ಮಂಗಳೂರು : ಕರಾವಳಿ ಭಾಗದ ಅಡಿಕೆಗೆ ಬೆಳೆಗಾರರು ಸಂತಸಗೊಂಡಿದ್ದಾರೆ. ಮಾರುಕಟ್ಟೆಯಲ್ಲೀಗ ಅಡಿಕೆಗೆ ಬಂಪರ್ ಬೆಲೆ ಬಂದಿದೆ. ಇತಿಹಾಸದಲ್ಲಿಯೇ ಹೊಸ ಅಡಿಕೆ ಕೆ.ಜಿ.ಗೆ 505 ರೂಪಾಯಿಗೆ ಮಾರಾಟವಾಗುವ ಮೂಲಕ ಹೊಸ ದಾಖಲೆಯನ್ನು ಬರೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಇಂದು ಮಾರುಕಟ್ಟೆಯಲ್ಲಿ ಕೆ.ಜಿ ಅಡಿಕೆ 505ರೂಪಾಯಿಗೆ ಮಾರಾಟವಾಗಿದ್ದು, ಕ್ವಿಂಟಾಲ್ ಅಡಿಕೆ 50 ಸಾವಿರದ ಗಡಿದಾಟಿದೆ. ಹಳೆಯ ಹಾಗೂ ಹೊಸ ಅಡಿಕೆಯ ಧಾರಣೆ 500 ರೂಪಾಯಿಗಿಂತ ಹೆಚ್ಚಾಗಿರುವುದು ಹೊಸ ದಾಖಲೆಯಾಗಿದೆ.
ಉತ್ತರ ಭಾರತದಲ್ಲಿ ಅಡಿಕೆಗೆ ಭಾರೀ ಬೇಡಿಕೆ ಎದುರಾಗಿದೆ. ಹೀಗಾಗಿ ಅಡಿಕೆಯ ದರ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆಯಲ್ಲಿದ್ದಾರೆ ಬೆಳೆಗಾರರು. ಸದ್ಯ ಹೊಸ ಅಡಿಕೆಗೆ ಉತ್ತಮ ಧಾರಣೆ ಬಂದಿದ್ದರೂ ಕೂಡ ಅಡಿಕೆಯನ್ನು ಮಾರುಕಟ್ಟೆಗೆ ಬಿಡಲು ಬೆಳೆಗಾರರು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ.
ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಕೆ.ಜಿ. ಅಡಿಕೆಗೆ 480 ರೂಪಾಯಿ ದರವಿದೆ. ಆದ್ರೆ ಈ ದರ ಮುಂದಿನ ದಿನಗಳಲ್ಲಿ ಏರಿಕೆಯಾಗುವ ಸಾಧ್ಯತೆಯೂ ಇದೆ. ಇಷ್ಟು ವರ್ಷ ನಾನಾ ಕಾರಣಗಳಿಂದಾಗಿ ಅಡಿಕೆ ಉತ್ತಮ ಫಸಲು ದೊರೆತರೂ ಕೂಡ ಉತ್ತಮ ಧಾರಣೆ ಸಿಗದೆ ರೈತರು ಕಂಗಾಲಾಗಿದ್ದರು. ಆದ್ರೀಗ ಮಾರುಕಟ್ಟೆಯಲ್ಲಿ ಹೊಸ ಹಾಗೂ ಹಳೆಯ ಅಡಿಕೆ ದಾಖಲೆಯ ಬೆಲೆ ಮಾರಾಟವಾಗುತ್ತಿರುವುದು ಬೆಳೆಗಾರರಿಗೆ ಸಂತಸ ಮೂಡಿಸಿದೆ.
ಇದನ್ನೂ ಓದಿ : PM KISAN : ರೈತರಿಗೆ ಗುಡ್‌ನ್ಯೂಸ್ : ಪಿಎಂ ಕಿಸಾನ್ ಯೋಜನೆಯಡಿ 6 ಸಾವಿರದ ಬದಲು ಸಿಗುತ್ತೆ12 ಸಾವಿರ ರೂ.
ಇದನ್ನೂ ಓದಿ : ಭರ್ಜರಿ ಏರಿಕೆ ಕಂಡ ಅಡಿಕೆ ಬೆಲೆ ! ಬೆಳೆಗಾರರು ಪುಲ್ ಖುಷ್
(The bumper price for the Arecanut : New nut price crossed 50 thousand rupees in mangalore)