ಸೋಮವಾರ, ಏಪ್ರಿಲ್ 28, 2025
HomeCinemaಪತಿ ಹುಟ್ಟುಹಬ್ಬಕ್ಕೆ ವಿಜಯಲಕ್ಷ್ಮಿ ವಿಶೇಷ ಫೋಟೊ ಹಂಚಿಕೊಂಡು ವಿಶ್ ಮಾಡಿದ್ದು ಹೇಗೆ ಗೊತ್ತಾ ?

ಪತಿ ಹುಟ್ಟುಹಬ್ಬಕ್ಕೆ ವಿಜಯಲಕ್ಷ್ಮಿ ವಿಶೇಷ ಫೋಟೊ ಹಂಚಿಕೊಂಡು ವಿಶ್ ಮಾಡಿದ್ದು ಹೇಗೆ ಗೊತ್ತಾ ?

- Advertisement -

ಸ್ಯಾಂಡಲ್‌ವುಡ್ ಚಾಲೆಂಜಿಂಗ್ ಸ್ಟಾರ್, ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ತಮ್ಮ ಇಂದು ( ಫೆಬ್ರವರಿ 16 ) 46ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕಳೆದೆರಡು ವರ್ಷಗಳಲ್ಲಿ ಕೊರೊನಾ ಹಾಗೂ ಗೆಳೆಯ ಪುನೀತ್ ರಾಜ್‌ಕುಮಾರ್ ನಿಧನ ಹೊಂದಿದ ಕಾರಣದಿಂದಾಗಿ ಹುಟ್ಟುಹಬ್ಬ ಆಚರಣೆಯಿಂದ ಹಿಂದೆ ಸರಿದಿದ್ದ ದರ್ಶನ್ ಹುಟ್ಟುಹಬ್ಬವನ್ನು ಈ ಬಾರಿ ಅಭಿಮಾನಿಗಳು ಭರ್ಜರಿಯಾಗಿ ಆಚರಿಸುತ್ತಿದ್ದಾರೆ. ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮೀ (Darshan – Vijayalakshmi) ವಿಶೇಷ ಪೋಟೋ ಶೇಟ್‌ ಮಾಡುವ ಮೂಲಕ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿದೆ.

ಹುಟ್ಟುಹಬ್ಬದಂದು ಕಳೆದೆರಡು ವರ್ಷಗಳಲ್ಲಿ ತಮ್ಮ ಸೆಲೆಬ್ರಿಟಿಗಳಿಗೆ ಸಿಗದಿದ್ದ ನಟ ದರ್ಶನ್ ಈ ಬಾರಿ ತಮ್ಮ ಮನೆಗೆ ಬಂದಿರುವ ಸಹಸ್ರಾರು ಅಭಿಮಾನಿಗಳನ್ನು ಖುದ್ದಾಗಿ ಭೇಟಿ ಮಾಡಿ ಕೈಕುಲುಕಿ ಶುಭಾಶಯಗಳನ್ನು ಸ್ವೀಕರಿಸಿ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಪ್ರತಿ ಬಾರಿಯಂತೆ ಈ ಬಾರಿಯೂ ಸಹ ದರ್ಶನ್ ತಮ್ಮ ಅಭಿಮಾನಿಗಳಿಗೆ ಕೇಕ್, ಹಾರ ಹಾಗೂ ಉಡುಗೊರೆ ತಂದು ದುಂದು ವೆಚ್ಚ ಮಾಡುವ ಬದಲು ದಿನಸಿ ಸಾಮಗ್ರಿಗಳನ್ನು ತನ್ನಿ ಎಂದು ತಿಳಿಸಿದ್ದು, ಅಭಿಮಾನಿಗಳು ದಾಸನ ಮಾತಿನಂತೆ ಮೂಟೆಗಟ್ಟಲೆ ದಿನಸಿ ಸಾಮಗ್ರಿಗಳನ್ನು ದರ್ಶನ್ ಮನೆಗೆ ತಲುಪಿಸಿದ್ದಾರೆ.

ಹೀಗೆ ಅಭಿಮಾನಿಗಳ ಜತೆ ಹುಟ್ಟುಹಬ್ಬದ ದಿನ ಕಳೆಯುತ್ತಿರುವ ದರ್ಶನ್ ಅವರಿಗೆ ಅಭಿಮಾನಿಗಳ ಪ್ರೀತಿಯ ಶುಭಾಶಯಗಳ ಜತೆಗೆ ಇಂಡಸ್ಟ್ರಿಯ ಹಲವು ಸ್ಟಾರ್‌ಗಳು, ಕಲಾವಿದರು, ನಿರ್ದೇಶಕರು ಹಾಗೂ ಪ್ರೊಡಕ್ಷನ್ ಹೌಸ್‌ಗಳೂ ಸಹ ಶುಭ ಕೋರಿದ್ದಾರೆ. ಜತೆಗೆ ದರ್ಶನ್ ನಟನೆಯ ಮುಂದಿನ ಪ್ರಾಜೆಕ್ಟ್‌ಗಳು ಯಾವುವು ಎಂಬದೂ ಸಹ ಬಹಿರಂಗೊಂಡಿವೆ. ಹೀಗೆ ಸ್ಯಾಂಡಲ್‌ವುಡ್ ದರ್ಶನ್ ಹುಟ್ಟುಹಬ್ಬದ ಅಂಗವಾಗಿ ಶುಭ ಕೋರಿದ್ದರೆ, ದರ್ಶನ್ ಮಡದಿ ವಿಜಯಲಕ್ಷ್ಮಿ ದರ್ಶನ್ ಸಹ ವಿಶೇಷ ಫೋಟೊ ಶೇರ್ ಮಾಡಿಕೊಳ್ಳುವ ಮೂಲಕ ಪತಿಗೆ ಶುಭ ಕೋರಿದ್ದಾರೆ.

ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಗಂಡನ ತೋಳನ್ನು ತಬ್ಬಿ ಕುಳಿತು ನಗುಮೊಗದ ಪೋಸ್ ನೀಡಿರುವ ಫೋಟೊವನ್ನು ಹಂಚಿಕೊಂಡು ಪತಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಸದ್ಯ ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ದರ್ಶನ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಜೋಡಿಯ ಈ ಕ್ಯೂಟ್ ಫೋಟೊಗೆ ಫಿದಾ ಆಗಿದ್ದಾರೆ. ಇನ್ನು ದರ್ಶನ್ ಹುಟ್ಟುಹಬ್ಬದ ಅಂಗವಾಗಿ ನಿನ್ನೆ ರಾತ್ರಿಯಿಂದಲೇ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ದರ್ಶನ್ ಮನೆ ಮುಂದೆ ಜಮಾಯಿಸಿದ್ದಾರೆ.

ಇದನ್ನೂ ಓದಿ : Actor Surya – Sachin Tendulkar : ತಮಿಳು ನಟ ಸೂರ್ಯ ಭೇಟಿ ಬಗ್ಗೆ ತಮಿಳಿನಲ್ಲಿಯೇ ಬರೆದುಕೊಂಡ ಸಚಿನ್ ತೆಂಡೂಲ್ಕರ್

ಇದನ್ನೂ ಓದಿ : ಶಿವರಾತ್ರಿ ಜಾಗರಣೆಗೆ ‘ರಾಜಕುಮಾರ’ ವಿಶೇಷ ಪ್ರದರ್ಶನ : ಬುಕಿಂಗ್ ಓಪನ್!

ಇದನ್ನೂ ಓದಿ : Darshan’s birthday : ನಟ ದರ್ಶನ್ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಸ್ಯಾಂಡಲ್‌ವುಡ್ ತಾರೆಯರು, ರಾಜಕೀಯ ಗಣ್ಯರು

ನೆಚ್ಚಿನ ನಟನಿಗಾಗಿ ಭಿನ್ನ ವಿಭಿನ್ನ ಉಡುಗೊರೆಗಳನ್ನು ತಂದಿರುವ ಅಭಿಮಾನಿಗಳು ಜೈ ಡಿ ಬಾಸ್ ಎಂದು ಜೈಕಾರ ಕೂಗಿ ಸಂಭ್ರಮಿಸಿದ್ದಾರೆ. ಅತ್ತ ಮನೆಗೆ ಬಂದ ಅಭಿಮಾನಿಗಳಿಗೆ ವಿಶೇಷ ಭೋಜನ ವ್ಯವಸ್ಥೆ ಮಾಡಿರುವ ದರ್ಶನ್ ತನ್ನ ಸೆಲೆಬ್ರಿಟಿಗಳ ಅತಿಥಿ ಸತ್ಕಾರ ಮಾಡಿದ್ದಾರೆ. ನಿನ್ನೆ ರಾತ್ರಿ ಅನ್ನ ಸಾಂಬಾರ್ ಹಾಗೂ ಮೈಸೂರು ಪಾಕ್ ಸವಿದಿದ್ದ ದರ್ಶನ್ ಅಭಿಮಾನಿಗಳಿಗೆ ಇಂದು ಬೆಳಗ್ಗೆ ಪಲಾವ್ ಹಾಗೂ ಬಜ್ಜಿಯನ್ನು ತಿಂಡಿಯಾಗಿ ನೀಡಲಾಗಿದೆ.

Darshan – Vijayalakshmi : Do you know how Vijayalakshmi shared a special photo and made a wish for her husband’s birthday?

RELATED ARTICLES

Most Popular