ಬುಧವಾರ, ಏಪ್ರಿಲ್ 30, 2025
HomeCoastal NewsCorporative society president arrested: ನೂರಾರು ಕೋಟಿ ವಂಚಿಸಿ ಪರಾರಿಯಾಗಿದ್ದ ಉಡುಪಿಯ ಕಮಲಾಕ್ಷಿ ಸಂಘದ ಅಧ್ಯಕ್ಷ...

Corporative society president arrested: ನೂರಾರು ಕೋಟಿ ವಂಚಿಸಿ ಪರಾರಿಯಾಗಿದ್ದ ಉಡುಪಿಯ ಕಮಲಾಕ್ಷಿ ಸಂಘದ ಅಧ್ಯಕ್ಷ ಅರೆಸ್ಟ್‌

- Advertisement -

ಉಡುಪಿ: (Corporative society president arrested) ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸೊಸೈಟಿಯಿಂದ ನೂರು ಕೋಟಿಗೂ ಹೆಚ್ಚಿನ ಹಣ ವಂಚಿಸಿ ಪರಾರಿಯಾಗಿದ್ದ ಸಂಘದ ಅಧ್ಯಕ್ಷ ಬಿ.ವಿ. ಲಕ್ಷ್ಮೀನಾರಾಯಣ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಕಮಲಾಕ್ಷಿ ವಿವಿಧೋದ್ದೇಶ ಸಹಕಾರಿ ಸಂಘದ ಗ್ರಾಹಕರು ಡಿ.19ರಂದು ಸೊಸೈಟಿಯ ಕಚೇರಿಗೆ ಘೇರಾವ್ ಹಾಕಿದ್ದು, ಗ್ರಾಹಕರಿಗೆ 100 ಕೋಟಿ ರೂ.ಗೂ ಹೆಚ್ಚು ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಬ್ರಹ್ಮಾವರ ಸಮೀಪದ ಮಟಪಾಡಿಯಲ್ಲಿ ಲಕ್ಷ್ಮೀನಾರಾಯಣ ಅವರನ್ನು ಪೊಲೀಸರು ವಶಕ್ಕೆ (Corporative society president arrested) ತೆಗೆದುಕೊಂಡಿದ್ದಾರೆ.

ಈ ಸಹಕಾರಿ ಸಂಘವು ಒಂದು ಕುಟುಂಬದ ಸದಸ್ಯರನ್ನು ಒಳಗೊಂಡ ಸಹಕಾರ ಸಂಘಟನೆಯಾಗಿದೆ. ಕಮಲಾಕ್ಷಿ ವಿವಿದೋದ್ದೇಶ ಸಹಕಾರ ಸಂಘದಲ್ಲಿ ಅಧ್ಯಕ್ಷರಾಗಿ ಬಿ.ವಿ. ಲಕ್ಷ್ಮೀನಾರಾಯಣ, ಬಿ.ಕೆ.ವೆಂಕಯ್ಯ, ಕಮಲ ನೇತ್ರ ಹಾಗೂ ಟ್ರಸ್ಟಿಗಳಾದ ಬಡಗು ಪೇಟೆಯ ರವಿ ಉಪಾಧ್ಯ, ಬಿ.ವಿ. ಬಾಲಕೃಷ್ಣ, ಭಾಸ್ಕರ ಉಪಾಧ್ಯ, ಉದಯ ಉಪಾಧ್ಯ, ರಾಧಿಕಾ, ಸುಜಾತ ಮೊದಲಾದವರು ಒಂದೇ ಕುಟುಂಬ ಸದಸ್ಯರಾಗಿದ್ದಾರೆ. ಕುಟುಂಬ ಸದಸ್ಯರನ್ನು ಒಳಗೊಂಡ ಈ ಸಂಸ್ಥೆಯಲ್ಲಿ ಊರಿನ ಹಾಗೂ ಪರಊರಿನ ನೂರಾರು ಜನರು ಠೇವಣಿಗಳನ್ನು ಇಟ್ಟಿದ್ದರು.

ಗ್ರಾಹಕರು ತಮ್ಮ ಭವಿಷ್ಯಕ್ಕಾಗಿ ತಾವು ದುಡಿದ ಹಣದಲ್ಲಿ ಸ್ವಲ್ಪ ಭಾಗವನ್ನು ತಿಂಗಳಿಗೆ 12% ರ ಬಡ್ಡಿ ದರದಂತೆ ನಿರಖು ಠೇವಣಿ ಖಾತೆಯಲ್ಲಿ ಇಟ್ಟಿದ್ದರು. ಈ ಖಾತೆಗೆ ಕಳೆದ ಜೂನ್‌ವರೆಗೆ ಸಂಸ್ಥೆಯವರು ಸರಿಯಾಗಿ ಬಡ್ಡಿಯನ್ನು ಪಾವತಿಸಿದ್ದು, ನಂತರದ ದಿನಗಳಲ್ಲಿ ಬಡ್ಡಿಯನ್ನು ಪಾವತಿಸಿರುವುದಿಲ್ಲ. ಅಷ್ಟೇ ಅಲ್ಲದೇ ವಾಯಿದೆ ಮುಗಿದ ನಿರಖು ಠೇವಣಿಯನ್ನು ಗ್ರಾಹಕರಿಗೆ ಮರಳಿ ಕೊಡದೇ ಸತಾಯಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಈ ಸಹಕಾರಿ ಸಂಘದ ಅಧ್ಯಕ್ಷರಾದ ಬಿ.ವಿ.ಲಕ್ಷ್ಮೀನಾರಾಯಣ ಕಳೆದ ತಿಂಗಳು ಬೋರ್ಡ್‌ ಮೀಟಿಂಗ್‌ ಕರೆದು ಎಲ್ಲಾ ಗ್ರಾಹಕರ ಹಣ ಹಿಂತಿರುಗಿಸುವ ಬಗ್ಗೆ ಹೇಳಿದರು. ಆದರೆ ಆ ಸಭೆಯಲ್ಲಿ ಡಿ.ಆರ್‌ ಆಫೀಸಿನಿಂದ ಬರಬೇಕಾದ ಆಫೀಸರ್‌ ಬಾರದೇ ಇದ್ದುದರಿಂದ ಸಭೆ ರದ್ದುಪಡಿಸಲಾಗಿದೆ ಎಂದು ಗ್ರಾಹಕರನ್ನು ನಂಬಿಸಿದರು. ಆದರೆ ಈ ಕುರಿತು ಡಿ.ಆರ್‌ ಆಫೀಸ್‌ನಲ್ಲಿ ವಿಚಾರಿಸಿದರೆ, ಆ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. ಇದಾದ ಮೇಲೆ ಗ್ರಾಹಕರು ಪ್ರತಿದಿನ ಕಚೇರಿಗೆ ಹೋದಾಗಲೂ ದಿನಕ್ಕೊಂದು ರೀತಿ ದಿನಾಂಕ ಹೇಳಿ ಕಳುಹಿಸುತ್ತಿದ್ದರು ಎಂದು ಆರೋಪಿಸಿದ್ದರು. ನಂತರದಲ್ಲಿ ಗ್ರಾಹಕರಿಗೆ ವಂಚಿಸಿ ಆತ ಪರಾರಿಯಾಗಿದ್ದನು.

ಇದನ್ನೂ ಓದಿ : Mangaluru stab case: ಜಲೀಲ್‌ ಹತ್ಯೆ ಪ್ರಕರಣ: ಮಂಗಳೂರಿನಲ್ಲಿ ಸೆಕ್ಷನ್‌ 144, ಮದ್ಯ ನಿಷೇಧ ವಿಸ್ತರಣ

ಇದೀಗ ನೂರಾರು ಕೋಟಿ ರೂ ಹಣವನ್ನು ವಂಚಿಸಿ ಪರಾರಿಯಾಗಿದ್ದ, ಕಮಲಾಕ್ಷಿ ಸಂಘದ ಅಧ್ಯಕ್ಷ ಬಿ.ವಿ. ಲಕ್ಷ್ಮಿನಾರಾಯಣ (Corporative society president arrested) ಅವರನ್ನು ಪೊಲೀಸರು ಬಂಧಿಸಿದ್ದಾರೆ.

The president of Kamalakshi Multipurpose Cooperative Society, B.V., was absconding after defrauding more than one hundred crores. Lakshminarayan has been arrested by the police

RELATED ARTICLES

Most Popular