ಸೋಮವಾರ, ಜೂನ್ 16, 2025
HomeSpecial StoryGuava Jam Recipe:ಸೀಬೆ ಹಣ್ಣಿನ ಜಾಮ್‌ ಮನೆಯಲ್ಲಿಯೇ ತಯಾರಿಸಿ : ಇಲ್ಲಿದೆ ಟಿಫ್ಸ್‌

Guava Jam Recipe:ಸೀಬೆ ಹಣ್ಣಿನ ಜಾಮ್‌ ಮನೆಯಲ್ಲಿಯೇ ತಯಾರಿಸಿ : ಇಲ್ಲಿದೆ ಟಿಫ್ಸ್‌

- Advertisement -

(Guava Jam Recipe)ಸೀಬೆ ಹಣ್ಣಿನಲ್ಲಿ ವಿಟಮಿನ್‌ ಇ, ಎ, ಕ್ಯಾಲ್ಸಿಯಂ, ನಾರಿನಾಂಶ, ತಾಮ್ರ, ಕಬ್ಬಿಣ ಅಂಶ, ಪೋಟಾಶಿಯಂ ಅಂಶ ಇರುವುದರಿಂದ ಇದನ್ನು ತಿಂದರೆ ಹಲವು ಆರೋಗ್ಯದ ಪ್ರಯೋಜನವನ್ನು ಪಡೆಯಬಹುದು. ಸೇಬೆ ಹಣ್ಣು ತುಂಬಾ ಅಗ್ಗವಾಗಿರುವುದರಿಂದ ಸುಲಭವಾಗಿ ಕೊಳ್ಳಬಹುದು. ಸೀಬೆ ಹಣ್ಣಿನ ಜ್ಯೂಸ್‌ ಮಾಡಿ ಕುಡಿಯುವುದರಿಂದ ಆರೋಗ್ಯವನ್ನು ಕಾಪಾಡುತ್ತದೆ. ಸೀಬೆ ಹಣ್ಣಿನ ಜಾಮ್‌ ಅನ್ನು ಮನೆಯಲ್ಲಿಯೇ ಮಾಡಿಟ್ಟುಕೊಂಡರೆ ಏಲ್ಲರೂ ಇಷ್ಟ ಪಟ್ಟು ತಿನ್ನುತ್ತಾರೆ. ಹೊರಗಡೆ ಖರೀದಿಸಿದ ಜಾಮ್‌ ತಿಂದು ಆರೋಗ್ಯವನ್ನು ಕೆಡಿಸಿಕೊಳ್ಳುವ ಬದಲು ಮನೆಯಲ್ಲಿಯೇ ಸೀಬೆ ಹಣ್ಣಿನ ಜಾಮ್‌ ತಯಾರಿಸಬಹುದು. ಸೀಬೆ ಹಣ್ಣಿನ ಜಾಮ್‌ ಹೇಗೆ ಮಾಡುವುದು ಎನ್ನುವ ಮಾಹಿತಿಯ ಕುರಿತು ತಿಳಿಯೋಣ.

(Guava Jam Recipe)ಬೇಕಾಗುವ ಸಾಮಾಗ್ರಿಗಳು:
ಪೇರಳೆ ಹಣ್ಣು (ಸೀಬೆ ಹಣ್ಣು)
ಕಂದು ಸಕ್ಕರೆ
ನಿಂಬೆ ರಸ
ನೈಸರ್ಗಿಕ ಪುಡ್‌ ಕಲರ್

ಮಾಡುವ ವಿಧಾನ
ಮೊದಲಿಗೆ ಪೇರಳೆಹಣ್ಣನ್ನು ಕತ್ತರಿಸಿಕೊಂಡು ಪಾತ್ರೆಯಲ್ಲಿ ನೀರು ಇಟ್ಟುಕೊಂಡು ಕತ್ತರಿಸಿಕೊಂಡ ಪೇರಳೆ ಹಣ್ಣು ಹಾಕಿ ಬೇಯಿಸಿಕೊಳ್ಳಬೇಕು. ನಂತರ ಪೇರಳೆಹಣ್ಣನ್ನು ಜರಡಿಯಲ್ಲಿ ಸ್ಮಾಶ್‌ ಮಾಡಿಕೊಂಡು ಸೊಸಿಕೊಳ್ಳಬೇಕು. ಇದನ್ನು ಬಾಣಲೆಗೆ ಹಾಕಿ ಕಂದು ಸಕ್ಕರೆ ಹಾಕಿಕೊಂಡು ಸೌಟನ್ನು ಆಡಿಸಬೇಕು ನಂತರ ಅರ್ಧ ನಿಂಬೆರಸ, ನೈಸರ್ಗಿಕ ಪುಡ್‌ ಕಲರ್‌ ಸೇರಿಸಿ ಮಿಶ್ರಣ ಮಾಡಿಕೊಂಡರೆ ಪೇರಳೆ ಹಣ್ಣಿನ ಜಾಮ್‌ ರೆಡಿ.

ಇದನ್ನೂ ಓದಿ:Semolina Choco Sweet Recipe :ತಟ್ಟನೆ ಮಾಡಬಹುದು ರವೆ ಚಾಕೋ ಸ್ವೀಟ್

ಇದನ್ನೂ ಓದಿ:Christmas Cakes : ಈ ವರ್ಷದ ಕ್ರಿಸ್‌ಮಸ್‌ ಗೆ ಮನೆಯಲ್ಲಿಯೇ ಹೀಗೆ ಕೇಕ್‌ ತಯಾರಿಸಿ

ಪೇರಳೆ ಹಣ್ಣು (ಸೀಬೆ ಹಣ್ಣು)
ಪೇರಳೆ ಹಣ್ಣಿನಲ್ಲಿರುವ ಫೈಬರ್‌ ಅಂಶ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಿ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಮತ್ತು ಕೊಲೆಸ್ಟ್ರಾಲ್‌ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪೇರಳೆ ಹಣ್ಣಿನಲ್ಲಿ ವಿಟಮಿನ್‌ ಸಿ ಅಂಶ ಹೇರಳವಾಗಿ ಇರುವುದರಿಂದ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಪೇರಳೆ ಹಣ್ಣಿನಲ್ಲಿ ಫೈಬರ್‌ ಅಂಶ ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್‌ ಕಡಿಮೆ ಮಾಡುತ್ತದೆ. ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರಲ್ಲಿ ಇದನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.ಪೇರಳೆಹಣ್ಣಿನಲ್ಲಿ ಇರುವ ನಾರಿನ ಅಂಶವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಪೇರಳೆ ಹಣ್ಣಿನಲ್ಲಿ ವಿಟಮಿನ್‌ ಎ ಅಂಶ ಹೆಚ್ಚಾಗಿರುವುದರಿಂದ ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ. ಕಣ್ಣಿನ ಪೊರೆ ಸಮಸ್ಯೆಯನ್ನು ತಡೆಯುತ್ತದೆ. ಅಷ್ಟೇ ಅಲ್ಲದೆ ತೂಕವನ್ನು ಇಳಿಸಿಕೊಳ್ಳಲು ಕೂಡ ಸಹಕಾರಿಯಾಗಿದೆ.

Guava Jam Recipe Homemade guava Jam: Here are the tips

RELATED ARTICLES

Most Popular