ಸೋಮವಾರ, ಏಪ್ರಿಲ್ 28, 2025
HomeSportsCricketTeam India fixtures 2023: ಮುಂದಿನ ವರ್ಷ ಟೀಮ್ ಇಂಡಿಯಾ ಆಡಲಿರುವ ಸರಣಿಗಳು ಎಷ್ಟು? ಇಲ್ಲಿದೆ...

Team India fixtures 2023: ಮುಂದಿನ ವರ್ಷ ಟೀಮ್ ಇಂಡಿಯಾ ಆಡಲಿರುವ ಸರಣಿಗಳು ಎಷ್ಟು? ಇಲ್ಲಿದೆ ಕಂಪ್ಲೀಟ್ ವೇಳಾಪಟ್ಟಿ

- Advertisement -


ಬೆಂಗಳೂರು: (Team India fixtures 2023)2022 ಮುಗಿದು 2023ರ ಆಗಮನಕ್ಕಿನ್ನು ಎರಡನೇ ದಿನ ಬಾಕಿ. ಹೊಸ ವರ್ಷ ಹೊಸ ಸವಾಲುಗಳಿಗೆ ಭಾರತ ಕ್ರಿಕೆಟ್ ತಂಡ ಸಜ್ಜಾಗುತ್ತಿದೆ.2022ರಲ್ಲಿ ಐಸಿಸಿ ಟಿ20 ವಿಶ್ವಕಪ್, ಏಷ್ಯಾ ಕಪ್ ಟಿ20 ಟೂರ್ನಿಗಳಲ್ಲಿ ನೀರಸ ಪ್ರದರ್ಶನ ತೋರಿರುವ ಟೀಮ್ ಇಂಡಿಯಾಗೆ 2023ರಲ್ಲಿ ಐಸಿಸಿ ಏಕದಿನ ವಿಶ್ವಕಪ್ ಸವಾಲು ಎದುರಾಗಲಿದೆ. ಏಕದಿನ ವಿಶ್ವಕಪ್ 12 ವರ್ಷಗಳ ನಂತರ ಭಾರತದಲ್ಲೇ ನಡೆಯುತ್ತಿದ್ದು, ಟೀಮ್ ಇಂಡಿಯಾ ಮೇಲೆ ನಿರೀಕ್ಷೆಗಳು ಹೆಚ್ಚಿವೆ. 2011ರಲ್ಲಿ ಭಾರತದಲ್ಲಿ ನಡೆದ ವಿಶ್ವಕಪ್’ನಲ್ಲಿ ಭಾರತ ತಂಡ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚಾಂಪಿಯನ್ ಪಟ್ಟಕ್ಕೇರಿತ್ತು.

(Team India fixtures 2023)2023ರಲ್ಲಿ ಭಾರತ ತಂಡ ಏಷ್ಯಾ ಕಪ್ ಹಾಗೂ ಐಸಿಸಿ ಏಕದಿನ ವಿಶ್ವಕಪ್ ಸೇರಿದಂತೆ ಒಟ್ಟು 16 ಸರಣಿಗಳನ್ನಾಡಲಿದೆ. ಹೊಸ ವರ್ಷ ಟೀಮ್ ಇಂಡಿಯಾದ ಅಭಿಯಾನ ಪ್ರವಾಸಿ ಶ್ರೀಲಂಕಾ ವಿರುದ್ಧದ ಟಿ20 ಸರಣಿಯೊಂದಿಗೆ ಆರಂಭವಾಗಲಿದ್ದು, 3 ಪಂದ್ಯಗಳ ಸರಣಿಯ ಮೊದಲ ಪಂದ್ಯ ಜನವರಿ 3ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಲಂಕಾ ವಿರುದ್ಧದ ಚುಟುಕು ಸರಣಿಯಲ್ಲಿ ಭಾರತ ತಂಡವನ್ನು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ. ನಂತರ ಶ್ರೀಲಂಕಾ ವಿರುದ್ಧ ಭಾರತ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಟೀಮ್ ಇಂಡಿಯಾ ನಾಯಕತ್ವ ವಹಿಸಲಿದ್ದಾರೆ.

ಶ್ರೀಲಂಕಾ ವಿರುದ್ಧದ ಸರಣಿಯ ನಂತರ ಭಾರತ ತಂಡ ತವರು ನೆಲದಲ್ಲಿ ನ್ಯೂಜಿಲೆಂಡ್ ವಿರುದ್ಧ 3 ಪಂದ್ಯಗಳ ಏಕದಿನ ಹಾಗೂ ಟಿ20 ಸರಣಿಯನ್ನಾಡಲಿದೆ. ಕಿವೀಸ್ ವಿರುದ್ಧದ ಸರಣಿಯ ಬಳಿಕ ಆಸ್ಟ್ರೇಲಿಯಾ ತಂಡ ಭಾರತಕ್ಕೆ ಆಗಮಿಸಲಿದ್ದು, ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯ ನಂತರ ಐಪಿಎಲ್ ಟೂರ್ನಿ ನಡೆಯಲಿದೆ. ಐಪಿಎಲ್ ನಂತರ ಭಾರತ ತಂಡ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳಲಿದ್ದು, ಅಲ್ಲಿ ಆತಿಥೇಯರ ವಿರುದ್ಧ 2 ಟೆಸ್ಟ್, 3 ಏಕದಿನ ಹಾಗೂ 3 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ.

ವೆಸ್ಟ್ ಇಂಡೀಸ್ ಪ್ರವಾಸದ ನಂತರ ಆಗಸ್ಟ್-ಸೆಪ್ಟೆಂಬರ್’ನಲ್ಲಿ ಯುಎಇನಲ್ಲಿ ನಡೆಯಲಿರುವ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ಆಡಲಿದೆ. ಬಳಿಕ ಸೆಪ್ಟೆಂಬರ್’ನಲ್ಲಿ ಆಸ್ಟ್ರೇಲಿಯಾ ವಿರುದ್ಧ ತವರು ನೆಲದಲ್ಲಿ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ನಂತರ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದೆ. ವಿಶ್ವಕಪ್ ನಂತರ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಲಿದ್ದು, ಕಾಂಗರೂಗಳ ವಿರುದ್ಧ 5 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ಡಿಸೆಂಬರ್ ತಿಂಗಳಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಲಿದ್ದು, ಹರಿಣಗಳ ವಿರುದ್ಧ 2 ಟೆಸ್ಟ್, 3 ಏಕದಿನ ಹಾಗೂ 3 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ.

ಇದನ್ನೂ ಓದಿ:Manish Pandey double century: ನಾಯಕ್ವತರಿಂದ ಕೆಳಗಿಳಿದ ನಂತರ ಪವರ್ ತೋರಿಸಿದ ಪಾಂಡೆ, ರಣಜಿ ಟ್ರೋಫಿಯಲ್ಲಿ ಸಿಡಿಲಬ್ಬರದ ದ್ವಿಶತಕ

ಇದನ್ನೂ ಓದಿ:ICC Women’s T20 World Cup : ಐಸಿಸಿ ಮಹಿಳಾ ಟಿ20 ವಿಶ್ವಕಪ್: ಭಾರತ ತಂಡ ಪ್ರಕಟ, ಟೀಮ್ ಇಂಡಿಯಾದಲ್ಲಿ ಏಕೈಕ ಕನ್ನಡತಿ

ಭಾರತ ತಂಡ 2023ರಲ್ಲಿ ಆಡಲಿರುವ ಸರಣಿಗಳ ವೇಳಾಪಟ್ಟಿ (Team India fixtures 2023)
ಜನವರಿ 2023: ಶ್ರೀಲಂಕಾ ವಿರುದ್ಧ ತವರು ಸರಣಿ (3 T20 ಮತ್ತು 3 ODI)
ಜನವರಿ-ಫೆಬ್ರವರಿ 2023: ನ್ಯೂಜಿಲೆಂಡ್ ವಿರುದ್ಧ ತವರು ಸರಣಿ (3 ODI ಮತ್ತು 3 T20)
ಫೆಬ್ರವರಿ-ಮಾರ್ಚ್ 2023: ಆಸ್ಟ್ರೇಲಿಯಾ ವಿರುದ್ಧ ತವರು ಸರಣಿ (4 Test ಮತ್ತು 3 ODI)
ಏಪ್ರಿಲ್-ಮೇ 2023: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)
ಜೂನ್ 2023: ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ (ಭಾರತ ಫೈನಲ್’ಗೆ ಅರ್ಹತೆ ಪಡೆದರೆ)
ಜುಲೈ-ಆಗಸ್ಟ್ 2023: ಭಾರತದ ವೆಸ್ಟ್ ಇಂಡೀಸ್ ಪ್ರವಾಸ (2 Test, 3 ODI ಮತ್ತು 3T20)
ಆಗಸ್ಟ್-ಸೆಪ್ಟೆಂಬರ್ 2023: ಏಷ್ಯಾಕಪ್ ಕಪ್ (ಪಾಕಿಸ್ತಾನ/ಯುಎಇ)
ಸೆಪ್ಟೆಂಬರ್ 2023: ಆಸ್ಟ್ರೇಲಿಯಾ ವಿರುದ್ಧ ತವರು ಸರಣಿ (2 Test, 3 ODI)
10 ಅಕ್ಟೋಬರ್-26 ನವೆಂಬರ್ 2023: ಭಾರತದಲ್ಲಿ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ
ನವೆಂಬರ್ 2023: ಭಾರತದ ಆಸ್ಟ್ರೇಲಿಯಾ ಪ್ರವಾಸ (5 T20)
ಡಿಸೆಂಬರ್-ಜನವರಿ 2024: ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ (2 Test, 3 ODI ಮತ್ತು 3T20)

Team India fixtures 2023 How many series will Team India play next year? Here is the complete schedule

RELATED ARTICLES

Most Popular