ಮಂಗಳವಾರ, ಜೂನ್ 17, 2025
HomebusinessAmazon India Smartphone Upgrade Day Sale ನಲ್ಲಿ ಈ ಸ್ಮಾರ್ಟ್‌ಫೋನ್‌ಗಳ ಮೇಲೆ ಸಿಗಲಿದೆ ಭರ್ಜರಿ...

Amazon India Smartphone Upgrade Day Sale ನಲ್ಲಿ ಈ ಸ್ಮಾರ್ಟ್‌ಫೋನ್‌ಗಳ ಮೇಲೆ ಸಿಗಲಿದೆ ಭರ್ಜರಿ ಡಿಸ್ಕೌಂಟ್‌…

- Advertisement -

ಅಮೆಜಾನ್‌ ಇಂಡಿಯಾ (Amazon India) ಸ್ಮಾರ್ಟ್‌ಫೋನ್‌ ಅಪ್‌ಗ್ರೇಡ್‌ ಡೇ ಸೇಲ್‌ (Amazon India Smartphone Upgrade Day Sale ) ನಲ್ಲಿ ಬ್ರಾಂಡೆಡ್‌ ಸ್ಮಾರ್ಟ್‌ಫೋನ್‌ (Branded Smartphones) ಮತ್ತು ಅದರ ಪರಿಕರಗಳ ಮೇಲೆ ಡೀಲ್‌ ಮತ್ತು ರಿಯಾಯಿತಗಳನ್ನು ಘೋಷಿಸಿದೆ. ಈ ಸೇಲ್‌ನಲ್ಲಿ ಶಿಯೋಮಿ, iQOO, ರಿಯಲ್‌ಮಿ, ಟಕ್ನೊ, ಓಪ್ಪೋ ಮತ್ತು ಲಾವಾ ಬ್ರಾಂಡ್‌ನ ಸ್ಮಾರ್ಟ್‌ಫೋನ್‌ಗಳಿವೆ. ಈ ಈವೆಂಟ್‌ನಲ್ಲಿ ರೆಡ್‌ಮಿ A1, iQOO Z6 ಲೈಟ್‌, ರೆಡ್ಮಿ 11 ಪ್ರೈಮ್‌ 5ಜಿ, ಟೆಕ್ನೊ ಸ್ಪಾರ್ಕ್‌ 9, ಒಪ್ಪೋ F21s Pro 5, ರೆಡ್ಮಿ ನೋಟ್‌ 11 ಮತ್ತು ರಿಯಲ್‌ಮಿ ನಾರ್ಜೊ 50i ಸ್ಮಾರ್ಟ್‌ಫೋನ್‌ಗಳಿವೆ. ಈ ರಿಯಾಯಿತಿ ಮಾರಾಟವು ಡಿಸೆಂಬರ್‌ 14, 2022 ವರೆಗೆ ನಡೆಯಲಿದೆ.

ಯಾವ ಸ್ಮಾರ್ಟ್‌ಫೋನ್‌ಗೆ ಎಷ್ಟು ಡಿಸ್ಕೌಂಟ್‌ :

ಶಿಯೋಮಿ:
ಶಿಯೋಮಿ ಕಂಪನಿಯ ಸ್ಮಾರ್ಟ್‌ಫೋನ್‌ಗಳ ಮೇಲೆ ಹೆಚ್ಚುವರಿ ಬ್ಯಾಂಕ್‌ ಕೊಡುಗೆಗಳು ಲಭ್ಯವಿರುತ್ತದೆ. ಅಪ್‌ಗ್ರೇಡ್‌ ಡೇ ಸೇಲ್‌ನಲ್ಲಿ ರೆಡ್ಮಿ A1 5,579 ರೂ. ಕ್ಕೆ, ರೆಡ್ಮಿ 10A ರೂ. 7,469 ಕ್ಕೆ, ರೆಡ್ಮಿ 11 Prime 5G 11,999 ರೂ. ಗಳಿಗೆ ಮತ್ತು ರೆಡ್ಮಿ ನೋಟ್‌ 11 10,999 ರೂ. ಕ್ಕೆ ಲಭ್ಯವಾಗಲಿದೆ.

iQOO:
iQOO ಸ್ಮಾರ್ಟ್‌ಫೋನ್‌ಗಳು ಬ್ಯಾಂಕ್‌ ಮತ್ತುEMI ಆಯ್ಕೆಗಳಲ್ಲಿ ಕೊಡುಗೆಗಳನ್ನು ಪಡೆದುಕೊಂಡಿದೆ. iQOO ನಿಯೊ 6 ಫೋನ್‌ 26,999 ರೂ. ಗೆ ಲಭ್ಯವಿರುತ್ತದೆ. ಇದಕ್ಕೆ 3 ಮತ್ತು 6 ತಿಂಗಳುಗಳ ನೋ–ಕಾಸ್ಟ್‌ EMI ಗಳನ್ನು ನೀಡಲಾಗಿದೆ. iQOO Z6 ಪ್ರೋ ಮತ್ತು iQOO Z6 ಲೈಟ್‌ ಸ್ಮಾರ್ಟ್‌ಫೋನ್‌ಗಳು ಕ್ರಮವಾಗಿ 19,999 ರೂ. ಮತ್ತು 12,499 ರೂ. ಗಳಿಗೆ ಲಭ್ಯವಿರತ್ತದೆ.

ಟೆಕ್ನೊ:
ಸ್ಮಾರ್ಟ್‌ಫೋನ್ ಅಪ್‌ಗ್ರೇಡ್ ಡೇ ಸೇಲ್‌ನಲ್ಲಿ ಗ್ರಾಹಕರು ಟೆಕ್ನೊ ಸ್ಮಾರ್ಟ್‌ಫೋನ್‌ಗಳ ಖರೀದಿಯ ಮೇಲೆ ಆಫರ್‌ಗಳನ್ನು ಪಡೆಯಬಹುದಾಗಿದೆ. ಟೆಕ್ನೊ ಪಾಪ್ 6 ಪ್ರೊ 5,579 ರೂ. ಕ್ಕೆ ಮತ್ತು ಟೆಕ್ನೊ ಸ್ಪಾರ್ಕ್ 9 ಮೊಬೈಲ್‌ 7,649 ರೂ. ಗಳಿಗೆ ಲಭ್ಯವಿರುತ್ತದೆ. ಟೆಕ್ನೊ ಪೊವಾ 5G ಮತ್ತು ಟೆಕ್ನೊ Camon 19 Mondrian ಫೋನ್‌ಗಳು ಕ್ರಮವಾಗಿ 14,299 ರೂ. ಮತ್ತು16,999 ರೂ. ಗಳಿಗೆ ಲಭ್ಯವಿರುತ್ತದೆ.

ಒಪ್ಪೋ :
ಈ ಸೇಲ್‌ನಲ್ಲಿ ಒಪ್ಪೋ ನ ಇತ್ತೀಚಿನ ಮಾದರಿಯ ಸ್ಮಾರ್ಟ್‌ಫೋನ್‌ಗಳು ರಿಯಾಯಿತಿಗಳನ್ನು ಪಡೆದುಕೊಂಡಿವೆ.ಈ ಫೋನ್‌ಗಳ ಖರೀದಿಯಲ್ಲಿ EMI ಆಯ್ಕೆಗಳು ಇವೆ. ಒಪ್ಪೋ F21s Pro 5G ಫೋನ್‌ 24,499 ರೂ. ಕ್ಕೆ ಲಭ್ಯವಿರುತ್ತದೆ. ಮತ್ತು ಇದಕ್ಕೆ 6 ತಿಂಗಳುಗಳ ನೋ ಕಾಸ್ಟ್ EMI ಕೊಡುಗೆಯೂ ಇದೆ. ಗ್ರಾಹಕರು 3,000 ರೂಪಾಯಿಗಳ ವಿನಿಮಯ ಬೋನಸ್‌ ಕೊಡುಗೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಒಪ್ಪೋ A76 ಮತ್ತು ಒಪ್ಪೋ A77 ಗಳು ಕ್ರಮವಾಗಿ 15,490 ರೂ. ಮತ್ತು 16,999 ರೂ. ಗಳಲ್ಲಿ ಲಭ್ಯವಿರುತ್ತವೆ.

ರಿಯಲ್‌ಮಿ :
ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳುಲ್ಲಿ ನಾರ್ಜೊ 50i ಅನ್ನು 5,499 ರೂ. ಗಳಿಗೆ ಮತ್ತು ನಾರ್ಜೊ 50A ಪ್ರೈಮ್ ಅನ್ನು 8,999 ರೂ. ಗೆ ಖರೀದಿಸಬಹುದಾಗಿದೆ. ಎರಡೂ ಫೋನ್‌ಗಳು 5000 mAh ಮೆಗಾ ಬ್ಯಾಟರಿ ಮತ್ತು ಶಕ್ತಿಯುತ ಪ್ರೊಸೆಸರ್‌ನಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತವೆ.

ಇದನ್ನೂ ಓದಿ : Twitter server down: ದೇಶಾದ್ಯಂತ ಟ್ವಿಟರ್ ಸರ್ವರ್ ಡೌನ್: ಪೇಜ್ ಎರರ್ ನಿಂದ ತೊಂದರೆ ಅನುಭವಿಸಿದ ಸಾವಿರಾರು ಬಳಕೆದಾರರು

ಇದನ್ನೂ ಓದಿ : 2023 BMW S1000RR ಭಾರತದಲ್ಲಿ ಬಿಡುಗಡೆ; ಈ ಸ್ಪೋರ್ಟ್ಸ್‌ ಬೈಕ್‌ನ ಬೆಲೆ ಎಷ್ಟು ಗೊತ್ತಾ…

(Amazon India Smartphone Upgrade Day Sale these phones get a big discount)

RELATED ARTICLES

Most Popular