ಬೆಂಗಳೂರು : ಪೊಲೀಸ್ ನೇಮಕಾತಿಯನ್ನು ಬಯಸುವ ಅಭ್ಯರ್ಥಿಗಳಿಗೆ ರಾಜ್ಯ ಸರಕಾರ ಗುಡ್ ನ್ಯೂಸ್ ನೀಡಿದೆ. ಪೊಲೀಸ್ ನೇಮಕಾತಿಗೆ ನಿಗದಿಯಾಗಿರುವ ವಯೋಮಿತಿಯಲ್ಲಿ ಸರಕಾರ ಸಡಿಲಿಕೆ ಮಾಡಿದೆ. ಈ ಮೂಲಕ ಕೊರೊನಾ ಲಾಕ್ ಡೌನ್ ನಿಂದಾಗಿ ಅವಕಾಶಗಳು ಕೈತಪ್ಪುತ್ತೆ ಅನ್ನೋ ಆತಂಕದಲ್ಲಿದ್ದವರು ನಿರಾಳರಾಗಿದ್ದಾರೆ.

ರಾಜ್ಯ ಸಚಿವ ಸಂಪುಟದಲ್ಲಿ ಪೊಲೀಸ್ ನೇಮಕಾತಿಯ ಕುರಿತು ಮಹತ್ವದ ನಿರ್ಣಯವನ್ನು ಕೈಗೊಂಡಿದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳ ವಯಸ್ಸನ್ನು 28 ವರ್ಷದಿಂದ 30 ವರ್ಷಕ್ಕೆ ಏರಿಕೆ ಮಾಡಲಾಗಿದ್ರೆ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 30 ವರ್ಷದಿಂದ 32 ವರ್ಷಕ್ಕೆ ಏರಿಕೆಯನ್ನ ಮಾಡಲಾಗಿದೆ.

ರಾಜ್ಯ ಸರಕಾರ ನೀಡಿರುವ ವಯೋಮಿತಿ ಸಡಿಲಿಕೆ ಕೇವಲ ಪಿಎಸ್ ಐ ನೇಮಕಾತಿಗೆ ಮಾತ್ರವೇ ಅನ್ವಯವಾಗುತ್ತಿದ್ದು, ಮುಂದಿನ ಒಂದು ನೇಮಕಾತಿಗೆ ಈ ಅವಕಾಶವನ್ನು ಅಭ್ಯರ್ಥಿಗಳು ಬಳಸಿಕೊಳ್ಳಬಹುದಾಗಿದೆ.