Meghana Raj : ಸ್ಯಾಂಡಲ್ ವುಡ್ ನಟ-ನಟಿಯರಿಗೆ ಸ್ಟಾರ್ ಸ್ನೇಹಿತರು ಎಷ್ಟಿದ್ದರೂ ಒಂದಿಷ್ಟು ಆತ್ಮೀಯ ಸ್ನೇಹ ಅನ್ನೋದು ಇದ್ದೇ ಇರುತ್ತೆ. ಅದು ಸಿನಿಮಾ ರಂಗದಿಂದ ಹೊರಗಿನ ವ್ಯಕ್ತಿಗಳ ಜೊತೆ ಅನ್ನೋದು ಅಷ್ಟೇ ವಿಶೇಷ. ಅದರಲ್ಲೂ ಸ್ಯಾಂಡಲ್ ವುಡ್ ಮನೆಮಗಳು ಅಂತನೇ ಕರೆಸಿಕೊಳ್ಳೋ ಮೇಘನಾ ಸರ್ಜಾಗಂತೂ ಸ್ನೇಹಿತ-ಸ್ನೇಹಿತೆಯರ ದೊಡ್ಡ ಬಳಗವೇ ಇದೆ. ಅಂತಹ ಸ್ಪೆಶಲ್ ಪ್ರೆಂಡ್ಸ್ ಜೊತೆಗಿನ ಬಾಂಡಿಂಗ್ಸ್ ಹಂಚಿಕೊಂಡಿದ್ದಾರೆ ನಟಿ ಮೇಘನಾ.
ಮೇಘನಾ ಸರ್ಜಾ ಬದುಕಿನಲ್ಲಿ ಸಾಕಷ್ಟು ನೋವುಂಡರೂ ಮತ್ತೆ ಫಿನಿಕ್ಸ್ ಪಕ್ಷಿಯಂತೇ ಮೇಲೆದ್ದು ಬಂದು ಮಗನಿಗಾಗಿ ಜೀವನವನ್ನು ಮತ್ತೆ ಶೃಂಗರಿಸಿದ ಗಟ್ಟಿಗಿತ್ತಿ. ತಾಯ್ತನದ ಸವಿ ಉಣ್ಣುತ್ತಿರುವಾಗಲೇ ಪ್ರೀತಿಸುವ ಪತಿಯನ್ನು ಕಳೆದುಕೊಂಡ ಮೇಘನಾಗೆ ಆಸರೆಯಾಗಿ ನಿಂತಿದ್ದು ಆಕೆಯ ಸ್ನೇಹಬಳಗ. ಚಿರು ಹಾಗೂ ಮೇಘನಾ ಬಾಲ್ಯದಿಂದಲೂ ಒಳ್ಳೆಯ ಸ್ನೇಹಿತರಾಗಿದ್ದರಿಂದ ಹಾಗೂ ಇಬ್ಬರಿಗೂ ಸಾಕಷ್ಟು ಕಾಮನ್ ಪ್ರೆಂಡ್ಸ್ ಇದ್ದಿದ್ದರಿಂದ ಮೇಘನಾ ಯಾವಾಗಲೂ ಸ್ನೇಹಿತ-ಸ್ನೇಹಿತೆಯರ ಜೊತೆಗೆ ಸಮಯ ಕಳೆದಿದ್ದೇ ಹೆಚ್ಚು. ಚಿರು ಮೇಘನಾ ಒಂಟಿಯಾಗಿ ಭೇಟಿ ಮಾಡಿದ್ದಕ್ಕಿಂತ ಪ್ರೆಂಡ್ಸ್ ಜೊತೆಗೆ ಔಟಿಂಗ್ ಹೋಗ್ತಿದ್ವಿ ಎಂದು ಹಲವಾರು ಸಂದರ್ಭದಲ್ಲಿ ಮೇಘನಾ ಹೇಳಿಕೊಂಡಿದ್ದರು.
ಈಗ ಚಿರು ಇಲ್ಲವಾದರೂ ಮೇಘನಾ ಹಾಗೂ ಸ್ನೇಹದ ಭಾಷ್ಯ ಬದಲಾಗಿಲ್ಲ. ಈಗಲೂ ಚಿರು ನೆನಪಲ್ಲೇ ಮೇಘನಾ ಹಾಗೂ ಪ್ರೆಂಡ್ಸ್ ಟೀಂ ಮೀಟ್ ಮಾಡಿ ಔಟಿಂಗ್ ಗಳನ್ನು ಎಂಜಾಯ್ ಮಾಡ್ತಾರೆ. ಶೂಟಿಂಗ್ ಮಧ್ಯೆ ಈ ಭಾನುವಾರವೂ ಮೇಘನಾ ಹಾಗೂ ಪ್ರೆಂಡ್ಸ್ ಟೀಂ ಒಂದೆಡೆ ಸೇರಿ ಊಟ ಮಾಡಿದ್ದು, ಫ್ಯಾಮಿಲಿ ಜೊತೆ, ಮಕ್ಕಳ ಜೊತೆ ಆಟವಾಡಿ ಎಂಜಾಯ್ ಮಾಡಿದೆ. ಈ ಸ್ಪೆಶಲ್ ಪೋಟೋಗಳನ್ನು ನಟಿ ಮೇಘನಾ ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಮಾತ್ರವಲ್ಲ all about last night ಎಂದು ಟೈಟಲ್ ಕೂಡ ನೀಡಿದ್ದಾರೆ.
ಈ ಪೋಟೋಗಳಲ್ಲಿ ಮೇಘನಾ ಹಾಗೂ ಚಿರುಗೆ ಅತ್ಯಂತ ಹೆಚ್ಚು ಆತ್ಮೀಯವಾಗಿದ್ದ ಪನ್ನಗಾಭರಣ ಕೂಡ ಇದ್ದಾರೆ. ಸದ್ಯ ಮೇಘನಾ ಸರ್ಜಾ ಕನ್ನಡ ಸಿನಿಮಾಗಳಿಗೆ ಕಮ್ ಬ್ಯಾಕ್ ಮಾಡಿದ್ದು, ಪನ್ನಗಾ ಡೈರೈಕ್ಷನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಲ್ಲದೆ ಹಲವು ಜಾಹೀರಾತುಗಳಲ್ಲೂ ನಟಿಸಿರೋ ಮೇಘನಾ ಕಲರ್ಸ್ ಕನ್ನಡ ಮೂಲಕ ರಿಯಾಲಿಟಿ ಶೋಗೂ ಎಂಟ್ರಿ ನೀಡಿದ್ದರು . ಮೇಘನಾಗೆ ಮೊದಲು ಅವಕಾಶ ನೀಡಿದ್ದು ಹಾಗೂ ಅತ್ಯಂತ ಹೆಚ್ಚು ಐಡೆಂಟಿಟಿ ನೀಡಿದ್ದು ಮಲೆಯಾಳಂ ಭಾಷೆಯ ಚಿತ್ರರಂಗ. ಹೀಗಾಗಿ ಮೇಘನಾ ಅವಕಾಶ ಸಿಕ್ಕರೇ ಮತ್ತೊಮ್ಮೆ ಮಲೆಯಾಳಂ ಇಂಡಸ್ಟ್ರಿಗೆ ಹೋಗೋದಾಗಿಯೂ ಹೇಳಿಕೊಂಡಿದ್ದಾರೆ
ಇದನ್ನೂ ಓದಿ : Meghana Raj Sarja Photo Viral : ಥೈಲ್ಯಾಂಡ್ ನಲ್ಲಿ ಮೇಘನಾ ರಾಜ್ ಸರ್ಜಾ : ಬಿಕನಿ ಪೋಟೋ ವೈರಲ್
ಇದನ್ನೂ ಓದಿ : Meghana Raj Chiranjeevi Sarja : ಪಯಣ ಪ್ರೀತಿಯ ಜೊತೆಗೆ : ಮೇಘನಾ ರಾಜ್ -ಚಿರಂಜೀವಿ ಸರ್ಜಾ ಹೊಸ ಪೋಟೋ ವೈರಲ್
English news Click here
Meghna Raj outing amidst shooting dubbing post viral