ಬುಧವಾರ, ಏಪ್ರಿಲ್ 30, 2025
HomeCrimeAttack on boys: ಬೈಂದೂರು ಯುವಕರ ಮೇಲಿನ ಹಲ್ಲೆ ಪ್ರಕರಣ: ಸುಪಾರಿ ಕೊಟ್ಟ ಅಂಗಡಿ ಮಾಲೀಕ...

Attack on boys: ಬೈಂದೂರು ಯುವಕರ ಮೇಲಿನ ಹಲ್ಲೆ ಪ್ರಕರಣ: ಸುಪಾರಿ ಕೊಟ್ಟ ಅಂಗಡಿ ಮಾಲೀಕ ಅರೆಸ್ಟ್

- Advertisement -

ಬೆಂಗಳೂರು: (Attack on boys) ಬೆಂಗಳೂರಿನ ಬೇಕರಿಯೊಂದರಲ್ಲಿ ಬೈಂದೂರು ಮೂಲದ ಯುವಕರ ಮೇಲೆ ಹಲ್ಲೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಇದೀಗ ತನಿಖೆ ವೇಳೆ ಈ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದ್ದು, ಪಕ್ಕದ ಬೇಕರಿ ಅಂಗಡಿ ಮಾಲಿಕನೇ ಸುಪಾರಿ ಕೊಟ್ಟು ಈ ಹಲ್ಲೆ ಮಾಡಿಸಿರುವುದು ಎಂದು ತಿಳಿದುಬಂದಿದೆ.

ಹೌದು.! ಕರಾವಳಿ ಭಾಗದಿಂದ ಹೊಟ್ಟೆಪಾಡಿಗಾಗಿ ಬೆಂಗಳೂರಿನಲ್ಲಿ ಬೇಕರಿಯೊಂದನ್ನು ಹಾಕಿಕೊಂಡು ಯುವಕರು ದುಡಿಯುತ್ತಿದ್ದರು. ಈ ಯುವಕರಿಗೆ ಬೇಕರಿಯಲ್ಲಿ ಒಳ್ಳೆಯ ವ್ಯಾಪಾರ ಕೂಡ ಆಗುತ್ತಿತ್ತು. ಇದರಿಂದಲೇ ತಮ್ಮ ಕುಟುಂಬವನ್ನು ನೋಡಿಕೊಳ್ಳುತ್ತಿದ್ದರು. ಬೈಂದೂರಿನ ಈ ಯುವಕರ (Attack on boys) ಬೇಕರಿಯ ಪಕ್ಕವೇ ಇನ್ನೊಂದು ಬೇಕರಿ ಕೂಡ ಇತ್ತು. ಆದರೆ ಬೈಂದೂರು ಯುವಕರಿಗೆ ವ್ಯಾಪಾರ ಹೆಚ್ಚಿಗೆ ಇತ್ತು. ಪಕ್ಕದ ಬೇಕರಿಯವರಿಗೆ ವ್ಯಾಪಾರ ಕಡಿಮೆಯಿತ್ತು. ಇದೇ ಹೊಟ್ಟೆಕಿಚ್ಚಿನಿಂದ ಆ ಪಕ್ಕದ ಬೇಕರಿಯ ಮಾಲಿಕ ಮಂಜುನಾಥ ಎನ್ನುವಾತ ಸ್ಥಳೀಯ ಹುಡುಗರಿಗೆ ಸುಪಾರಿ ಕೊಟ್ಟು ಗಲಾಟೆ ಮಾಡಿಸಿದ್ದಾನೆ. ಸದ್ಯ ಹಲ್ಲೆ ನಡೆಸಿದ ಯುವಕರನ್ನು ಪೊಲೀಸರು ಈಗಾಗಲೇ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಇದೀಗ ಸುಪಾರಿ ಕೊಟ್ಟ ಆರೋಪಿಯನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.

ಬ್ರಹ್ಮಲಿಂಗೇಶ್ವರ ಬೇಕರಿಯೊಂದರಲ್ಲಿ ಬೈಂದೂರಿನ ಯುವಕರು ಕೆಲಸ ಮಾಡುತ್ತಿದ್ದರು. ಈ ವೇಳೆ ನಾಲ್ಕೈದು ಜನರಿದ್ದ ಯುವಕರ ಗುಂಪೊಂದು ಬಂದು ಸಿಗರೇಟ್ ಖರೀದಿಸಿ, ಹಣ ಪಾವತಿಸದೆ ಸುಮ್ಮನಾಗಿದ್ದಾರೆ. ಹಣ ಕೊಡಿ ಎಂದು ಅಂಗಡಿಯಾತ ಕೇಳಿದಾಗ ಗುಂಪಿನಲ್ಲಿದ್ದ ಒಬ್ಬ ವ್ಯಕ್ತಿ ನಿಮ್ಮ ಓನರ್ ಯಾರು? ಎಲ್ಲಿದ್ದಾನೆ ಎಂದು ಕೇಳಿದ್ದಾನೆ. ಇದಕ್ಕೆ ಉತ್ತರವಾಗಿ, ಅಂಗಡಿ ಮಾಲೀಕ ಊರಿನಲ್ಲಿ ಇದ್ದಾನೆ ಎಂದು ಓರ್ವ ಯುವಕ ಹೇಳಿದ್ದಾನೆ. ಈ ವೇಳೆ ಮತ್ತೊಬ್ಬ ಯುವಕ ಏಕಾಏಕಿ ಅಂಗಡಿಯೊಳಗೆ ನುಗ್ಗಿ, ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಅಂಗಡಿಯೊಳಗಿದ್ದ ಇನ್ನೊಬ್ಬ ಯುವಕ, ತಡೆಯಲು ಬಂದಾಗ ಆತನ ಮೇಲೂ ಹಲ್ಲೆ ಮಾಡಿದ್ದಾರೆ.

ಇದನ್ನೂ ಓದಿ : Crime: ಗೆಳೆಯರೊಂದಿಗೆ ಪತ್ನಿಯನ್ನು ಮಲಗಿಸಿ ವೀಡಿಯೋ ಮಾಡುತ್ತಿದ್ದ ಗಂಡನಿಗೆ ನಾದಿನಿಯೂ ಬೇಕಂತೆ !

ಇದನ್ನೂ ಓದಿ : Karnataka weather report: ಕರ್ನಾಟಕದಲ್ಲಿ 5 ದಿನ ಮಳೆ: ತಮಿಳುನಾಡಿನಲ್ಲಿ ರೆಡ್‌ ಅಲರ್ಟ್‌ ಘೋಷಣೆ

ಇಷ್ಟಾಗುತ್ತಿದ್ದಂತೆ ಯುವಕರ ಗುಂಪು ಅಂಗಡಿಯೊಳಗೆ ನುಗ್ಗಿ, ಅಲ್ಲಿದ್ದ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ, ಹೆಲ್ಮೆಟ್​ ಮುಂತಾದ ವಸ್ತುಗಳಿಂದ ಥಳಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದೆ ಅಂಗಡಿಯಲ್ಲಿದ್ದ ಅಮಾಯಕ ಹುಡುಗರ ಮುಖ ಹಾಗೂ ಹೊಟ್ಟೆಯ ಭಾಗಕ್ಕೆ ಹಲ್ಲೆ ಮಾಡಿದ್ದಾರೆ. ಪುಡಿಗೇಡಿಗಳು ಯುವಕರ ಮೇಲೆ ಹಲ್ಲೆ ನಡೆಸಿದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.

(Attack on boys) There was an attack on youth from Byndur in a bakery in Bangalore. Police arrested three accused in connection with this case. Now, during the investigation, a twist has been found in this case and it is known that the owner of the neighboring bakery shop gave betel nuts and carried out the attack.

RELATED ARTICLES

Most Popular