ಭಾನುವಾರ, ಏಪ್ರಿಲ್ 27, 2025
HomeCinemaThe doggy bus- video viral: ಬಸ್‌ ತುಂಬಾ ನಾಯಿಗಳು ಸವಾರಿ ಮಾಡುತ್ತಿರುವ ವಿಡಿಯೋ ವೈರಲ್:‌...

The doggy bus- video viral: ಬಸ್‌ ತುಂಬಾ ನಾಯಿಗಳು ಸವಾರಿ ಮಾಡುತ್ತಿರುವ ವಿಡಿಯೋ ವೈರಲ್:‌ ಕೆಲವೇ ಗಂಟೆಗಳಲ್ಲಿ 1M ವೀಕ್ಷಣೆ

- Advertisement -

(The doggy bus- video viral) ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಒಂದಲ್ಲ ಒಂದು ರೀತಿಯಲ್ಲಿ ಸಾಕುಪ್ರಾಣಿಗಳ ಮುದ್ದಾದ ವಿಡಿಯೋಗಳು ಹರಿದಾಡುತ್ತಿರುತ್ತವೆ. ಪ್ರತಿದಿನ ಮುದ್ದಾದ ಸಾಕುಪ್ರಾಣಿಗಳ ಕುರಿತಾದ ವಿಡಿಯೋಗಳನ್ನು ನೋಡುವುದರಿಂದ ನಾವು ಇನ್ನಷ್ಟು ಆನಂದವಾಗಿರಬಹುದು. ಇಲ್ಲಿಯೂ ಅಂತಹದೇ ಒಂದು ಮನಸೂರೆಗೊಳಿಸುವಂತಹ ವಿಡಿಯೋ ಒಂದು ಕಂಡುಬಂದಿದ್ದು, ಹಲವಾರು ಸಾಕುನಾಯಿಗಳು ಪ್ಯಾಕ್‌ ವಾಕ್‌ ಗೆಂದು ಹಿಮದಿಂದ ಆವೃತವಾದ ರಸ್ತೆಯಲ್ಲಿ ಬಸ್‌ ನಲ್ಲಿ ಸವಾರಿ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ವೈರಲ್‌ ಆದ ಈ ಚಿಕ್ಕ ವಿಡಿಯೋದಲ್ಲಿ ಮುದ್ದಾದ ನಾಯಿಗಳು ಬಸ್‌ (The doggy bus- video viral)ನ ಕಡೆಗೆ ಜಿಗಿದು ಬಸ್‌ ಹತ್ತುವುದರೊಂದಿಗೆ ಪ್ರಾರಂಭವಾಗಿದ್ದು, ನಂತರದಲ್ಲಿ ಮಹಿಳೆಯೊಬ್ಬರು ಅವುಗಳನ್ನು ಗುಡ್‌ ಮಾರ್ನಿಂಗ್‌ ಎಂದು ಹೇಳುವ ಮೂಲಕ ಸ್ವಾಗತಿಸಿ ಅವುಗಳನ್ನು ಮುದ್ದಿಸುವ ದೃಶ್ಯ ಇದರಲ್ಲಿದೆ. ನಾಯಿಗಳು ಬಸ್‌ ಅನ್ನು ಪ್ರವೇಶಿಸಿದ ನಂತರದಲ್ಲಿ ವಾಹನದ ಸಂಪೂರ್ಣ ಒಳನೋಟವನ್ನು ಈ ವಿಡಿಯೋದಲ್ಲಿ ಚಿತ್ರಿಕರಿಸಲಾಗಿದೆ. ಇಲ್ಲಿ ವಿವಿಧ ತಳಿಯ ಹಲವಾರು ನಾಯಿಗಳು ಶಿಶುಗಳಂತೆ ಬಸ್‌ ನ ಸೀಟ್‌ ನಲ್ಲಿ ಕುಳಿತಿರುವುದನ್ನು ನಾವು ಕಾಣಬಹುದು.

ಕೆಲವೇ ಕ್ಷಣಗಳಲ್ಲಿ ಬಸ್‌ ಹಿಮದಿಂದ ಆವೃತವಾದ ರಸ್ತೆಯನ್ನು ಪ್ರವೇಶಿಸಿ ಮತ್ತೊಂದು ನಾಯಿಯನ್ನು ಹತ್ತಿಸಿಕೊಳ್ಳಲು ಮುಂದಿನ ನಿಲ್ದಾಣಕ್ಕೆ ಹೋಗುತ್ತಿದ್ದು, ಅಲ್ಲಿ ನಾಯಿಯು ಬಸ್ (The doggy bus- video viral) ಬರಲು ರಸ್ತೆಬದಿಯಲ್ಲಿ ತಾಳ್ಮೆಯಿಂದ ಕಾಯುತ್ತಾ ಕುಳಿತಿರುವುದನ್ನು ಕಾಣಬಹುದು ಮತ್ತು ಬಸ್‌ ಬಂದು ನಿಂತ ತಕ್ಷಣ ಬಸ್‌ಗೆ ಜಿಗಿದು ತನ್ನ ಆಸನವನ್ನು ತೆಗೆದುಕೊಳ್ಳುವುದನ್ನು ಕಾಣಬಹುದು.

ಮೋಹಕತೆಯಿಂದ ತುಂಬಿರುವ ಈ ವಿಡಿಯೋ ಖಂಡಿತವಾಗಿಯೂ ನಮ್ಮ ಪ್ರೀತಿಪಾತ್ರರ ಜೊತೆಗೆ ಹಂಚಿಕೊಳ್ಳುವಂತೆ ಮಾಡುತ್ತದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೆಯಾದ ಕೆಲವೇ ಕ್ಷಣಗಳಲ್ಲಿ ಒಂದು ಮಿಲಿಯನ್‌ ವೀಕ್ಷಣೆಯನ್ನು ಪಡೆದು, ಸಾವಿರಾರು ಲೈಕ್ಸ್‌ ಗಳನ್ನು ಪಡೆದುಕೊಂಡಿದೆ.

https://twitter.com/buitengebieden/status/1609988922762731529?ref_src=twsrc%5Etfw%7Ctwcamp%5Etweetembed%7Ctwterm%5E1609988922762731529%7Ctwgr%5E1679e6e89d75dac6bde0d22a5f4edca41bff1503%7Ctwcon%5Es1_&ref_url=https%3A%2F%2Fwww.india.com%2Fviral%2Fviral-video-doggy-bus-video-of-a-bus-full-of-dogs-for-a-walk-in-snow-covered-alaska-goes-viral-5835778%2F

ವೈರಲ್‌ ಆದ ಈ ವಿಡಿಯೋ ಬ್ಯುಟೆಂಗೆಬೀಡೆನ್‌ ಎಂಬ ಬಳಕೆದಾರರು ಟ್ವಿಟರ್‌ ನಲ್ಲಿ ಹಂಚಿಕೊಂಡಿದ್ದಾರೆ. ಡೈಲಿಮೋಷನ್‌ ವರದಿಯ ಪ್ರಕಾರ, ಮೋ ಥಾಂಪ್ಸನ್‌ ಮತ್ತು ಆಕೆಯ ಪತಿ ಲೀ ಥಾಂಪ್ಸನ್‌ ಎಂಬ ದಂಪತಿಗಳು ಯುಎಸ್‌ ಎ ಅಲಾಸ್ಕಾದ ಸ್ಕಾಗ್ವೇಯಲ್ಲಿ ಡಾಗ್‌ ವಾಕರ್‌ ಸೌಲಭ್ಯವನ್ನು ನಡೆಸುತ್ತಿದ್ದಾರೆ ಎನ್ನಲಾಗಿದೆ. ಲೀ ಬಸ್‌ ಡ್ರೈವರ್‌ ಆಗಿ ಮತ್ತು ಮೋ ಅವರು ನಾಯಿಗಳನ್ನು ನೋಡಿಕೊಳ್ಳುವ ಸಿಬ್ಬಂದಿಯಾಗಿ ಕೆಲಸ ಮಾಡುತ್ತಾರೆ. ಮೋ ಅವರು, ” ಇದು ಎಂದೆಂದಿಗೂ ಉತ್ತಮವಾದ ಕೆಲಸ! ಜನರು ಅವುಗಳಿಗೆ ನಾವು ಹೇಗೆ ತರಬೇತಿ ನೀಡುತ್ತೇವೆ ಎಂದು ತಿಳಿದುಕೊಳ್ಳಲು ಬಯಸುತ್ತಾರೆ. ನಾವು ನಿಜವಾಗಿಯೂ ಮಾನಸಿಕ ಮತ್ತು ದೈಹಿಕ ಪುಷ್ಟೀಕರಣದ ಮೇಲೆ ಕೇಂದ್ರೀಕರಿಸುತ್ತೇವೆ.” ಎಂದಿದ್ದಾರೆ.

ಇದನ್ನೂ ಓದಿ : Spooky College Movie : ಟ್ರೈಲರ್‌ನಿಂದಲೇ ಕಿಕ್‌ ಕೊಟ್ಟ ‘ಸ್ಪೂಕಿ ಕಾಲೇಜ್’ ಸಿನಿಮಾ ರಿಲೀಸ್‌ಗೆ ರೆಡಿ

ಸದ್ಯ ಇದೀಗ ಈ ವಿಡಿಯೋ ವೈರಲ್‌ ಆಗಿದ್ದು, ವಿಡಿಯೋ ಅಪ್ಲೋಡ್‌ ಆದ ಕ್ಷಣ ಮಾತ್ರದಲ್ಲೇ ಒಂದು ಮಿಲಿಯನ್‌ ವೀಕ್ಷಣೆಗಳನ್ನು ಪಡೆದುಕೊಂಡಿದೆ.

A heartwarming video of several pet dogs riding a bus on a snow-covered road for a pack walk is making waves on social media.

RELATED ARTICLES

Most Popular