ಬುಧವಾರ, ಏಪ್ರಿಲ್ 30, 2025
HomepoliticsNext CM of Karnataka : ಬೊಮ್ಮಾಯಿ ಬಳಿಕ ಬಿ.ಎಲ್.ಸಂತೋಷ್ ಸಿಎಂ: ನಿಜವಾಗುತ್ತಾ ಎಚ್.ಡಿ.ಕುಮಾರಸ್ವಾಮಿ ಬ್ರಾಹ್ಮಣ ಸಿಎಂ ಮಾತು

Next CM of Karnataka : ಬೊಮ್ಮಾಯಿ ಬಳಿಕ ಬಿ.ಎಲ್.ಸಂತೋಷ್ ಸಿಎಂ: ನಿಜವಾಗುತ್ತಾ ಎಚ್.ಡಿ.ಕುಮಾರಸ್ವಾಮಿ ಬ್ರಾಹ್ಮಣ ಸಿಎಂ ಮಾತು

- Advertisement -

ಬೆಂಗಳೂರು : Next CM of Karnataka : ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿದೆ. ಮತ್ತೊಮ್ಮೆ ಅಧಿಕಾರಕ್ಕೆ ಬರೋ ಕನಸಿನಲ್ಲಿ ಬಿಜೆಪಿ ಜನರ ಮನಗೆಲ್ಲಲು ಮುಂದಾಗಿದ್ದರೇ, ಅಧಿಕಾರಕ್ಕೆ ಬರೋ ಮುನ್ನವೇ ಸಿಎಂ ಯಾರು ಎನ್ನುವ ಚರ್ಚೆಯೂ ಜೋರಾಗಿದೆ. ಈ ಮಧ್ಯೆ ಈ ಭಾರಿ ಬಿಜೆಪಿ ಅಧಿಕಾರಕ್ಕೆ ಬಂದ್ರೇ, ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸಿಎಂ ಎಂಬ ಅಚ್ಚರಿಯ ಸಂಗತಿ ಬಿಜೆಪಿ ವಲಯದಿಂದಲೇ ಖಚಿತಗೊಳ್ತಿದೆ.

ಪ್ರತಿಭಾರಿ ಬಿಜೆಪಿ ಹಾಲಿ ಸಿಎಂಗಳ ನೇತೃತ್ವದಲ್ಲಿ ಚುನಾವಣೆಗೆ ಸಜ್ಜಾಗುತ್ತಿದ್ದದ್ದು ವಾಡಿಕೆ. ಆದರೆ ಈ ಭಾರಿ ಕೊಂಚ ಬದಲಾವಣೆ ಎಂಬಂತೆ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಚುನಾವಣೆ ಸಂಘಟನಾ ಕಾರ್ಯದಲ್ಲಿ ಆಕ್ಟಿವ್ ಆಗಿದ್ದಾರೆ.ಜಿಲ್ಲೆ ಜಿಲ್ಲೆಗೂ ಭೇಟಿ ನೀಡಿ ಗೆಲ್ಲುವ ಅಭ್ಯರ್ಥಿ ಹಾಗೂ ಗಳಿಸಬಹುದಾದ ಸೀಟ್ ಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲ ಗುಜರಾತ್ ಹಾಗೂ ಯುಪಿ ಮಾದರಿಯಲ್ಲಿ ಬಿಜೆಪಿ ಟಿಕೇಟ್ ಹಂಚಿಕೆ ಮಾಡೋದರಿಂದ ಅಭ್ಯರ್ಥಿಗಳ ಗ್ರೌಂಡ್ ರಿಪೋರ್ಟ್ ಪಡೆಯುತ್ತಿದ್ದಾರಂತೆ.

ಈ ಭಾರಿ ಬಿ.ಎಲ್.ಸಂತೋಷ್ ಹೀಗೆ ಚುನಾವಣೆಯ ತಳಮಟ್ಟದ ಸಿದ್ಧತೆಗೆ ತೊಡಗಿರೋದಿಕ್ಕೆ ವಿಶಿಷ್ಟ ಕಾರಣವೊಂದು ಬಿಜೆಪಿ ವಲಯದಿಂದಲೇ ಖಚಿತಗೊಳ್ತಿದೆ. ಹೌದು ಈ ಭಾರಿ ಅಧಿಕಾರಕ್ಕೇರುವ ಬಿಜೆಪಿಯ ನಾಯಕತ್ವವನ್ನು ಬಿ.ಎಲ್.ಸಂತೋಷ್ ವಹಿಸಲಿದ್ದಾರಂತೆ. ಅಂದ್ರೇ ಈ ಭಾರಿ ಕರ್ನಾಟಕದ ಸಿಎಂ ಸ್ಥಾನಕ್ಕೆ ಬೊಮ್ಮರಬೆಟ್ಟು ಲಕ್ಷ್ಮೀ ಜನಾರ್ಧನ್ ಸಂತೋಷ್, ಅಲಿಯಾಸ್ ಬಿ.ಎಲ್.ಸಂತೋಷ್ ನೇಮಕ ಬಹುತೇಕ ಖಚಿತ ಎನ್ನಲಾಗಿದೆ.

ಅಪ್ಪಟ ಆರ್.ಎಸ್.ಎಸ್ ಹಿನ್ನೆಲೆಯಿಂದ ಬಂದ ಬಿ.ಎಲ್.ಎಸ್ ನೇಮಕ ದಿಂದ ಪಕ್ಷದ ಸಂಘಟನೆ ಹಾಗೂ ವಲಸಿಗರಿಗೆ ಹುದ್ದೆ ನೀಡುತ್ತಾರೆ ಎಂಬ ಆರೋಪ ದಿಂದಲೂ ತಪ್ಪಿಸಿಕೊಳ್ಳಬಹುದು ಎಂಬುದು ಬಿಜೆಪಿ ಹೈಕಮಾಂಡ್ ಲೆಕ್ಕಾಚಾರ ಎನ್ನಲಾಗ್ತಿದೆ. ಅಲ್ಲದೇ ಬಿ.ಎಸ್.ಯಡಿಯೂರಪ್ಪ ನೀಡಿದ ಸಮರ್ಥ ಆಡಳಿತದ ಬಳಿಕ ಸಿಎಂ ಸ್ಥಾನದ ಚಾರ್ಮ್ ಕಂಡುಕೊಳ್ಳುವಲ್ಲಿ ಬಸವರಾಜ್ ಬೊಮ್ಮಾಯಿ ವಿಫಲರಾಗಿದ್ದಾರೆ. ಹೀಗಾಗಿ ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷವನ್ನು ಸಂಘಟಿಸುವ ಹಾಗೂ ಸಮರ್ಥ ನಾಯಕತ್ವ ನೀಡುವಂತ ವ್ಯಕ್ತಿಯಾಗಿ ಬಿ.ಎಲ್.ಸಂತೋಷ್ ರನ್ನು ಸಿಎಂ ಸ್ಥಾನಕ್ಕೆ ಏರಿಸಲು ಮೋದಿ ಹಾಗೂ ಪಾಳಯ ಒಳಗೊಳಗೆ ತೀರ್ಮಾನಿಸಿದೆ ಎನ್ನಲಾಗಿದೆ.

ಎಲ್ಲ ಪಕ್ಷಗಳ ಆಂತರಿಕ ವಿಚಾರವನ್ನು ಬಲ್ಲ ಎಚ್ಡಿಕೆಗೆ ಈ ಬಗ್ಗೆ ಸುಳಿವು ಸಿಕ್ಕಿದಂತಿದ್ದು , ಅದಕ್ಕಾಗಿಯೇ ಮಾಜಿಸಿಎಂ ಎಚ್ಡಿಕೆ , ಬಿಜೆಪಿ ಈ ಭಾರಿ ಆರ್.ಎಸ್.ಎಸ್ ಪಾಳಯದಿಂದ ಬಂದ ಬ್ರಾಹ್ಮಣರೊಬ್ಬರನ್ನು ಸಿಎಂ ಮಾಡಲಿದೆ ಎಂದು ಘಂಟಾಘೋಶವಾಗಿ ಹೇಳಿದ್ದಾರೆ ಎನ್ನಲಾಗ್ತಿದೆ. ಒಟ್ಟಿನಲ್ಲಿ ರಾಜ್ಯ ಬಿಜೆಪಿಗೆ ಮುಂದಿನ ದಿನಗಳಲ್ಲಿ ಅಪ್ಪಟ ಕಮಲ ಪಾಳಯದ ಬಿ.ಎಲ್.ಎಸ್ ನಾಯಕತ್ವ ಬಹುತೇಕ ಖಚಿತ ಎನ್ನಲಾಗಿದ್ದು, ಇದು ಸಿಎಂ ಸ್ಥಾನದ ಆಕಾಂಕ್ಷಿಗಳ ಎದೆಯಲ್ಲಿ ನಡುಕ ಮೂಡಿಸಿದೆ

ಇದನ್ನೂ ಓದಿ : ಎಚ್.ಡಿ. ಕುಮಾರಸ್ವಾಮಿ ಸಿಡಿಯೂ ಇದೆ: ಬಿಜೆಪಿ ರವಿಕುಮಾರ್ ಸ್ಪೋಟಕ ಹೇಳಿಕೆ

ಇದನ್ನೂ ಓದಿ : ಫ್ಯಾಮಿಲಿ ಪಾಲಿಟಿಕ್ಸ್ ಗೆ ಟ್ವಿಸ್ಟ್ : ದೇವೇಗೌಡರ ಅಂಗಳ ತಲುಪಿದ ಭವಾನಿ ಟಿಕೇಟ್ ಬೇಡಿಕೆ

Next CM of Karnataka after Basavaraj Bommai BL Santhosh CM coming true HD Kumaraswamy Brahmin CM speech

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular