ಬಾಗಲಕೋಟೆ : ವಲ್ಲಬಾಯಿ ಪಟೇಲ್ ಅವರಿಗೆ ಅಂದು ಬಹುಮತವಿತ್ತು. ಆದರೂ ಮಹಾತ್ಮಾ ಗಾಂಧಿ ನೆಹರು ಅವರನ್ನು ಪ್ರಧಾನಿಯನ್ನಾಗಿ ಮಾಡಿದ್ರು. ಮಹಾತ್ಮಾ ಗಾಂಧಿ ಮಾಡಿದ ದೊಡ್ಡ ತಪ್ಪಿನಿಂದ ಒಬ್ಬ ಅಯೋಗ್ಯ ಪ್ರಧಾನಿಯಾದ. ವಿಲಾಸಿ ಜೀವನ ಮಾಡುತ್ತಿದ್ದ ನೆಹರು ಪ್ರಧಾನಿಯಾದ ಎಂದು ನೆಹರು ಬಗ್ಗೆ ಬಸನಗೌಡ ಪಾಟಿಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣದಲ್ಲಿ ಮಾತನಾಡಿದ ಅವರು, ನೆಹರೂಗೆ ಸಿಗರೇಟ್ ಲಂಡನ್ ನಿಂದ ಬರ್ತಿದ್ವು. ಬಟ್ಟೆ ದೋಬಿಗೆ (ಕ್ಲೀನಿಂಗ್) ಲಂಡನ್ ಗೆ ಹೋಗ್ತಿದ್ವು. ಇವರು ಬಡವರ ಬಗ್ಗೆ ಮಾತಾಡ್ತಾರೆ. ಲಾಲ್ ಬಹದ್ದೂರ್ ಶಾಸ್ತ್ರಿ, ಸುಭಾಷ್ ಚಂದ್ರ ಬೋಸ್ ಹೇಗೆ ಸತ್ರು ಇಂದಿಗೂ ಯಾರೂ ಹೇಳ್ತಿಲ್ಲ. ಸದ್ಯ ಎಲ್ಲಿಯಾದರೂ ಕಾಶ್ಮೀರದಲ್ಲಿ ಗುಂಡು ಬಾಂಬು ಹಾರಿದ್ದು ಕೇಳಿರೇನು ? ಭಯೋತ್ಪಾದಕರ ಕಾಟ ಎಲ್ಲ ಬಂದ್ ಆಗಿದೆ. ನಮ್ಮ ರಾಜಕಾರಣಿಗಳೇ ಸೈನಿಕರ ಬಗ್ಗೆ ಪೊಲೀಸರ ಬಗ್ಗೆ ಬಾಯಿಗೆ ಬಂದಂಗೆ ಮಾತಾಡ್ತಾರೆ. ತಿನ್ನೋಕೆ ಕೂಳಿಲ್ಲದವರು ಸೈನ್ಯ ಸೇರ್ತಾರೆ ಅಂತ ಒಬ್ಬ ನಮ್ಮ ಅಯೋಗ್ಯ ರಾಜಕಾರಣಿ ಹೇಳ್ತಾನೆ ಅಂತಾ ಕಾಂಗ್ರೆಸ್ ನಾಯಕರನ್ನು ತರಾಟೆ ತೆಗೆದುಕೊಂಡಿದ್ದಾರೆ.
ಸಿಎಎ ಯಿಂದ ಭಾರತೀಯ ಮುಸಲ್ಮಾನರಿಗೆ ಯಾವುದೇ ತೊಂದರೆಯಿಲ್ಲ. ಖುರ್ಚಿಗಾಗಿ ರಾಜಕಾರಣ ಮಾಡುವವರಿಗೆ ಇದು ತೊಂದರೆಯಾಗಿದೆ. ರೊಹಿಂಗ್ಯಾ ಜನಾಂಗ ನಮ್ಮ ದೇಶದಲ್ಲೇನಿದೆ ಅದು ಬಹಳ ಮಾರಕ. ರೊಹಿಂಗ್ಯಾ ಪರವಾಗಿ ಕಪಿಲ್ ಸಿಬಲ್ ನಂತವರು ವಾದ ಮಾಡ್ತಾರೆ. ಮಂಗಳೂರಿನಲ್ಲಿ ಸತ್ತವರಿಗೆ ಮಮತಾ ಬ್ಯಾನರ್ಜಿ ಐದು ಲಕ್ಷ ಪರಿಹಾರ ಘೋಷಣೆ ಮಾಡಿದ್ದಾಳೆ. ಅಕಿಗೆ ನಮ್ ಕರ್ನಾಟಕದ ಹುಡುಗ ಏನು ಸಂಬಂಧ. ಕೊಲ್ಕತ್ತಾ ಜನರ ಓಟ್ ಗಾಗಿ ನಮ್ಮ ರಾಜ್ಯದವರಿಗೆ ಪರಿಹಾರ ಘೋಷಣೆ ಮಾಡಿದ್ದಾಳೆ ಎಂದು ಆರೋಪಿಸಿದ್ದಾರೆ. ಇನ್ನು ಸಿದ್ದರಾಮಯ್ಯ ಪ್ರಾಣ ಹೋದರೂ ಪರವಾಗಿಲ್ಲ ಮಂಗಳೂರಿಗೆ ಹೋಗುತ್ತೇನೆ ಅಂದ. ಪ್ರವಾಹ ಬಂದಾಗ ಬಾದಾಮಿಗೆ ಬರಬೇಕಿತ್ತ ಎಲ್ಲಿ ಮಲಗಿದ್ದೆ. ಕಣ್ಣು ಆಪರೇಷನ್ ಆಗಿದೆ ಅಂದ ಅಂತ ಅಣಕ ಮಾಡಿ ತೋರಿಸಿದರು. ಮಂಗಳೂರಿಗೆ ಹೋಗುವಾಗಲೂ ಆಪರೇಷನ್ ಆಗಿತ್ತಲ್ವಾ ಎಂದು ವ್ಯಂಗ್ಯವಾಡಿದ್ದಾರೆ.
ನೆಹರು ಅಯೋಗ್ಯ ಪ್ರಧಾನಿ : ಯತ್ನಾಳ್ ವಿವಾದಾತ್ಮಕ ಹೇಳಿಕೆ
- Advertisement -
RELATED ARTICLES