ಭಾನುವಾರ, ಏಪ್ರಿಲ್ 27, 2025
HomeCrimeCyber Crime: ಅಪ್ಪನ 2 ಲಕ್ಷ ರೂ. ಸಾಲ ತೀರಿಸಲು ಮಗಳು ತೆಗೆದುಕೊಂಡಿದ್ದು 'ಆ' ಒಂದು...

Cyber Crime: ಅಪ್ಪನ 2 ಲಕ್ಷ ರೂ. ಸಾಲ ತೀರಿಸಲು ಮಗಳು ತೆಗೆದುಕೊಂಡಿದ್ದು ‘ಆ’ ಒಂದು ದಿಟ್ಟ ನಿರ್ಧಾರ; ಆಮೇಲೆ ಏನಾಯ್ತು..?

- Advertisement -

ಆಂಧ್ರಪ್ರದೇಶ: Cyber Crime: ಈಗಿನ ದಿನಗಳಲ್ಲಿ ಹಣದ ವಿಚಾರದಲ್ಲಿ ನಂಬಿ ಮೋಸ ಹೋಗುವವರೇ ಹೆಚ್ಚು. ಅನಕ್ಷರಸ್ತರಾದ್ರೆ ಅವರು ಮುಗ್ಧರು ಅಂತ ಹೇಳಬಹುದು. ಆದರೆ ನಾಲ್ಕಕ್ಷರ ಕಲಿತ ವಿದ್ಯಾವಂತರೇ ಮೋಸ ಹೋದರೆ ಹೇಗೆ..? ಇಂಥದ್ದೇ ಘಟನೆಗೆ ಸಾಕ್ಷಿಯಾಗಿದೆ ನರ್ಸಿಂಗ್ ವಿದ್ಯಾರ್ಥಿನಿ ಪ್ರಕರಣ. ತನ್ನ ಅಪ್ಪನ ಸಾಲ ತೀರಿಸಲು ಕಿಡ್ನಿ ಮಾರಲು ಮುಂದಾದ ಮಗಳೊಬ್ಬಳು 2 ವಂಚಕರ ಬಲೆಗೆ ಸಿಲುಕಿ 2 ಲಕ್ಷ ರೂ. ಬದಲಿಗೆ 16 ಲಕ್ಷ ರೂ. ಕಳೆದುಕೊಂಡಿದ್ದಾಳೆ. ಈ ಘಟನೆ ನಡೆದಿರುವುದು ಹೈದರಾಬಾದ್ ನ ಗುಂಟೂರಿನಲ್ಲಿ.

ಹೈದರಾಬಾದ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ ಗುಂಟೂರು ಮೂಲದ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳು ವಂಚಕರು ಬೀಸಿದ ಜಾಲಕ್ಕೆ ಬಿದ್ದು ಲಕ್ಷ ಲಕ್ಷ ಹಣ ಕಳೆದುಕೊಂಡಿದ್ದಾಳೆ. ಆಕೆ ತನ್ನ ಅಪ್ಪನ ಬ್ಯಾಂಕ್ ಖಾತೆಯಿಂದ 2 ಲಕ್ಷ ರೂ. ತೆಗೆದುಕೊಂಡಿದ್ದಳು. ಅದನ್ನು ಮರುಪಾವತಿಸಲು ತನ್ನ ಕಿಡ್ನಿ ಮಾರಲು ಮುಂದಾಗಿದ್ದಾಳೆ. ಆದರೆ 2 ಲಕ್ಷ ರೂ. ಬದಲಿಗೆ 16 ಲಕ್ಷ ರೂ. ಹಣ ವಂಚಕರ ಪಾಲಾಗಿದೆ.

ಇದನ್ನೂ ಓದಿ: Good News soldiers : ಸೈನಿಕರು, ಮಾಜಿ ಸೈನಿಕರಿಗೆ ತ್ವರಿತ ಭೂಮಿ, ನಿವೇಶನ ತುರ್ತು ಮಂಜೂರಿಗೆ ಸರಕಾರದ ಆದೇಶ

ಅಸಲಿಗೆ ನಡೆದದ್ದಿಷ್ಟು:
ವಿದ್ಯಾರ್ಥಿನಿ ಕಿಡ್ನಿ ಮಾರಲು ಮುಂದಾದಾಗ ಕೆಲವರು ಆಕೆಗೆ 3 ಕೋಟಿ ನೀಡುವುದಾಗಿ ಆಫರ್ ನೀಡಿದ್ದಾರೆ. ಆದರೆ ಅದಕ್ಕೂ ಮುನ್ನ ತೆರಿಗೆ ಹಾಗೂ ಪೊಲೀಸ್ ವೆರಿಫಿಕೇಶನ್ ಗಾಗಿ 16 ಲಕ್ಷ ರೂ. ಪಾವತಿ ಮಾಡಬೇಕು ಎಂದಿದ್ದಾರೆ. ಆಕೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರವೀಣ್ ರಾಜ್ ಎಂಬುವವರ ಪರಿಚಯವಾಗಿದೆ. ಆತ ಕಿಡ್ನಿ ಆಪರೇಷನ್ ಗೂ ಮುನ್ನ ಶೇ.50ರಷ್ಟು ಹಣ ನೀಡುತ್ತೇವೆ. ಆಪರೇಷನ್ ಮುಗಿದ ಬಳಿಕ ಉಳಿದ ಹಣವನ್ನು ನೀಡುವುದಾಗಿ ಹೇಳಿದ್ದಾನೆ. ಇದನ್ನು ನಂಬಿದ ವಿದ್ಯಾರ್ಥಿನಿ ಹಣ ಪಾವತಿ ಮಾಡಲೆಂದೇ ಚೆನ್ನೈನ ಸಿಟಿ ಬ್ಯಾಂಕ್ ನಲ್ಲಿ ಖಾತೆ ತೆರೆದು ಕಷ್ಟಪಟ್ಟು ಹಣ ಹೊಂದಿಸಿ ಸೈಬರ್ ವಂಚಕರಿಗೆ ಹೊಸ ಖಾತೆ ಮೂಲಕ 16 ಲಕ್ಷ ರೂ. ನೀಡಿದ್ದಾಳೆ. ಅದಾದ ಕೆಲ ದಿನದಲ್ಲಿ ಆಕೆ ವಂಚಕರ ಬಳಿ 16 ಲಕ್ಷ ರೂ. ಹಣ ಹಿಂದಿರುಗಿಸುವಂತೆ ಕೇಳಿದ್ದಾಳೆ. ಅದಕ್ಕೆ ಅವರು ದೆಹಲಿಗೆ ಹೋಗಿ ಹಣ ಸಂಗ್ರಹಿಸುವಂತೆ ವಿಳಾಸವೊಂದನ್ನು ನೀಡಿದ್ದಾರೆ. ಅದರಂತೆ ಆಕೆ ದೆಹಲಿಗೆ ತೆರಳಿ ಆ ವಿಳಾಸಕ್ಕೆ ತಲುಪಿದಾಗ ಅದು ನಕಲಿ ವಿಳಾಸ ಅನ್ನೋದು ತಿಳಿದುಬಂದಿದೆ. ಈ ಸಂಬಂಧ ಆಕೆ ಗುಂಟೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ವಿದ್ಯಾರ್ಥಿನಿ ತಂದೆ, ಮಗಳಿಗೆ ನಾನು ನನ್ನ ಒಂದು ಎಟಿಎಂ ಕಾರ್ಡ್ ನೀಡಿದ್ದೆ. ಆ ಕಾರ್ಡ್‍ನಿಂದ ಆಕೆ ನವೆಂಬರ್ ನಲ್ಲಿ 2 ಲಕ್ಷ ರೂ. ಹಣ ತೆಗೆದಿದ್ದಳು. ಹೀಗಾಗಿ ಆಕೆಗೆ ಮನೆಗೆ ಬರಲು ಹೇಳಿದ್ದೆ. ಆದರೆ ಹೈದರಾಬಾದ್ ನಲ್ಲಿ ಹಾಸ್ಟೆಲ್ ನಲ್ಲಿದ್ದ ಮಗಳು ಮನೆಗೆ ಬಾರದೇ ದೆಹಲಿಗೆ ಹೋಗಿದ್ದಾಳೆ ಎಂದು ಹೇಳಿದ್ದಾರೆ. ಆದರೆ ಅಸಲಿ ವಿಷಯ ಏನಂದ್ರೆ ಪೊಲೀಸರು ಆಕೆಯನ್ನು ಎನ್ ಟಿ ಆರ್ ಜಿಲ್ಲೆಯ ಜಗ್ಗಯ್ಯಪೇಟೆಯಲ್ಲಿದ್ದ ಆಕೆಯ ಸ್ನೇಹಿತರ ಮನೆಯಲ್ಲಿ ಪತ್ತೆಹಚ್ಚಿದ್ದಾರೆ.

ಇದನ್ನೂ ಓದಿ: Muruga Mutt: ಮುರುಘಾ ಮಠದ ಆಡಳಿತಾಧಿಕಾರಿಯಾಗಿ ನಿವೃತ್ತ IAS ಅಧಿಕಾರಿ ವಸ್ತ್ರದ್ ನೇಮಕಗೊಳಿಸಿ ರಾಜ್ಯ ಸರ್ಕಾರ ಆದೇಶ

Cyber Crime: Andhra student attempts to sell kidney loses 16 lakh to cyber criminals

RELATED ARTICLES

Most Popular