ಸ್ಯಾಂಡಲ್‌ವುಡ್‌ಗೆ ಡೊಡ್ಮನೆ ಕುಟುಂಬದ ಕುಡಿ ಒಬ್ಬೊಬ್ಬರಾಗಿಯೇ ಸಿನಿರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ರಾಮ್‌ಕುಮಾರ್ ಪುತ್ರಿ ಧನ್ಯಾ ರಾಮ್‌ಕುಮಾರ್ ಹಾಗೂ ಧೀರೇನ್ ರಾಮ್ ಕುಮಾರ್ ಬಳಿಕ ಮತ್ತೊಬ್ಬ ಅಣ್ಣಾವ್ರ ಮೊಮ್ಮಗ ಎಂಟ್ರಿ ಕೊಡುತ್ತಿದ್ದಾರೆ. ಡಾ.ರಾಜ್‌ಕುಮಾರ್ ಅವರ ಮಗಳು ಲಕ್ಷ್ಮಿ ಹಾಗೂ ಅಳಿಯ ಗೋವಿಂದರಾಜು ಪುತ್ರ ಷಣ್ಮುಖ ಗೋವಿಂದರಾಜು (Shanmukha Govindaraj) ಮೊದಲ ಸಿನಿಮಾ ಸೆಟ್ಟೇರಿದೆ. ಈಗಾಗಲೇ ಸಿನಿಮಾದ ಕೆಲವು ಭಾಗದ ಚಿತ್ರೀಕರಣ ಕೂಡ ಮುಗಿದಿದೆ.
ಸದ್ದಿಲ್ಲದೆ ಷಣ್ಮುಖ ಗೋವಿಂದರಾಜು ಸಿನಿಮಾದ ಕಥೆಯನ್ನು ಕೇಳಿ, ಮನೆಯವರಿಗೂ ಒಪ್ಪಿಸಿ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಬಗ್ಗೆ ಇದೇ ಮೊದಲ ಬಾರಿಗೆ ಎ2 ಮೀಡಿಯಾ ಯೂಟ್ಯೂಬ್ ಚಾನೆಲ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅಷ್ಟಕ್ಕೂ ಸಿನಿಮಾ ಸಿಕ್ಕಿದ್ದು ಹೇಗೆ? ಮೊದಲ ಬಾರಿ ಅಭಿನಯದ ಅನುಭವ ಹೇಗಿತ್ತು? ಅನ್ನೋದನ್ನು ಸಂದರ್ಶನದಲ್ಲಿ ಹೇಳಿದ್ದಾರೆ. ‘ನನಗೆ ನಟಿಸಬೇಕು ಅನ್ನುವ ಐಡಿಯಾ ಇರಲಿಲ್ಲ. ಆಸೆಯಿತ್ತು, ಕನಸಿತ್ತು. ಯಾವಾಗ ಅನ್ನೋದು ನನಗೆ ಗೊತ್ತಿರಲಿಲ್ಲ. ನಮ್ಮ ಡೈರೆಕ್ಟರ್ ಅಶೋಕ್ ಸರ್, ನಮ್ಮ ಪ್ರಡ್ಯೂಸರ್ ಮಾದೇಶ ಅವರು ಒಳ್ಳೆ ಕಥೆಯನ್ನು ತೆಗೆದುಕೊಂಡು ಬಂದು, ಸಿನಿಮಾ ಮಾಡೋಣ ಅಂದಾಗ ನನಗೆ ನಂಬುವುದಕ್ಕೆ ಆಗಲಿಲ್ಲ. ಯಾಕೆಂದ್ರೆ, ನಾನು ಯಾರಿಗೂ ಕೇಳಿಕೊಂಡಿರಲಿಲ್ಲ. ನನ್ನ ಹೆಂಡ್ತಿ, ಮೂರು ನಾಲ್ಕು ಕ್ಲೋಸ್ ಫ್ರೆಂಡ್ಸ್ ಬಿಟ್ಟರೆ ಬೇರೆ ಯಾರಿಗೂ ಹೇಳಿರಲಿಲ್ಲ.’ ಎಂದು ಮೊದಲ ಸಿನಿಮಾ ಬಗ್ಗೆ ಹೇಳಿದ್ದಾರೆ.
ಅಣ್ಣಾವ್ರ ಕುಟುಂಬದ ಕುಡಿಗಳು ಸಿನಿರಂಗಕ್ಕೆ ಎಂಟ್ರಿ ಕೊಡುವ ಮೊದಲು ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ. ವಿನಯ್, ಧನ್ಯಾ, ಧೀರೇನ್ ಬಿಟ್ಟು ಉಳಿದವರು ಮದುವೆ ಬಳಿಕವೇ ಸಿನಿರಂಗಕ್ಕೆ ಬಂದಿದ್ದಾರೆ. ಷಣ್ಮುಖ ಗೋವಿಂದರಾಜು ಕೂಡ ವಿವಾಹದ ಬಳಿಕವೇ ಸಿನಿರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ‘ಮದುವೆ ಆದ್ಮೇಲೆ ಎಲ್ಲರೂ ಆಕ್ಟಿಂಗ್‌ಗೆ ಬಂದ್ರು. ಅದು ನಡೆದುಕೊಂಡು ಬಂದಿದೆ. ಲೇಡಿ ಲಕ್ ಅಂತ ಏನು ಹೇಳ್ತಾರೆ ಅದು ನನ್ನ ಲೈಫ್‌ನಲ್ಲಿ ನಿಜ ಆಗಿದೆ ಅಂತ ಹೇಳ್ತೀನಿ.’ ಎಂದು ಅವಕಾಶ ಸಿಕ್ಕಿದ್ದರ ಬಗ್ಗೆ ಪತ್ನಿಗೆ ಕ್ರೆಡಿಟ್ ಕೊಟ್ಟಿದ್ದಾರೆ.
ಇದನ್ನೂ ಓದಿ : ಖ್ಯಾತ ಗೀತೆ ರಚನೆಕಾರ ವಿ ಹರಿಕೃಷ್ಣ “ಕ್ರಾಂತಿ ಆಲ್ಬಮ್ ಹಿಟ್” ಕೊಂಡಾಡಿದ್ಯಾಕೆ ?
ಇದನ್ನೂ ಓದಿ : “ಫಸ್ಟ್ ಡೇ ಫಸ್ಟ್ ಶೋ” ಮೂಲಕ ಬೆಳ್ಳಿ ತೆರೆಗೆ ಮರಳಿದ ರೋಹಿತ್ ಶ್ರೀನಾಥ್
ಇದನ್ನೂ ಓದಿ : ಸಂಕ್ರಾಂತಿಯಂದು ಕನ್ನಡಕ್ಕೆ ಮೊದಲ ಪ್ರಾಶಸ್ತ್ಯ ಕೊಟ್ಟ ರಶ್ಮಿಕಾ ಮಂದಣ್ಣ
ಮೊದಲ ದಿನ ಶೂಟಿಂಗ್‌ಗೆ ಹೋಗುವಾಗಲೂ ಎಗ್ಸೈಟ್ಮೆಂಟ್ ಇತ್ತು. ಆದರೆ, ಹೋದ್ಮೇಲೆ ನನಗೆ ನರ್ವಸ್ ಆಯ್ತು. ನಿರ್ದೇಶಕರು ನನಗೆ ನೀವು ನೀವಾಗಿಯೇ ಇರಬೇಕು. ಕ್ಯಾರೆಕ್ಟರ್‌ಗೆ ನೀವು ಹೇಗಿದ್ದೀರೋ ಹಾಗೇ ಇರಿ. ಏನೇ ಡೈಲಾಗ್ ಕೊಟ್ರೂ ನೀವು ನಿಮ್ಮ ಶೈಲಿಯಲ್ಲಿ ಹೇಳಿ. ಅಲ್ಲಿಗೆ ನನಗೆ ದೊಡ್ಡ ಕಾನ್ಫಿಡೆನ್ಸ್ ಬಂತು.’ ಎಂದು ಷಣ್ಮುಖ ಗೋವಿಂದರಾಜು ಮೊದಲ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
Shanmukha Govindaraj: Another son of Dodmane enters the cinema