ಭಾರತ ಕ್ರಿಕೇಟ್ ತಂಡದ ಮಾಜಿ ಕ್ಯಾಪ್ಟನ್ ಧೋನಿಗೆ (MS Dhoni) ಕರ್ನಾಟಕ ಶಿಕ್ಷಣ ಇಲಾಖೆ (Karnataka Education Department) ಬಿಸಿ ಮುಟ್ಟಿಸಿದೆ. ಬೆಂಗಳೂರಿನಲ್ಲಿ ಶಾಲೆ ತೆರೆದಿದ್ದ ಧೋನಿಗೆ ಕರ್ನಾಟಕ ಶಿಕ್ಷಣ ಇಲಾಖೆ ನೋಟಿಸ್ ಜಾರಿಗೊಳಿಸಿದೆ. ಮಹೇಂದ್ರ ಸಿಂಗ್ ಧೋನಿ ಶಾಲೆ (MS Dhoni Global School) ಕರ್ನಾಟಕ ರಾಜ್ಯ ಪಠ್ಯಕ್ರಮದಡಿ ಬೋಧನೆ ಮಾಡಲು ಅನುಮತಿ ಪಡೆದಿದೆ. ಆದ್ರೆ ಮಾಡ್ತಿರೋದು ಮಾತ್ರ CBSC ಪಾಠ! ಎಂಬ ವಿಷಯ ಈ ನೋಟಿಸ್‌ನಿಂದ ಬಯಲಾಗಿದೆ.
248 ವಿದ್ಯಾರ್ಥಿಗಳು ಪ್ರವೇಶ ಪಡೆದು ವ್ಯಾಸಂಗ
ಅಂದಹಾಗೆ ಬೆಂಗಳೂರಿನ ಸಿಂಗಸಂದ್ರದಲ್ಲಿರೋ ಮಹೇಂದ್ರ ಸಿಂಗ್ ಧೋನಿ ಗ್ಲೋಬಲ್ ಸ್ಕೂಲ್‌ನಲ್ಲಿ ಈ ವರ್ಷ 248 ವಿದ್ಯಾರ್ಥಿಗಳು ಪ್ರವೇಶ ಪಡೆದು ವ್ಯಾಸಂಗ ಮಾಡ್ತಿದ್ದಾರೆ. ಒಂದನೇ ತರಗತಿಯಿಂದ 8 ನೇ ತರಗತಿಯವರೆಗೂ ಈ ಶಾಲೆಯಲ್ಲಿ ಪಾಠ ಹೇಳಲಾಗುತ್ತೆ. ಆದ್ರೆ ಹೇಳೋ ಪಾಠ ಸಿಎಬಿಎಸ್ಸಿದು, ಪಡೆದ ಅನುಮತಿ ರಾಜ್ಯ ಪಠ್ಯಕ್ರಮದ್ದು ಅನ್ನೋದು ನೋಟಿಸ್ ಜಾರಿಯಿಂದ ಬಹಿರಂಗವಾಗಿದೆ.
ಇಲ್ಲಿ ಓದ್ಬೇಕಂದ್ರೆ 1ನೇ ತರಗತಿಗೆ ಫೀಸ್ ಎಷ್ಟು ಗೊತ್ತೇ?
ಈ ಗ್ಲೋಬಲ್ ಶಾಲೆಯಲ್ಲಿ ಒಂದನೇ ತರಗತಿಗೆ ಮಗುವನ್ನು ಸೇರಿಸೋಕೆ ಬರೋಬ್ಬರಿ 1,47,000 ರೂ. ಶುಲ್ಕ ವಿಧಿಸಲಾಗುತ್ತದೆ. ಎರಡನೇ ತರಗತಿಗೆ ಈ ಫೀಸ್ ಮೊತ್ತ ಇನ್ನಷ್ಟು ಹೆಚ್ಚು. ಪಠ್ಯ ಪುಸ್ತಕ, ಯುನಿಫಾರ್ಮ್ ಎಲ್ಲ ಸೇರಿ 2ನೇ ಕ್ಲಾಸ್ಗೆ ಮಗುವನ್ನು ಸೇರಿಸಲಹ ಬರೋಬ್ಬರಿ 1,56,000 ಹಣ ಪಾವತಿಸಬೇಕಿದೆ.