2022 ಆರಂಭದ ದಿನವೇ ಕೇಂದ್ರ ಸರ್ಕಾರ ದೇಶದ ಕೃಷಿಕ ಸಮುದಾಯಕ್ಕೆ ಖುಷಿಯ ಸುದ್ದಿಯೊಂದನ್ನು ನೀಡಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ((Pradhan Mantri Kisan Samman Nidhi) 10ನೇ ಕಂತಿನ ಹಣವನ್ನು (10th Installment of PM Kisan Samman Nidhi) ಇಂದು ಶನಿವಾರ(ಜನವರಿ 1) ರಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ. ದೇಶದ 10 ಕೋಟಿ ಫಲಾನುಭವಿ ಕೃಷಿಕರ ಬ್ಯಾಂಕ್ ಖಾತೆಗೆ (Bank Account) ಒಟ್ಟು ₹20,900 ಕೋಟಿಯನ್ನು ಬಿಡುಗಡೆ ಮಾಡಿದ್ದಾರೆ. ಇಂದು ಮಧ್ಯಾಹ್ನ ವಿಡಿಯೊ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ 10 ಕೋಟಿಗೂ ಹೆಚ್ಚು ಫಲಾನುಭವಿ ರೈತರಿಗೆ ಹಣ ಬಿಡುಗಡೆ ಮಾಡಿದ್ದಾರೆ. ಅಂದಹಾಗೆ ಗಮನಿಸಬೇಕಾದ ಅಂಶವೇನೆಂದರೆ ಇದು ದೇಶದ ರೈತರ ಖಾತೆಗೆ ಸೇರ್ಪಡೆಗೊಳ್ಳುತ್ತಿರುವ 10ನೇ ಕಂತಾಗಿದೆ. ಹಣ ಬ್ಯಾಂಕ್ ಖಾತೆಗೆ ಬಂತಾ ಇಲ್ಲವಾ ಎಂದು ಪರಿಶೀಲಿಸುವುದು ಹೇಗೆ ಎಂಬುದನ್ನು ನಾವಿಲ್ಲಿ ವಿವರಿಸಿದ್ದೇವೆ. (How to check PM Kisan Samman Nidhi 10th Installment)
PM-KISAN ಯೋಜನೆಯಡಿಯಲ್ಲಿ, ಅರ್ಹ ರೈತ ಕುಟುಂಬಗಳಿಗೆ ವರ್ಷಕ್ಕೆ ₹ 6,000 ಹಣವನ್ನು ನೀಡಲಾಗುತ್ತದೆ. ₹ 2,000 ರೂಪಾಯಿಯ ಮೂರು ಸಮಾನ ಕಂತುಗಳಲ್ಲಿ ರೈತರಿಗೆ ಪಾವತಿಸಲಾಗುತ್ತದೆ. ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ.
ಕಿಸಾನ್ ಸಮ್ಮಾನ್ ನಿಧಿ ಹಣದ ಜೊತೆಗೆ ಇಂದು ನಡೆದ 10ನೇ ಕಂತು ಬಿಡುಗಡೆಯ ವರ್ಚುವಲ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸುಮಾರು 351 ರೈತ ಉತ್ಪಾದಕ ಸಂಸ್ಥೆಗಳಿಗೆ (ಎಫ್‌ಪಿಒ) ₹14 ಕೋಟಿಗೂ ಹೆಚ್ಚು ಇಕ್ವಿಟಿ ಅನುದಾನವನ್ನು ಬಿಡುಗಡೆ ಮಾಡಿದರು. ಈ ಯೋಜನೆಯ ಫಲಾನುಭವವನ್ನು ಸುಮಾರು 1.24 ಲಕ್ಷ ರೈತರಿಗೆ ಪಡೆಯಲಿದ್ದಾರೆ.
ಇಂದು ಬಿಡುಗಡೆಯಾದ 10ನೇ ಕಂತಿನೊಂದಿಗೆ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ ಒದಗಿಸಲಾದ ಒಟ್ಟು ಮೊತ್ತವು ಸುಮಾರು ₹1.8 ಲಕ್ಷ ಕೋಟಿಯನ್ನು ಮುಟ್ಟಿದೆ. PM-KISAN ಯೋಜನೆಯನ್ನು ಫೆಬ್ರವರಿ 2019 ರಲ್ಲಿ ಘೋಷಿಸಲಾಗಿತ್ತು.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಹಣ ನಮ್ಮ ಅಕೌಂಟ್‌ಗೆ ಬಂದಿದೆಯೇ ಇಲ್ಲವೇ ಎಂದು ಪರಿಶೀಲಿಸುವುದು ಹೇಗೆ?
ಹಂತ 1: ಕೇಂದ್ರ ಸರ್ಕಾರದ ಅಧಿಕೃತ ವೆಬ್‌ಸೈಟ್ https://pmkisan.gov.in/ ಭೇಟಿ ನೀಡಿ.
ಹಂತ 2: ಮೇಲ್ಭಾಗದಲ್ಲಿ, “ಫಾರ್ಮರ್ಸ್ ಕಾರ್ನರ್” ಆಯ್ಕೆ ಇದೆ ಮತ್ತು ಒದಗಿಸಿದ ಆಯ್ಕೆಯ ಲಿಂಕ್ ಅನ್ನು ಆಯ್ಕೆಮಾಡಿ.
ಹಂತ 3: ಆಧಾರ್ ಸಂಖ್ಯೆ, ಖಾತೆ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆ- ಈ ಮೂರರಲ್ಲಿ ಒಂದನ್ನು ಆಯ್ಕೆಮಾಡಿ
ಹಂತ 4: ನಂತರ ‘ಸೆಟ್ ಡೇಟಾ’ ಕ್ಲಿಕ್ ಮಾಡಿ. ನಂತರ ಬ್ಯಾಂಕ್ ಖಾತೆಗೆ ಹಣ ಪಾವತಿಯಾಗದೆಯೇ ಎಂದು ನಿಮಗೆ ತೋರಿಸುತ್ತದೆ.
ನೀವು PM ಕಿಸಾನ್‌ನ ಅಧಿಕೃತ ವೆಬ್‌ಸೈಟ್‌ನಿಂದ ಅಥವಾ Google Play store/App Store ನಿಂದ PM ಕಿಸಾನ್ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಸಹ ಹಣ ನಿಮ್ಮ ಬ್ಯಾಂಕ್ ಖಾತೆಗೆ ಪಾವತಿಯಾಗಿದೆಯೇ ಎಂದು ಪರಿಶಿಲಿಸಬಹುದು
ಹಲವು ರೈತರಿಗೆ ಇಂದು ಹಣ ಬಿಡುಗಡೆಯಾಗದೇ ಇರಬಹುದು ಏಕೆ?
ಹಲವು ರೈತರಿಗೆ ಇಂದು ಹಣ ಬಿಡುಗಡೆಯಾಗದೇ ಇರಬಹುದಾದ ಸಾಧ್ಯತೆಯೂ ಇದೆ. ಏಕೆಂದರೆ ಇ-ಕೆವೈಸಿ ಕೊರತೆಯಿಂದಾಗಿ 2 ಕೋಟಿಗೂ ಹೆಚ್ಚು ರೈತರಿಗೆ 10ನೇ ಕಂತಿನಲ್ಲಿ 2000 ರೂಪಾಯಿ ಬ್ಯಾಂಕ್ ಖಾತೆಗೆ ಜಮಾ ಆಗದಸಾಧ್ಯತೆ ಇದೆ ಎಂದು ದಿಎನ್‌ಎ ಜಾಲತಾಣ ವರದಿ ಮಾಡಿದೆ.
ಯಾರೆಲ್ಲ ಅರ್ಹರು?
ಈ ಯೋಜನೆಯಡಿಯಲ್ಲಿ, ಜಮೀನು ಹೊಂದಿರುವ ಎಲ್ಲಾ ರೈತ ಕುಟುಂಬಗಳು ಪ್ರಯೋಜನಗಳಿಂದ ಪ್ರಯೋಜನ ಪಡೆಯಬಹುದು. ಭೂಮಾಲೀಕ ರೈತರ ಕುಟುಂಬವನ್ನು ಆಡಳಿತದ ಮಾರ್ಗಸೂಚಿಗಳಿಂದ ಆಯಾ ಪ್ರದೇಶಗಳಿಗೆ ಅನುಗುಣವಾಗಿ ಕೃಷಿಯೋಗ್ಯ ಭೂಮಿಯನ್ನು ಹೊಂದಿರುವ ಪತಿ, ಹೆಂಡತಿ ಮತ್ತು ಅಪ್ರಾಪ್ತ ಮಕ್ಕಳನ್ನು ಒಳಗೊಂಡಿರುವ ಕುಟುಂಬ ಎಂದು ವ್ಯಾಖ್ಯಾನಿಸಲಾಗಿದೆ.
ಇದನ್ನೂ ಓದಿ : 2022ರ ಆರಂಭದಲ್ಲಿ ಸಂತಸದ ಸುದ್ದಿ; ಜಿಎಸ್‌ಟಿ ವಾರ್ಷಿಕ ರಿಟರ್ನ್ಸ್ ಸಲ್ಲಿಸಲು ಅವಧಿ ಮುಂದೂಡಿಕೆ
ಇದನ್ನೂ ಓದಿ : ಹೊಸವರ್ಷಕ್ಕೆ ಗುಡ್ ನ್ಯೂಸ್: ಸಿಲಿಂಡರ್ ದರ ಇಳಿಕೆ
PM Kisan Samman Nidhi 10th installment released by PM Narendra Modi how to check status online)