ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟಿಗರ ಹಾಟ್ ಫೇವರೇಟ್. ಕ್ರಿಕೆಟ್ ಇತಿಹಾಸಲ್ಲಿ ಹೊಸ ದಾಖಲೆಗಳನ್ನು ಬರೆದಿರೋ ಕೊಯ್ಲಿ ಇಂದು ನಡೆಯೋ ಪಂದ್ಯದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲು ಸಿದ್ದರಾಗಿದ್ದಾರೆ.

ಟಿ 20 ಕ್ರಿಕೆಟ್ ನಲ್ಲಿ ಭಾರತ ಪರ ಅತೀ ಹೆಚ್ಚು ರನ್ ಗಳಿಸಿದ ದಾಖಲೆ ಇದುವರೆಗೂ ಭಾರತ ತಂಡ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿದೆ. ಈ ದಾಖಲೆ ಮುರಿಯಲು ವಿರಾಟ್ ಕೊಯ್ಲಿಗೆ ಬೇಕಿರುವುದು ಕೇವಲ 25 ರನ್. ಹೀಗಾಗಿ ಇಂದು ನಡೆಯೋ ಪಂದ್ಯದಲ್ಲಿ ರನ್ ಮಿಷಿನ್ ಕೊಯ್ಲಿ 25 ರನ್ ಬಾರಿಸಿದ್ರೆ ಟಿ20 ಕ್ರಿಕೆಟ್ ನಲ್ಲಿ ಹೊಸ ಇತಿಹಾಸ ಸ್ಥಾಪಿಸಲಿದ್ದಾರೆ. ವಿಶ್ವದಾಖಲೆಯ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರೋ ಕೊಯ್ಲಿ ವಿಶ್ವದಾಖಲೆಯನ್ನು ಮುರಿಯುವ ಸನಿಹದಲ್ಲಿದ್ದಾರೆ. ಸೌತ್ ಆಫ್ರಿಕಾ ಆಟಗಾರ ಫಾಫ್ ಡುಪ್ಲೆಸಿಸ್ (1,273) ಮೊದಲ ಸ್ಥಾನದಲ್ಲಿದ್ರೆ, ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ (1,148) ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಮಹೇಂದ್ರ ಸಿಂಗ್ ಧೋನಿ ಮೂರನೇ ಸ್ಥಾನದಲ್ಲಿದ್ದಾರೆ.

ಅಲ್ಲದೇ ವಿಶ್ವದಾಖಲೆ ಬರೋದಕ್ಕೂ ಕೊಯ್ಲಿಗೆ ಅವಕಾಶವಿದೆ. ಇಂದಿನ ಪಂದ್ಯದಲ್ಲಿ ಕೊಯ್ಲಿ ಅರ್ಧ ಶತಕ ಬಾರಿಸಿದ್ರೆ, ಟಿ-20 ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಅರ್ಧಶತಕ ಬಾರಿಸಿದ ವಿಶ್ವದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ವಿಲಿಯಮ್ಸನ್ ಹಾಗೂ ಪಾಫ್ ಡುಪ್ಲೆಸಿಸ್ ಜಂಟಿಯಾಗಿ ಅಗ್ರ ಸ್ಥಾನದಲ್ಲಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಕೊಯ್ಲಿ ಉತ್ತಮ ಆಟಪ್ರದರ್ಶಿಸಿದ್ರೆ ಭಾರತದ ಗೆಲುವು ಸನಿಹವಾಗೋದ್ರ ಜೊತೆಗೆ ಹೊಸ ದಾಖಲೆಯೂ ನಿರ್ಮಾಣವಾಗಲಿದೆ. ಭಾರತ ಇಂದಿನ ಪಂದ್ಯವನ್ನು ಗೆದ್ರೆ ಸರಣಿಯನ್ನು ಕೈವಶ ಮಾಡಿಕೊಳ್ಳಲಿದೆ.