ಸೋಮವಾರ, ಜೂನ್ 16, 2025
HomebusinessPrivate CEO for LIC: 66 ವರ್ಷಗಳ ಇತಿಹಾಸದಲ್ಲೇ ಪ್ರಥಮ ಬಾರಿಗೆ ಎಲ್ ಐಸಿಗೆ ಖಾಸಗಿ...

Private CEO for LIC: 66 ವರ್ಷಗಳ ಇತಿಹಾಸದಲ್ಲೇ ಪ್ರಥಮ ಬಾರಿಗೆ ಎಲ್ ಐಸಿಗೆ ಖಾಸಗಿ ಸಿಇಒ ನೇಮಿಸಲು ಕೇಂದ್ರ ಚಿಂತನೆ

- Advertisement -

ನವದೆಹಲಿ: Private CEO for LIC: 66 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಜೀವವಿಮಾ ನಿಗಮ(ಎಲ್‍ಐಸಿ)ವನ್ನು ಆಧುನೀಕರಣಗೊಳಿಸುವ ಪ್ರಯತ್ನಕ್ಕೆ ಸರ್ಕಾರ ಮುಂದಾಗಿದೆ. ಎಲ್‍ಐಸಿಗೆ ಇದೇ ಮೊದಲ ಬಾರಿಗೆ ಖಾಸಗಿ ಕ್ಷೇತ್ರದ ವೃತ್ತಿಪರರನ್ನು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ(ಸಿಇಒ) ಆಗಿ ನೇಮಕ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಇದಕ್ಕೆ ಕಾರಣ ಷೇರು ಮಾರುಕಟ್ಟೆಯಲ್ಲಿ ಎಲ್ ಐಸಿ ಷೇರುಗಳ ನಿರಾಶಾದಾಯಕ ಗಳಿಕೆ ಎನ್ನಲಾಗಿದ್ದು, ಇದನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಎಲ್ ಐಸಿಯನ್ನು ಆಧುನೀಕರಣಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೆಜ್ಜೆ ಇಟ್ಟಿದೆ ಎನ್ನಲಾಗಿದೆ.

ಕೇಂದ್ರ ಸರ್ಕಾರದ ನಿರ್ಧಾರದಂತೆ ಖಾಸಗಿ ಕ್ಷೇತ್ರಕ್ಕೆ ಸಿಇಒ ನೇಮಕ ಮಾಡಿದ್ದಲ್ಲಿ, 41 ಟ್ರಿಲಿಯನ್ ಸ್ವತ್ತು ಹೊಂದಿರುವ ದೇಶದ ಅತಿದೊಡ್ಡ ವಿಮಾ ಸಂಸ್ಥೆಯನ್ನು 66 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಖಾಸಗಿ ಕ್ಷೇತ್ರದ ವ್ಯಕ್ತಿ ಮುನ್ನಡೆಸುವಂತಾಗಲಿದೆ.

ಸರ್ಕಾರಿ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದು, ಎಲ್ ಐಸಿಗೆ ಸಿಇಓ ನೇಮಕಗೊಳಿಸಲು ಅರ್ಹತಾ ಮಾನದಂಡಗಳನ್ನು ವಿಸ್ತರಿಸಲು ಸರ್ಕಾರ ಚಿಂತನೆ ನಡೆಸಿದೆ. ಈ ಮೂಲಕ ಖಾಸಗಿ ಕ್ಷೇತ್ರದ ಅಭ್ಯರ್ಥಿಗಳು ಕೂಡಾ ಎಲ್‍ಐಸಿ ಸಿಇಒ ಹುದ್ದೆಗೆ ಅರ್ಜಿ ಸಲ್ಲಿಸಲು ಅನುವು ಮಾಡಿಕೊಡುವುದು ಸರ್ಕಾರದ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ. ಆದರೆ ಈ ವಿಚಾರಗಳ ಬಗ್ಗೆ ಎಲ್‍ಐಸಿಯ ಮೇಲುಸ್ತುವಾರಿ ವಹಿಸಿರುವ ಹಣಕಾಸು ಸಚಿವಾಲಯ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ: Metro ticket booking: ಇನ್ಮುಂದೆ ಪೇಟಿಎಂ, ಯಾತ್ರಾ ಆಪ್ ಗಳಲ್ಲೂ ಮೆಟ್ರೋ ಟಿಕೆಟ್ ಲಭ್ಯ; ಬಳಸುವ ವಿಧಾನ ಹೇಗೆ..?

ಸದ್ಯ ಎಲ್‍ಐಸಿಯು ಚೇರ್ಮನ್ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿದೆ. 2023ರ ಮಾರ್ಚ್ ಗೆ ಪ್ರಸ್ತುತ ಚೇರ್ಮನ್ ಅವಧಿ ಕೊನೆಗೊಳ್ಳಲಿದೆ. ಅವರ ಅವಧಿ ಕೊನೆಗೊಳ್ಳುತ್ತಿದ್ದಂತೆ ಚೇರ್ಮನ್ ಹುದ್ದೆಯೂ ಅಂತ್ಯಗೊಳ್ಳಲಿದೆ. ಅಂದರೆ ಚೇರ್ಮನ್ ಹುದ್ದೆಯನ್ನೇ ಸರ್ಕಾರ ತೆಗೆದುಹಾಕಲಿದೆ. ಅದಾದ ಬಳಿಕ ಖಾಸಗಿ ಕ್ಷೇತ್ರದ ಖಾಸಗಿ ಸಿಇಓ ನೇಮಕ ಪ್ರಕ್ರಿಯೆ ನಡೆಯಲಿದೆ. ಇದಕ್ಕೆಂದೇ ಎಲ್‍ಐಸಿ ನಿಯಮಗಳಲ್ಲಿ ಕಳೆದ ವರ್ಷವೇ ಕೆಲ ಬದಲಾವಣೆಗಳನ್ನು ತರಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಈ ನಡೆಯಿಂದ ಆಯ್ಕೆಗಳು ಹೆಚ್ಚಾಗುವುದರ ಜೊತೆಗೆ ಷೇರುದಾರರಿಗೆ ಉತ್ತಮ ಸಂದೇಶ ರವಾನೆ ಆಗಲಿದೆ ಎಂದು ಅವರು ತಿಳಿಸಿದ್ದಾರೆ.

ಷೇರು ಮಾರುಕಟ್ಟೆಯಲ್ಲಿ ಪ್ರಸ್ತುತ ಎಲ್‍ಐಸಿ ಷೇರುಗಳು ಉತ್ತಮ ಗಳಿಕೆ ದಾಖಲಿಸದೇ ಇರುವುದು ನಿರಾಸೆಯನ್ನು ತಂದೊಡ್ಡಿದೆ. ಹೀಗಾಗಿ ಹೂಡಿಕೆದಾರರಿಗೆ ಉತ್ತಮ ಗಳಿಕೆ ತಂದುಕೊಡುವ ನಿಟ್ಟಿನಲ್ಲಿ ಉತ್ಪನ್ನ ತಂತ್ರಗಾರಿಕೆಯಲ್ಲಿ ಬದಲಾವಣೆ ಮಾಡುವಂತೆ ಸರ್ಕಾರವು ಇತ್ತೀಚೆಗೆ ಎಲ್‍ಐಸಿಗೆ ಸೂಚನೆಯನ್ನು ನೀಡಿತ್ತು. ಎಲ್‍ಐಸಿಯು 949 ರೂ. ಆರಂಭಿಕ ಮುಖಬೆಲೆಯೊಂದಿಗೆ ಮೇ 17ರಂದು ಷೇರು ವಹಿವಾಟು ಆರಂಭಿಸಿತ್ತು. ಆ ಬಳಿಕ ಅದಕ್ಕಿಂತ ಕಡಿಮೆ ಬೆಲೆಯಲ್ಲೇ ವ್ಯಾಪಾರ ನಡೆಸುತ್ತಿದೆ. ಪ್ರಸ್ತುತ ಎಲ್ ಐಸಿ ಷೇರಿನ ಮುಖಬೆಲೆ 662 ರೂ. ಆಸುಪಾಸಿನಲ್ಲಿದೆ.

ಇದನ್ನೂ ಓದಿ: Bhupendra Patel: ಎರಡನೇ ಬಾರಿಗೆ ಗುಜರಾತ್‌ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಭೂಪೇಂದ್ರ ಪಟೇಲ್

Private CEO for LIC: source says Central decides to appoint a private CEO for LIC for the first time in its 66-year history

RELATED ARTICLES

Most Popular