ನವದೆಹಲಿ : ದೇಶ ರೈತರ ಆರ್ಥಿಕ ಪರಿಸ್ಥಿತಿ ಸುಧಾರಣೆಗಾಗಿ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು (PM Kisan Scheme) ಪರಿಚಯಿಸಿದೆ. ರೈತರ ಭೂಮಿ ಕೃಷಿಗಾಗಿ ವಾರ್ಷಿಕ ರೂ. 6000 ನಗದು ಬೆಂಬಲ ಒದಗಿಸುವ ಮೂಲಕ, ಈ ಉಪಕ್ರಮಗಳು ಲಕ್ಷಾಂತರ ರೈತರಿಗೆ ಸಹಾಯ ಮಾಡಿದೆ. ಈ ಭಾರೀ ಪಿಎಂ ಕಿಸಾನ್ ಸಮ್ಮಾನ್ ನಿಧಿಯಿಂದ ತಂದೆ ಹಾಗೂ ಮಗ ಇಬ್ಬರಿಗೂ 15 ನೇ ಕಂತು ಹಣವನ್ನು (PM-KISAN 15th Installment) ಪಡೆಯುತ್ತಾರೆಯೇ? ಇಲ್ಲಿದೆ ಸಂಪೂರ್ಣ ವಿವರ
ದೇಶದ ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಭಾರತ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ಯೋಜನೆಗಳಲ್ಲಿ ಒಂದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಆಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ, ಭಾರತ ಸರಕಾರವು ಪ್ರತಿ ವರ್ಷ ರೈತರ ಖಾತೆಗೆ 6000 ರೂ. ಸಿಗಲಿದೆ. ಈಗ ಭಾರತ ಸರಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 15 ನೇ ಕಂತಿನ ಹಣವನ್ನು ದೇಶದ ರೈತರ ಖಾತೆಗಳಿಗೆ ವರ್ಗಾಯಿಸಲು ಸಿದ್ದವಾಗಿದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯ ಪ್ರತಿ ಕಂತನ್ನು 4 ತಿಂಗಳ ಮಧ್ಯಂತರದಲ್ಲಿ ವರ್ಗಾಯಿಸಲಾಗುತ್ತದೆ. ಪ್ರತಿ ಕಂತಿನಡಿ ರೈತರ ಖಾತೆಗೆ 2 ಸಾವಿರ ರೂ. ಭಾರತ ಸರಕಾರದ ಈ ಯೋಜನೆಯಿಂದ ದೇಶಾದ್ಯಂತ ಲಕ್ಷಾಂತರ ರೈತರು ಪ್ರಯೋಜನ ಪಡೆಯುತ್ತಿದ್ದಾರೆ. ಪ್ರಧಾನಿ ಮೋದಿ ಸರಕಾರವು ಇದುವರೆಗೆ ಯೋಜನೆಯ ಒಟ್ಟು 14 ಕಂತುಗಳನ್ನು ವರ್ಗಾಯಿಸಿದೆ. ಇನ್ನು ಕೆಲವೇ ತಿಂಗಳಲ್ಲಿ 15ನೇ ಕಂತಿನ ಹಣವನ್ನೂ ಸರಕಾರ ಪಾವತಿಸಲಿದೆ. ಹೀಗಿರುವಾಗ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 15ನೇ ಕಂತಿನ ಲಾಭ ತಂದೆ-ಮಗ ಇಬ್ಬರಿಗೂ ಸಿಗಬಹುದೇ ಎಂದು ಹಲವು ರೈತರು ಕೇಳುತ್ತಿದ್ದಾರೆ.

ಇದನ್ನೂ ಓದಿ : ಕೃಷಿಭೂಮಿ ಇದ್ದವರಿಗೆ 60 ವರ್ಷದ ನಂತ್ರ ಸಿಗುತ್ತೆ 36000 ರೂಪಾಯಿ ಪಿಂಚಣಿ : ಸರಕಾರದ ಈ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಿಂದ ಪ್ರಯೋಜನ ಪಡೆಯಲು ಒಬ್ಬರ ಸ್ವಂತ ಹೆಸರಿನಲ್ಲಿ ಭೂಮಿಯನ್ನು ಹೊಂದಿರುವುದು ಬಹಳ ಮುಖ್ಯ. ಸ್ವಂತ ಹೆಸರಿನಲ್ಲಿ ಜಮೀನು ಇಲ್ಲದಿದ್ದಲ್ಲಿ ಇಂತಹ ಪರಿಸ್ಥಿತಿಯಲ್ಲಿ ಯಾರೂ ಈ ಯೋಜನೆಯ ಲಾಭ ಪಡೆಯಲು ಸಾಧ್ಯವಿಲ್ಲ. ಒಂದು ಕುಟುಂಬದ ಒಂದಕ್ಕಿಂತ ಹೆಚ್ಚು ಸದಸ್ಯರು ಈ ಯೋಜನೆಯ ಪ್ರಯೋಜನಕ್ಕಾಗಿ ಅರ್ಜಿ ಸಲ್ಲಿಸಿದರೆ, ಅವರ ಅರ್ಜಿಯನ್ನು ರದ್ದುಗೊಳಿಸಲಾಗುತ್ತದೆ. ಈ ಕಾರಣಕ್ಕಾಗಿ ಒಂದು ಕುಟುಂಬದ ತಂದೆ ಮತ್ತು ಮಗ ಇಬ್ಬರೂ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಪ್ರಯೋಜನವನ್ನು ಪಡೆಯುವುದಿಲ್ಲ.
ಇದನ್ನೂ ಓದಿ : ಕಣ್ಮರೆಯಾಯ್ತು ಮಳೆ, ನೆತ್ತಿ ಸುಡುತ್ತಿದೆ ಸೂರ್ಯ : ಒಣಗುತ್ತಿರುವ ಭತ್ತದ ಬೆಳೆಗೆ ಇಲ್ಲಿದೆ ವಿಜ್ಞಾನಿಗಳ ವೈಜ್ಞಾನಿಕ ಸಲಹೆ
ಭಾರತ ಸರಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 15 ನೇ ಕಂತನ್ನು ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ವರ್ಗಾಯಿಸಬಹುದು ಎಂದು ಹಲವಾರು ಮಾಧ್ಯಮ ವರದಿಗಳು ಹೇಳುತ್ತವೆ. ಆದರೆ, ಈ ಬಗ್ಗೆ ಭಾರತ ಸರಕಾರದಿಂದ ಅಧಿಕೃತವಾಗಿ ಏನನ್ನೂ ಪ್ರಕಟಿಸಿಲ್ಲ.
PM-KISAN 15th Installment: PM KISAN Yojana: Father and son also get 15th installment money!