ಮಂಗಳವಾರ, ಏಪ್ರಿಲ್ 29, 2025
HomeSportsCricketArjun Tendulkar : ಗೋವಾ ತಂಡಕ್ಕೆ ಕನ್ನಡಿಗ ಕೋಚ್, ರಣಜಿ ತಂಡದಲ್ಲಿ ಸಚಿನ್ ಪುತ್ರ ಅರ್ಜುನ್...

Arjun Tendulkar : ಗೋವಾ ತಂಡಕ್ಕೆ ಕನ್ನಡಿಗ ಕೋಚ್, ರಣಜಿ ತಂಡದಲ್ಲಿ ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್‌ಗೆ ಸ್ಥಾನ

- Advertisement -

ಪಣಜಿ: ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಟೂರ್ನಿಗೆ (Ranji Trophy 2022-23) ಪ್ರಕಟಿಸಲಾಗಿರುವ ಗೋವಾ ತಂಡದಲ್ಲಿ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ (Arjun Tendulkar) ಸ್ಥಾನ ಪಡೆದಿದ್ದಾರೆ. ಕರ್ನಾಟಕ ತಂಡದ ಮಾಜಿ ಕೋಚ್ ಮನ್ಸೂರ್ ಅಲಿ ಖಾನ್ (Mansur Ali Khan) ಗೋವಾ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಡಿಸೆಂಬರ್ 13ರಂದು ಪೊರ್ವರಿಮ್’ನಲ್ಲಿ ಆರಂಭವಾಗಲಿರುವ ರಣಜಿ ಟ್ರೋಫಿ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಗೋವಾ ತಂಡ, ರಾಜಸ್ಥಾನ ತಂಡವನ್ನು ಎದುರಿಸಲಿದೆ. 23 ವರ್ಷದ ಅರ್ಜುನ್ ತೆಂಡೂಲ್ಕರ್ ಇನ್ನಷ್ಟೇ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಬೇಕಿದೆ.

ಮುಂಬೈನಿಂದ ಗೋವಾ ತಂಡಕ್ಕೆ ವಲಸೆ ಬಂದಿರುವ ಸಚಿನ್ ಪುತ್ರ (Sachin Tendulkar son) ಅರ್ಜುನ್ ಈ ಬಾರಿಯ ಸೈಯದ್ ಮುಷ್ತಾಕ್ ಅಲಿ ಟಿ20 ಮತ್ತು ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಗೋವಾ ಪರ ಆಡಿದ್ದರು. ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ 7 ಪಂದ್ಯಗಳಿಂದ 10 ವಿಕೆಟ್ ಪಡೆದಿದ್ದ ಅರ್ಜುನ್ ತೆಂಡೂಲ್ಕರ್, ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ 7 ಪಂದ್ಯಗಳಿಂದ 8 ವಿಕೆಟ್ ಪಡೆದಿದ್ದರು.

ಮುಂಬೈ ತಂಡದಲ್ಲಿ ಅವಕಾಶದ ಕೊರತೆಯಿಂದ ಗೋವಾ ತಂಡಕ್ಕೆ ವಲಸೆ ಬಂದಿರುವ 23 ವರ್ಷದ ಅರ್ಜುನ್ ತೆಂಡೂಲ್ಕರ್, ಇದು ತಮ್ಮ ಕ್ರಿಕೆಟ್ ಕರಿಯರ್’ಗೆ ತಿರುವು ನೀಡುವ ನಿರೀಕ್ಷೆಯಲ್ಲಿದ್ದಾರೆ. ಎಡಗೈ ಮಧ್ಯಮ ವೇಗದ ಬೌಲರ್ ಆಗಿರುವ ಅರ್ಜುನ್ ತೆಂಡೂಲ್ಕರ್, ಎಡಗೈ ಬ್ಯಾಟ್ಸ್’ಮನ್ ಕೂಡ ಹೌದು.

ರಣಜಿ ಟ್ರೋಫಿ ಟೂರ್ನಿಗೆ ಗೋವಾ ತಂಡ:
ದರ್ಶನ್ ಮಿಸಾಲ್ (ನಾಯಕ), ಸಿದ್ದೇಶ್ ಲಾಡ್ (ಉಪನಾಯಕ), ಅಮೋಘ್ ದೇಸಾಯಿ, ಸುಮಿರನ್ ಅಮೋನ್ಕರ್, ಇಶಾನ್ ಗಾಡೇಕರ್, ಸುಯಾಶ್ ಪ್ರಭುದೇಸಾಯಿ, ಸ್ನೇಹಲ್ ಕೌತನ್ಕರ್, ಸಮರ್ ದುಭಾಷಿ (ವಿಕೆಟ್ ಕೀಪರ್), ಏಕನಾಥ್ ಕೇರ್ಕರ್ (ವಿಕೆಟ್ ಕೀಪರ್), ಲಕ್ಷಯ್ ಗಾರ್ಗ್, ಅರ್ಜುನ್ ತೆಂಡೂಲ್ಕರ್, ರುತ್ವಿಕ್ ನಾಯ್ಕ್, ಫೆಲಿಕ್ಸ್ ಅಮೆಮಾವೊ, ಮೋಹಿತ್ ರೇಡ್ಕರ್, ದೀಪರಾಜ್ ಗಾಂವ್ಕರ್, ಶುಭಮ್ ದೇಸಾಯಿ.

ಇದನ್ನೂ ಓದಿ : India women beat Australia : ಆಸೀಸ್ ವನಿತೆಯರ ಗರ್ವಭಂಗ.. 45 ಸಾವಿರ ಪ್ರೇಕ್ಷಕರ ಮುಂದೆ ಟೀಮ್ ಇಂಡಿಯಾಗೆ ಸೂಪರ್ ಜಯ

ಇದನ್ನೂ ಓದಿ : Virat Kohli : 7.44 ಪಂದ್ಯಕ್ಕೊಂದು ಸೆಂಚುರಿ, ಶತಕ ಬೇಟೆಯಲ್ಲೂ ಸಚಿನ್ ತೆಂಡೂಲ್ಕರ್‌ಗಿಂತ ಕಿಂಗ್ ಕೊಹ್ಲಿಯೇ ಬೆಸ್ಟ್

ಇಂಗ್ಲಿಷ್‌ ಸುದ್ದಿಗಾಗಿ : News Next English ಫಾಲೋ ಮಾಡಿ

Sachin Tendulkar son Arjun Tendulkar in Goa Ranji team Ranji Trophy 2022-23

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular