ಮಂಗಳವಾರ, ಏಪ್ರಿಲ್ 29, 2025
HomeSportsCricketMayank Agarwal Double century: ರಣಜಿ ಟ್ರೋಫಿಯಲ್ಲಿ ಕೇರಳ ವಿರುದ್ಧ ಭರ್ಜರಿ ದ್ವಿಶತಕ ಬಾರಿಸಿದ ಮಯಾಂಕ್...

Mayank Agarwal Double century: ರಣಜಿ ಟ್ರೋಫಿಯಲ್ಲಿ ಕೇರಳ ವಿರುದ್ಧ ಭರ್ಜರಿ ದ್ವಿಶತಕ ಬಾರಿಸಿದ ಮಯಾಂಕ್ ಅಗರ್ವಾಲ್

- Advertisement -

ತಿರುವನಂತಪುರ: ಭಾರತ ಟೆಸ್ಟ್ ತಂಡದಿಂದ ಹೊರ ಬಿದ್ದಿರುವ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ (Mayank Agarwal) ರಣಜಿ ಟ್ರೋಫಿಯಲ್ಲಿ (Ranji Trophy 2022-23) ಕೇರಳ ವಿರುದ್ಧ ಭರ್ಜರಿ ದ್ವಿಶತಕ (Mayank Agarwal Double century) ಬಾರಿಸಿದ್ದಾರೆ.

ತಿರುವನಂತಪುರದ ಥುಂಬಾದಲ್ಲಿರುವ ಸೇಂಟ್ ಕ್ಸೇವಿಯರ್ ಕಾಲೇಜು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಎಲೈಟ್ ‘ಸಿ’ ಗುಂಪಿನ ಪಂದ್ಯದಲ್ಲಿ ಮಯಾಂಕ್ ದ್ವಿಶತಕದೊಂದಿಗೆ ಅಬ್ಬರಿಸಿದರು. 2ನೇ ದಿನದಂತ್ಯಕ್ಕೆ ಅಜೇಯ 87 ರನ್ ಗಳಿಸಿದ್ದ ಮಯಾಂಕ್ 3ನೇ ದಿನದಾಟದಲ್ಲಿ ಶತಕ ಪೂರ್ತಿಗೊಳಿಸಿದ್ದಷ್ಟೇ ಅಲ್ಲದೆ, ಆ ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸಿದರು.

ಕರ್ನಾಟಕದ ತಂಡದ ಪ್ರಮುಖ ಬ್ಯಾಟ್ಸ್’ಮನ್’ಗಳಾದ ಉಪನಾಯಕ ಆರ್.ಸಮರ್ಥ್ ಮತ್ತು ಮಾಜಿ ನಾಯಕ ಮನೀಶ್ ಪಾಂಡೆ ಶೂನ್ಯಕ್ಕೆ ಔಟಾಗಿದ್ದರಿಂದ ನಾಯಕ ಮಯಾಂಕ್ ಒತ್ತಡದಲ್ಲೇ ಆಡುವಂತಾಯ್ತು. ತಮ್ಮ ಹೆಗಲ ಮೇಲೆ ಬಿದ್ದ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ ಮಯಾಂಕ್ ಆಕರ್ಷಕ ದ್ವಿಶತಕ ಬಾರಿಸಿದರು. ಒಟ್ಟು 360 ಎಸೆತಗಳನ್ನೆದುರಿಸಿದ ಮಯಾಂಕ್ 17 ಬೌಂಡರಿ ಹಾಗೂ 5 ಸಿಕ್ಸರ್’ಗಳ ನೆರವಿನಿಂದ 208 ರನ್ ಗಳಿಸಿ ಔಟಾದರು. ಮಯಾಂಕ್ ದ್ವಿಶತಕದ ಬಲದಿಂದ ಕರ್ನಾಟಕ ತಂಡ 3ನೇ ದಿನದಂತ್ಯಕ್ಕೆ ತನ್ನ ಪ್ರಥಮ ಇನ್ನಿಂಗ್ಸ್’ನಲ್ಲಿ 6 ವಿಕೆಟ್ ನಷ್ಟಕ್ಕೆ 410 ರನ್ ಗಳಿಸಿದ್ದು, 68 ರನ್’ಗಳ ಮುನ್ನಡೆ ಸಂಪಾದಿಸಿ ಕನಿಷ್ಠ 3 ಅಂಕಗಳನ್ನು ಖಚಿತ ಪಡಿಸಿಕೊಂಡಿದೆ. ಆತಿಥೇಯ ಕೇರಳ ತಂಡ ತನ್ನ ಮೊದಲ ಇನ್ನಿಂಗ್ಸ್’ನಲ್ಲಿ 342 ರನ್ನಿಗೆ ಆಲೌಟಾಗಿತ್ತು.

ಇದು ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಮಯಾಂಕ್ ಅಗರ್ವಾಲ್ ಗಳಿಸಿದ 2ನೇ ಶತಕ. ಇದಕ್ಕೂ ಮೊದಲು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಛತ್ತೀಸ್’ಗಢ ವಿರುದ್ಧದ ಪಂದ್ಯದಲ್ಲಿ ಮಯಾಂಕ್ ಭರ್ಜರಿ 117 ರನ್ ಬಾರಿಸಿದ್ದರು. 32 ವರ್ಷದ ಮಯಾಂಕ್ 2022ರ ಮಾರ್ಚ್ ಬಳಿಕ ಭಾರತ ಪರ ಯಾವುದೇ ಟೆಸ್ಟ್ ಪಂದ್ಯ ವಾಡಿಲ್ಲ. ಟೀಮ್ ಇಂಡಿಯಾ ಟೆಸ್ಟ್ ತಂಡದಲ್ಲಿ ಮಯಾಂಕ್ ಅಗರ್ವಾಲ್ ಜಾಗವನ್ನು ಪಂಜಾಬ್’ನ ಮತ್ತೊಬ್ಬ ಬಲಗೈ ಓಪನರ್ ಶುಭಮನ್ ಗಿಲ್ ಆಕ್ರಮಿಸಿಕೊಂಡಿದ್ದಾರೆ. ಈ ಬಾರಿಯ ರಣಜಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ತೋರಿ ಮತ್ತೆ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ : Gujarat all our for 54 runs : ಟಾರ್ಗೆಟ್ 73, ಗುಜರಾತ್ 54ಕ್ಕೆ ಆಲೌಟ್; ರಣಜಿ ಟ್ರೋಫಿಯಲ್ಲೊಂದು ಅಚ್ಚರಿಯ ಫಲಿತಾಂಶ

ಇದನ್ನೂ ಓದಿ : Yuvraj Singh – Shubman Gill : ದ್ವಿಶತಕ ವೀರ ಶುಭಮನ್ ಗಿಲ್‌ಗೆ ಯುವರಾಜನೇ ದ್ರೋಣಾಚಾರ್ಯ

Mayank Agarwal Double century in Ranji Trophy 2023 Karnataka vs Kerala

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular