ಮಂಗಳವಾರ, ಮೇ 13, 2025
HomeCinemaMalaika Arora : 50 ರ ಹರೆಯದಲ್ಲೂ 18 ರ ತಾರುಣ್ಯ : ಮತ್ತೇರಿಸುವ ಮಲೈಕಾ...

Malaika Arora : 50 ರ ಹರೆಯದಲ್ಲೂ 18 ರ ತಾರುಣ್ಯ : ಮತ್ತೇರಿಸುವ ಮಲೈಕಾ ಅರೋರಾ ಯೋಗಾಭ್ಯಾಸದ ವಿಡಿಯೋ ವೈರಲ್

- Advertisement -

ಯೋಗಾಭ್ಯಾಸ ಮೈಮನಗಳಿಗೆ ಚೈತನ್ಯ ತುಂಬುತ್ತೆ ಅನ್ನೋ ಮಾತಿದೆಯಾದರೂ ಸೆಲೆಬ್ರೆಟಿಗಳು ಯೋಗದ ಮೊರೆ ಹೋಗೋದು ಕಡಿಮೆ. ಆದರೆ ಬಾಲಿವುಡ್ ನ ಎವರ್ ಗ್ರೀನ್ ಸುಂದರಿ ಮಲೈಕಾ ಅರೋರಾ (Malaika Arora) ಮಾತ್ರ ಯೋಗಾ ಮ್ಯಾಟ್ ಮೇಲೆ ಹಾವಿನಂತೆ ಮೈಬಳುಕಿಸಿ ಯೋಗಕ್ಕೂ ಗ್ಲ್ಯಾಮರ್ ಟಚ್ ನೀಡಿ ಗಮನ ಸೆಳೆದಿದ್ದಾರೆ. ಫಿಟ್ ಮೈಕಟ್ಟು, ಅಳತೆ ಮೀರದ ಅಂಗಸೌಷ್ಠವದಿಂದ ಈಗಲೂ 18 ರ ಹರೆಯದ ನಟಿಮಣಿಯರಿಗೂ ಸ್ಪರ್ಧೆ ನೀಡುವ ಸುಂದರಿ ಮಲೈಕಾ ಅರೋರಾ. ಇನ್ನೇನು ಬದುಕಿನ ಸುವರ್ಣಕಾಲ ಅಂದ್ರೇ ಐವತ್ತೆ ವರ್ಷದ ಸನಿಹದಲ್ಲಿರೋ ಮಲೈಕಾ ಅರೋರಾ ವರ್ಕೌಟ್, ಯೋಗದ ಮೂಲಕವೇ ತಮ್ಮ ಸೌಂದರ್ಯ ಮಾಸದಂತೆ ಕಾದಿಟ್ಟುಕೊಂಡಿದ್ದಾರೆ.

ಪ್ರತಿದಿನವೂ ಗಂಟೆ ಗಂಟೆ ಯೋಗ ವರ್ಕೌಟ್ ಮಾಡೋ ಮಲೈಕಾ ಅರೋರಾ ಸದಾ ಫಿಟನೆಸ್ ಕಾನ್ಸಿಯಸ್ ಆಗಿರ್ತಾರೆ. ಬಾಲಿವುಡ್ ನಲ್ಲಿ ತಮ್ಮ ಸ್ಟೈಲ್, ಮೋಹಕ ಸೌಂದರ್ಯ ಹಾಗೂ ಸ್ಪೆಶಲ್ ಡ್ರೆಸ್ಸಿಂಗ್ ಸೆನ್ಸ್ ಕಾರಣಕ್ಕೆ ಸುದ್ದಿಯಾಗೋ ಮಲೈಕಾ ಯೋಗ ಹಾಗೂ ವರ್ಕೌಟ್ ವಿಡಿಯೋಗಳ ಮೂಲಕವೂ ಅಭಿಮಾನಿಗಳಿಗೆ ಗೈಡ್ ಮಾಡ್ತಾರೆ. ಸದ್ಯ ಮಲೈಕಾ ಅರೋರಾ ದಿವಾ ಯೋಗಾದ ಮೂಲಕ ಬೆನ್ನು ಹುರಿ ಹಾಗೂ ಮಾನಸಿಕ ದೈಹಿಕ ಆರೋಗ್ಯಕ್ಕಾಗಿ ಯಾವ ರೀತಿಯ ಯೋಗಾಭ್ಯಾಸ ಮಾಡಬೇಕು ಎಂಬ ಮಾಹಿತಿ ನೀಡಿದ್ದಾರೆ.

ಮೆತ್ತನೆಯ ರೋಲರ್ ಬಳಸಿ ಬೆನ್ನು ಹುರಿಯ ಆರೋಗ್ಯವರ್ಧನೆ ಮಾಡಿಕೊಳ್ಳೋದು ಹೇಗೆ ಎಂಬುದನ್ನು ಮಲೈಕಾ ಸ್ವತಃ ಪ್ರ್ಯಾಕ್ಟೀಸ್ ಮಾಡೋ ಮೂಲಕ ತೋರಿಸಿಕೊಟ್ಟಿದ್ದಾರೆ. ಮಾತ್ರವಲ್ಲ ಈ ರೀತಿಯ ಯೋಗದ ಅಭ್ಯಾಸದಿಂದ ಸ್ಪೈನಲ್ ಕಾರ್ಡ್ ಗೆ ಯಾವ ರೀತಿ ಬಲತುಂಬಲು ಸಾಧ್ಯವಾಗುತ್ತದೆ. ಮಾನಸಿಕ, ದೈಹಿಕ ಬಲವನ್ನು ತುಂಬಿ ಒತ್ತಡ, ಮಾನಸಿಕ ಖಿನ್ನತೆಯಂತಹ ಸಮಸ್ಯೆಯಿಂದ ಹೊರಬರಲು ಸಹಾಯವಾಗುತ್ತದೆ ಎಂಬುದನ್ನುವಿವರಿಸಿದ್ದಾರೆ.

ಸದಾ ಮಾದಕ ಉಡುಗೆಗಳಲ್ಲೇ ಕಾಣಿಸಿಕೊಳ್ಳೋ ಮಲೈಕಾ ಅರೋರಾ ಯೋಗದಲ್ಲೂ ಕೂಡ ಸಖತ್ ಹಾಟ್ ಹಾಟ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದು, ಪಡ್ಡೆ ಹೈಕಳು ವಿಡಿಯೋ ನೋಡಿ ನಿದ್ದೆಗೆಡ್ತಿದ್ದಾರೆ.

ಬಾಲಿವುಡ್ ನ ಹಲವು ರಿಯಾಲಿಟಿ ಶೋಗಳಲ್ಲಿ ನಿರ್ಣಾಯಕಿಯಾಗಿ ಪಾಲ್ಗೊಂಡ ಅನುಭವ ಹೊಂದಿರೋ ಮಲೈಕಾ ಕಳೆದ ಹಲವು ದಶಕದಿಂದ ಬಾಲಿವುಡ್ ನಲ್ಲಿ ಸಕ್ರಿಯ ರಾಗಿದ್ದಾರೆ. ಸಲ್ಮಾನ್ ಸಹೋದರ ಅರ್ಬಾಜ್ ಖಾನ್ ರನ್ನು ಮದುವೆಯಾದ ಮಲೈಕಾಗೆ 19 ವರ್ಷದ ಮಗನಿದ್ದಾನೆ. ಡಿವೋರ್ಸ್ ಪಡೆದಿದ್ದರು ಪ್ರತಿಭಾರಿ ಮಲೈಕಾ ಹಾಗೂ ಅರ್ಬಾಜ್ ಖಾನ್ ಪುತ್ರನನ್ನು ವಿದೇಶದಿಂದ ಸ್ವಾಗತಿಸಲು ಹಾಗೂ ಕಳುಹಿಸಲು ವಿಮಾನ ನಿಲ್ದಾಣಕ್ಕೆ ಹಾಜರಾಗುವ ಮೂಲಕ ಗಮನ ಸೆಳೆಯುತ್ತಾರೆ.

ಇದನ್ನೂ ಓದಿ : I ಪೋಟೋಸ್ ಗೆ ಮನಸೋತ ಸ್ಯಾಂಡಲ್ ವುಡ್: ನಟಿಮಣಿಯರ ಪೋಟೋಸ್ ವೈರಲ್

ಇದನ್ನೂ ಓದಿ : ಕಿರಿಕ್‌ ಪಾರ್ಟಿ 2 ನಲ್ಲಿ ಆಗುತ್ತಾ ಇಲ್ಲವಾ ? ಟ್ವೀಟ್‌ ಮೂಲಕ ಸ್ಪಷ್ಟನೆ ನೀಡಿದ ರಕ್ಷಿತ್ ಶೆಟ್ಟಿ

English News Click Here

Malaika Arora Yoga Practice Video Goes Viral

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular