ಬುಧವಾರ, ಜೂನ್ 18, 2025
HomeCinemaGandasi Nagaraj passed away : ಖ್ಯಾತ ಹಾಸ್ಯನಟ ಗಂಡಸಿ ನಾಗರಾಜ್‌ ವಿಧಿವಶ : ಕಂಬನಿ...

Gandasi Nagaraj passed away : ಖ್ಯಾತ ಹಾಸ್ಯನಟ ಗಂಡಸಿ ನಾಗರಾಜ್‌ ವಿಧಿವಶ : ಕಂಬನಿ ಮಿಡಿದ ಚಿತ್ರರಂಗ

- Advertisement -

ಸ್ಯಾಂಡಲ್‌ವುಡ್‌ನಲ್ಲಿ ಹಲವು ವರ್ಷಗಳಿಂದ ವಸ್ತ್ರಾಲಂಕಾರ ಕಲಾವಿದ ಹಾಗೂ ನಟನಾಗಿ ಕಾರ್ಯನಿರ್ವಹಿಸಿದ ಗಂಡಸಿ ನಾಗರಾಜ್‌ (Gandasi Nagaraj passed away) ಇಹಲೋಕವನ್ನು ತ್ಯಜಿಸಿದ್ದಾರೆ. ಹಿರಿಯ ನಟ ಸಾವಿನ ಸುದ್ದಿ ತಿಳಿದ ಸಿನಿ ಗಣ್ಯರು ಸಂತಾಪವನ್ನು ಸೂಚಿಸಿದ್ದಾರೆ.

ನಟ ಹಾಗೂ ವಸ್ತ್ರಾಲಂಕಾರ ಗಂಡಸಿ ನಾಗರಾಜ್‌ ಡಿಸೆಂಬರ್‌ 11ರಂದು ರಾತ್ರಿ 10.30ಕ್ಕೆ ಕೊನೆಯುಸಿರು ಎಳೆದಿದ್ದಾರೆ. ಮೂಲತಃ ರಂಗಭೂಮಿ ಕಲಾವಿದರಾದ ಗಂಡಸಿ ನಾಗರಾಜ್‌ ಸಿನಿಮಾರಂಗದಲ್ಲಿ ನಟನಾಗುವ ಕನಸನ್ನು ಕಂಡಿದ್ದರು. ಹಾಗಾಗಿ ಮೊದಮೊದಲು ಸಿನಿಮಾದಲ್ಲಿ ಅವಕಾಶ ಸಿಗದೇ ಇದ್ದಾಗ ಟೈಲರಿಂಗ್‌ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ನಂತರ ದಿನಗಳಲ್ಲಿ ಅವರಿಗೆ ಕಾಸ್ಟ್ಯೂಮರ್‌ ಆಗಿ ಸಿನಿಮಾದಲ್ಲಿ ಅವಕಾಶವನ್ನು ಪಡೆದುಕೊಂಡಿದರು.

ನಂತರ ದಿನಗಳಲ್ಲಿ ನಟ ಜಗ್ಗೇಶ್‌ ಅವರಿಗೆ ಆಪ್ತ ವಸ್ತ್ರಾಲಂಕಾರ ಕಲಾವಿದನಾಗಿ ಗುರುತಿಸಿಕೊಂಡು, ಸುಮಾರು 40 ವರ್ಷಗಳ ಕಾಲ ಗಂಡಸಿ ಸಿನಿಮಾರಂಗದಲ್ಲಿ ಕಾಸ್ಟ್ಯೂಮರ್‌ ಆಗಿ ಕಾರ್ಯನಿರ್ವಹಿಸಿದ್ದಾರೆ. ಅಷ್ಟೇ ಅಲ್ಲದೇ ನಟ ಜಗ್ಗೇಶ್‌ ಅವರೊಂದಿಗೆ 35ಕ್ಕೂ ಅಧಿಕ ಸಿನಿಮಾಗಳಲ್ಲಿ ಗಂಡಸಿ ನಾಗರಾಜ್‌ ಕೆಲಸ ಮಾಡಿದ್ದಾರೆ. 57ವರ್ಷದ ಗಂಡಸಿ ನಾಗರಾಜ್‌ ಕಳೆದ ಐದು ವರ್ಷಗಳಿಂದ ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದರು. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಆರೋಗ್ಯ ತೀವ್ರವಾಗಿ ಹದಗೆಟ್ಟಿದ್ದು, ಪದ್ಮನಾಭ ನಗರದ ದೇವೇಗೌಡ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇಂದು ಡಿಸೆಂಬರ್‌ 12 ಮಧ್ಯಾಹ್ನ 3.30ರ ಸುಮಾರಿಗೆ ಬನಶಂಕರಿಯಲ್ಲಿ ಇವರ ಅಂತ್ಯಕ್ರಿಯೆ ನಡೆಯಲಿದೆ.

ಇದನ್ನೂ ಓದಿ : Darshan Controversy: ಮತ್ತೆ ವಿವಾದದ ಸುಳಿಯಲ್ಲಿ ಚಾಲೆಂಜಿಂಗ್ ಸ್ಟಾರ್; ಅದೃಷ್ಟ ದೇವತೆಗೆ ಅವಮಾನ ಮಾಡಿರುವ ಆರೋಪ ನಿಜನಾ..?

ಇದನ್ನೂ ಓದಿ : Kantara Hindi in Netflix‌ : ನೆಟ್‌ಫ್ಲಿಕ್ಸ್‌ನಲ್ಲಿ “ಕಾಂತಾರ” ವೀಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದು ಯಾಕೆ ಗೊತ್ತಾ ?

ಇದನ್ನೂ ಓದಿ : Just Pass Kannada Movie:’ಜಸ್ಟ್ ಪಾಸ್’ ಆಗಲು ಹೊರಟ ನಟ ಶ್ರೀ ಗೆ ಸಿಕ್ಕಳು ಹೀರೋಯಿನ್ – ಡಿಸೆಂಬರ್ 14ಕ್ಕೆ ಸೆಟ್ಟೇರಲಿದೆ ಸಿನಿಮಾ

ಕಳೆದ ಕೋವಿಡ್‌ನಲ್ಲಿ ಗಂಡಸಿ ನಾಗರಾಜ್‌ ಮಗಳು ಮೃತಪಟ್ಟಿದ್ದಾರೆ. ಇನ್ನೂ ಇವರ ಪುತ್ರ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಗಂಡಸಿ ನಾಗರಾಜ್‌ ಅವರು ತರ್ಲೆ ನನ್ನ ಮಗ, ಸರ್ವರ್‌ ಸೋಮಣ್ಣ, ಸೂಪರ್‌ ನನ್ನ ಮಗ, ಭಂಡ ನನ್ನ ಗಂಡ, ಗುಂಡನ ಮದುವೆ, ರಾಯರ ಮಗ, ಹಬ್ಬ, ಶ್ರೀಮಂಜುನಾಥ, ಮದುವೆ, ಮಾತಾಡ್‌ ಮಾತಾಡು ಮಲ್ಲಿಗೆ, ಪರ್ವ, ರಾಜಾಹುಲಿ, ಶಿಕಾರಿ, ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಕಾಸ್ಟ್ಯೂಮ್‌ ಡಿಸೈನರ್‌ ಆಗಿ ಕೆಲಸ ಮಾಡಿದ್ದಾರೆ.

Famous comedian Gandasi Nagaraj passed away: Kambani Midida cinema

RELATED ARTICLES

Most Popular