ಸೋಮವಾರ, ಏಪ್ರಿಲ್ 28, 2025
HomeCrimeKidnap and rape case : 18 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ: ವಿರೋಧಿಸಿದ್ದಕ್ಕೆ ವಿಷವುಣಿಸಿದ...

Kidnap and rape case : 18 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ: ವಿರೋಧಿಸಿದ್ದಕ್ಕೆ ವಿಷವುಣಿಸಿದ ಕಾಮುಕ

- Advertisement -

ಕೊತ್ವಾಲಿ: 18 ವರ್ಷದ ಬಾಲಕಿಯೋರ್ವಳನ್ನು ಆಕೆಯ ನೆರೆಯ ಯುವಕನೇ ಅಪಹರಿಸಿ ಬಲವಂತವಾಗಿ ಅತ್ಯಾಚಾರವೆಸಗಿದ ಅಮಾನವೀಯ (Kidnap and rape case) ಘಟನೆ ನಡೆದಿದೆ. ಅತ್ಯಾಚಾರವನ್ನು ವಿರೋಧಿಸಿದ ಆಕೆಗೆ ಥಳಿಸಿ ಕಾಮುಕ ವಿಷವುಣಿಸಿ ಕ್ರೌರ್ಯತೆ ಮೆರೆದಿರುವ ಘಟನೆ ಜೆಹಾನಾಬಾದ್‌ ಕೊತ್ವಾಲಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಜನವರಿ 1 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಜನವರಿ 1 ರ ಮುಂಜಾನೆ, ಆರೋಪಿ ಕಮಲ್‌ ಎನ್ನುವಾತ ಯುವತಿಯನ್ನು ಬಲವಂತವಾಗಿ ಅಪಹರಿಸಿ ತನ್ನ ಮನೆಗೆ ಕರೆದೊಯ್ದು, ಆಕೆಯ ಬಾಯಿಗೆ ಬಟ್ಟೆ ತುರುಕಿ ಅತ್ಯಾಚಾರವೆಸಗಿದ್ದಾನೆ. ಇದನ್ನು ವಿರೋಧಿಸಿದ ಆಕೆಗೆ ತೀವ್ರವಾಗಿ ಥಳಿಸಿ ವಿಷವನ್ನು ಕುಡಿಸಿದ್ದಾನೆ. ವಿಷಯವನ್ನು ತಿಳಿದ ಯುವತಿಯ ಕುಟುಂಬಸ್ಥರು ಆರೋಪಿಯ ಮನೆಗೆ ಬಂದಾಗ ಆರೋಪಿಯ ಕುಟುಂಬದವರು ಆಕೆಯ ತಾಯಿಗೂ ಥಳಿಸಿದ್ದಾರೆ. ನಂತರದಲ್ಲಿ ಆರೋಪಿಗಳು ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾರೆ.

ಇದನ್ನೂ ಓದಿ : Presidency Engineering College : ಪ್ರೆಸಿಡೆನ್ಸಿ ಇಂಜಿಯರಿಂಗ್ ಕಾಲೇಜು ಕ್ಯಾಂಪಸ್ ನಲ್ಲೇ ವಿದ್ಯಾರ್ಥಿನಿ ಕೊಲೆ : ಪ್ರೀತಿ ನಿರಾಕರಿಸಿದ್ದಕ್ಕೆ ಪ್ರಿಯಕರನಿಂದ ಚಾಕು ಇರಿತ

ಇದನ್ನೂ ಓದಿ : ಕಾರ್ಕಳದಲ್ಲಿ ಶಾಲಾ ಮಕ್ಕಳ ಪ್ರವಾಸ ಬಸ್‌ ಪಲ್ಟಿ : ಮೂವರು ಶಿಕ್ಷಕಿಯರು, ಇಬ್ಬರು ವಿದ್ಯಾರ್ಥಿಗಳಿಗೆ ಗಂಭೀರ ಗಾಯ

ಅತ್ಯಾಚಾರಕ್ಕೊಳಗಾದ ಯುವತಿಯ ಸ್ಥಿತಿ ಚಿಂತಾಜನಕವಾಗಿದ್ದು, ಆಕೆಯನ್ನು ಪಿಲಿಭಿತ್‌ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ.ಇದೀಗ ಅಕೆಯ ಕುಟುಂಬಸ್ಥರು ಜೆಹಾನಾಬಾದ್ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರಂಭದಲ್ಲಿ ತಾನು ನೀಡಿದ ದೂರನ್ನು ಪೊಲೀಸರು ತೆಗೆದುಕೊಳ್ಳಲಿಲ್ಲ ಎಂದು ಸಂತ್ರಸ್ತೆಯ ತಾಯಿ ಆರೋಪಿಸಿದ್ದಾರೆ.

ಇದನ್ನೂ ಓದಿ : Bus caught Fire: ಮಹಾರಾಷ್ಟ್ರದ ಥಾಣೆಯಲ್ಲಿ ಬಸ್‌ ಗೆ ಬೆಂಕಿ: 65 ಪ್ರಯಾಣಿಕರು ಪಾರು

ಇದನ್ನೂ ಓದಿ : Car collision: ಹರಿಯಾಣದಲ್ಲಿ ಮರಕ್ಕೆ ಕಾರು ಢಿಕ್ಕಿ: ಐವರು ಸಾವು, ಇಬ್ಬರು ಗಂಭೀರ

ಇದನ್ನೂ ಓದಿ : Eastern Peripheral Expressway : ನೋಯ್ಡಾದ ಈಸ್ಟರ್ನ್ ಪೆರಿಫೆರಲ್ ಎಕ್ಸ್‌ಪ್ರೆಸ್‌ವೇನಲ್ಲಿ ಮಹಿಳೆ ಶವ ಪತ್ತೆ

ಪೊಲೀಸ್ ಅಧೀಕ್ಷಕರ ಸೂಚನೆ ಮೇರೆಗೆ ಆರೋಪಿ ಕಮಲ್, ಆತನ ಸಹೋದರ ಸಂಜು, ಸಹೋದರಿ ಶೀತಲ್, ತಾಯಿ ಮಾಯಾದೇವಿ ಮತ್ತು ತಂದೆ ಸತ್ಯಪಾಲ್ ವಿರುದ್ಧ ಸೂಕ್ತ ಸೆಕ್ಷನ್‌ಗಳ ಅಡಿಯಲ್ಲಿ ಮಂಗಳವಾರ ಸಂಜೆ ಪ್ರಕರಣ ದಾಖಲಿಸಲಾಗಿದೆ ಎಂದು ಜೆಹನಾಬಾದ್‌ನ ಪ್ರಭಾರಿ ಇನ್ಸ್‌ಪೆಕ್ಟರ್ (ಎಸ್‌ಎಚ್‌ಒ) ಕೊತ್ವಾಲಿ ಪ್ರಭಾಷ್ ಕುಮಾರ್ ತಿಳಿಸಿದ್ದಾರೆ. ಪರಾರಿಯಾದ ಆರೋಪಿಗಳನ್ನು ಹುಡುಕುವ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Kidnapping and rape case: 18-year-old girl kidnapped and raped: Lover poisoned for resisting

RELATED ARTICLES

Most Popular