟಿ(tractor overturned)ಯಾಗಿದ್ದು, ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಸುರೇಂದ್ರ ರೆಡ್ಡಿ (52 ವರ್ಷ), ವಸಂತಮ್ಮ (50 ವರ್ಷ), ರೆಡ್ಡಮ್ಮ (31 ವರ್ಷ), ತೇಜ (25 ವರ್ಷ), ವಿನೀಶಾ (3 ವರ್ಷ) ಮತ್ತು ದೇಶಿಕಾ (2 ವರ್ಷ) ಎಂದು ಗುರುತಿಸಲಾಗಿದೆ.
tractor overturned: ಓರ್ವನ ಸ್ಥಿತಿ ಗಂಭೀರ
ಘಟನೆಯಲ್ಲಿ ಗಾಯಗೊಂಡಿರುವ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದ್ದು, ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಸದ್ಯ ಚಿತ್ತೂರು ಜಿಲ್ಲಾಸ್ಪತ್ರೆಯಲ್ಲಿ 19 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಓರ್ವನ ಸ್ಥಿತಿ ಗಂಭೀರವಾಗಿದ್ದು, ಉತ್ತಮ ಚಿಕಿತ್ಸೆಗಾಗಿ ತಿರುಪತಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ : Current shock-boy died: ಪಾರಿವಾಳ ಹಿಡಿಯಲು ಹೋಗಿ ಕರೆಂಟ್ ಶಾಕ್: ಮತ್ತೋರ್ವ ಬಾಲಕ ಸಾವು
ಇದನ್ನೂ ಓದಿ : assault on a youth: ವಿಚಾರಣೆಗೆ ಹಾಜರಾಗದ ಎಸ್ ಎ ಶಕ್ತಿವೇಲು ಮತ್ತು ಪೊಲೀಸ್ ನಿರಕ್ಷಕ ಶರಣಗೌಡ ವಿರುದ್ದ ವಾರಂಟ್
ಇದನ್ನೂ ಓದಿ : Suicide Case: ಲಾಡ್ಜ್ ನಲ್ಲಿ ನೇಣಿಗೆ ಶರಣಾದ ಯುವಕ-ಯುವತಿ: ಕಾರಣ ಕೇಳಿದ್ರೆ ಶಾಕ್ ಆಗ್ತೀರಾ
ಇದನ್ನೂ ಓದಿ :Tiger Death: ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಹುಲಿ ಶವ ಪತ್ತೆ; ಸಂರಕ್ಷಿತಾರಣ್ಯದಲ್ಲೇ ನಡೆದುಹೋಯ್ತು ದುರಂತ
ಇದನ್ನೂ ಓದಿ : Accident between 2 vehicles: ಟಾಟಾ ಏಸ್ – ಲಾರಿ ಢಿಕ್ಕಿ : 6 ಸಾವು, 5 ಮಂದಿಗೆ ಗಾಯ
ಜಿಲ್ಲಾಧಿಕಾರಿ ಹಾಗೂ ಚಿತ್ತೂರು ಪೊಲೀಸ್ ವರಿಷ್ಠಾಧಿಕಾರಿಗಳು ಚಿತ್ತೂರಿನ ಆಸ್ಪತ್ರೆಗೆ ಭೇಟಿ ನೀಡಿ, ಅಗತ್ಯ ವೈದ್ಯಕೀಯ ಸೇವೆ ನೀಡುವಂತೆ ಅಧಿಕಾರಿಗಳಿಗೆ ಆದೇಶಿಸಿದರು.
(tractor overturned) Six people, including a two-year-old girl, were killed and 20 others were injured when a tractor overturned in Lakshmayya village of Putalapattu mandal in Chittoor, Andhra Pradesh on Thursday.