(Actor thunisha sharma) ನಟಿ ತುನಿಷಾ ಶರ್ಮಾ ಅವರು ತಮ್ಮ ಟಿವಿ ಶೋ ಅಲಿ ಬಾಬಾ: ದಸ್ತಾನ್ -ಇ-ಕಾಬೂಲ್ ಸೆಟ್ ನಲ್ಲಿ ಶನಿವಾರ ಆತ್ಮಹತ್ಯೆ ಮಾಡಿಕೊಂಡು ನಿಧನರಾದರು. ಮಗಳ ಸಾವಿನ ವಿರುದ್ದ ತುನಿಷಾ ಶರ್ಮಾ ಅವರ ತಾಯಿ ಶೀಜನ್ ಖಾನ್ ವಿರುದ್ದ ದೂರು ನೀಡಿದ್ದು, ಶೀಜಾನ್ ಖಾನ್ ಅವರನ್ನು ಐಪಿಸಿ ಸೆಕ್ಷನ್ 307 ರ ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಬಂಧಿಸಲಾಗಿದೆ.
ತುನಿಷಾ ಶರ್ಮಾ (Actor thunisha sharma) ಆತ್ಮಹತ್ಯೆ ಪ್ರಕರಣದ ಬಗ್ಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿರುವ ಎಸಿಪಿ ಚಂದ್ರಕಾಂತ್ ಜಾಧವ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನಟಿಯ ತಾಯಿ ಶೀಜಾನ್ ಖಾನ್ ವಿರುದ್ಧ ದೂರು ದಾಖಲಿಸಿರುವುದನ್ನು ಖಚಿತಪಡಿಸಿದ್ದಾರೆ. ತುನಿಷಾ ಶರ್ಮಾ ಅವರ ತಾಯಿಯ ಹೇಳಿಕೆಯಂತೆ ನಟ ಶೀಜನ್ ಖಾನ್ ಅವರನ್ನು ಬಂಧಿಸಲಾಗಿದೆ. ತುನಿಷಾ ಆತನ ಜೊತೆ ಸಂಬಂಧದಲ್ಲಿದ್ದಳು, ನಂತರದಲ್ಲಿ ಅವರ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಇದರಿಂದಾಗಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಶೀಜಾನ್ ಖಾನ್ ವಿರುದ್ದ ದೂರು ದಾಖಲಿಸಿದ್ದಾರೆ.
ಇದೀಗ ತುನಿಷಾ ಶರ್ಮಾ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದೆ. ಭಾನುವಾರ ಮುಂಜಾನೆ ಮುಂಬೈನ ಜೆಜೆ ಆಸ್ಪತ್ರೆಯಲ್ಲಿ ಆಕೆಯ ಶವಪರೀಕ್ಷೆ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. “ಶವಪರೀಕ್ಷೆಯನ್ನು ಬೆಳಿಗ್ಗೆ 4:30 ರವರೆಗೆ ನಡೆಸಲಾಯಿತು ಮತ್ತು 4-5 ಪೊಲೀಸ್ ಸಿಬ್ಬಂದಿ ಸಹ ಹಾಜರಿದ್ದರು” ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಮೃತ ದೇಹವನ್ನು ಕೋಲ್ಡ್ ಸ್ಟೋರೇಜ್‌ನಲ್ಲಿ ಇರಿಸಲಾಗಿದೆ.
ಇದನ್ನೂ ಓದಿ : Petroleum tanker blast: ಇಂಧನ ಟ್ಯಾಂಕರ್ ಸ್ಫೋಟ: 10 ಮಂದಿ ಸಾವು, 40 ಮಂದಿಗೆ ಗಾಯ
ನಟಿ ತುನಿಷಾ ಶರ್ಮಾಳ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದ್ದು, ಆಕೆಯ ಕುಟುಂಬಸ್ಥರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ.
(Actor thunisha sharma) Actress Tunisha Sharma committed suicide on the sets of her TV show Ali Baba: Dastan-e-Kabul on Saturday. Tunisha Sharma’s mother has filed a complaint against Sheejan Khan over her daughter’s death and Sheejan Khan has been arrested under IPC Section 307 for abetment to suicide.