ಭಾನುವಾರ, ಏಪ್ರಿಲ್ 27, 2025
HomeagriculturePM Kisan Yojana : ಈ ಯೋಜನೆಯಲ್ಲಿ ಪಲಾನುಭವಿಗಳು ಕಡಿಮೆ ಯಾಗುತ್ತಿರುವುದಕ್ಕೆ ಕಾರಣ ಇಲ್ಲಿದೆ

PM Kisan Yojana : ಈ ಯೋಜನೆಯಲ್ಲಿ ಪಲಾನುಭವಿಗಳು ಕಡಿಮೆ ಯಾಗುತ್ತಿರುವುದಕ್ಕೆ ಕಾರಣ ಇಲ್ಲಿದೆ

- Advertisement -

ನವದೆಹಲಿ : ದೇಶದಾದ್ಯಂತ ಲಕ್ಷಗಟ್ಟಲೆ ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (PM Kisan Yojana) 14ನೇ ಕಂತಿಗಾಗಿ ಕಾಯುತ್ತಿದ್ದಾರೆ. ಈ ಯೋಜನೆ ಅಡಿಯಲ್ಲಿ ಕೇಂದ್ರ ಸರಕಾರವು ಪ್ರತಿ ವರ್ಷ ರೈತರಿಗೆ 6000 ರೂಪಾಯಿಗಳನ್ನು ಆರ್ಥಿಕ ಸಹಾಯವಾಗಿ ನೀಡುತ್ತದೆ. ಇದರಡಿಯಲ್ಲಿ ಎರಡು ಸಾವಿರ ರೂಪಾಯಿಗಳಂತೆ ಮೂರು ಕಂತುಗಳಲ್ಲಿ 6000 ರೂ. ಗಳನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಈ ಯೋಜನೆಯನ್ನು ಕೇಂದ್ರ ಸರಕಾರವು 2019 ರಲ್ಲಿ ಪ್ರಾರಂಭಿಸಿತು. ಇದುವರೆಗೆ ಒಟ್ಟು 13 ಕಂತುಗಳ ಹಣ ರೈತರ ಖಾತೆಗೆ ಜಮಾ ಆಗಿದ್ದು, ಇದೀಗ 14ನೇ ಕಂತಿಗಾಗಿ ರೈತರು ಕಾಯುತ್ತಿದ್ದಾರೆ. ಅದರಲ್ಲೂ ಪಿಎಂ ಕಿಸಾನ್ ಯೋಜನೆಯಡಿ ಫಲಾನುಭವಿಗಳ ಪಟ್ಟಿಯಲ್ಲಿ ಗಣನೀಯ ಇಳಿಕೆಯಾಗಿದೆ. ಈ ಕುರಿತಂತೆ ಹೆಚ್ಚಿನ ಜನರಲ್ಲಿ ಕುತೂಹಲ ಮೂಡಿಸಿದೆ. ಅದಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

ಪಿಎಂ ಕಿಸಾನ್‌ ಯೋಜನೆ ಫಲಾನುಭವಿಗಳು ಏಕೆ ಕಡಿಮೆಯಾಗುತ್ತಿದ್ದಾರೆ ?
ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಸಾಮಾನ್ಯವಾಗಿ, ಪ್ರಧಾನ ಮಂತ್ರಿ ಕಿಸಾನ್ ಯೋಜನೆಗೆ ಸಂಬಂಧಿಸಿದಂತೆ ಭೂ ದಾಖಲೆಗಳ ಪರಿಶೀಲನೆಯನ್ನು ಮಾಡಲಾಗುತ್ತಿದೆ. ಈ ಸಮಯದಲ್ಲಿ, ಈ ಯೋಜನೆಯ ಹೆಚ್ಚಿನ ಸಂಖ್ಯೆಯ ಫಲಾನುಭವಿಗಳನ್ನು ತೆಗೆದುಹಾಕುವ ನಿರೀಕ್ಷೆಯಿದೆ. ಹಿಂದಿನ ಕಂತುಗಳಲ್ಲಿ ಇಂತಹ ಅನೇಕ ರೈತರು ಅಕ್ರಮವಾಗಿ ಈ ಯೋಜನೆಯ ಲಾಭ ಪಡೆಯುತ್ತಿದ್ದರ ಬಗ್ಗೆ ಇಲಾಖೆಗೆ ತಿಳಿದು ಬಂದಿದೆ. ಹೀಗಾಗಿ ಭೂ ದಾಖಲೆಗಳ ಪರಿಶೀಲನೆ ನಂತರ, ಅಂತಹ ಎಲ್ಲ ಜನರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಈ ಬಾರಿ ಕೆಲ ರೈತರ ಖಾತೆಗೆ 4000 ರೂ. ಸರಕಾರದಿಂದ ಹಿಂದಿನ ಕಂತು ಪಡೆಯಲಾಗದ ರೈತರು ಇವರುಗಳಾಗಿದ್ದಾರೆ.

ಇದನ್ನೂ ಓದಿ : PM Kisan Yojana eKYC : ಪಿಎಂ ಕಿಸಾನ್ 14 ನೇ ಕಂತು ಮೇ 31 ಬಿಡುಗಡೆ ಸಾಧ್ಯತೆ

ಪ್ರಧಾನ ಮಂತ್ರಿ ಕಿಸಾನ್ ಯೋಜನೆಗೆ ಸಂಬಂಧಿಸಿದ ನಿಯಮಗಳೇನು?
ಈ ಯೋಜನೆಯ ನಿಯಮದ ಪ್ರಕಾರ, ಭೂಮಿಯನ್ನು ಯಾರ ಹೆಸರಿನಲ್ಲಿ ನೋಂದಾಯಿಸಲಾಗಿದೆಯೋ ಅವರು ಮಾತ್ರ ಪಿಎಂ ಕಿಸಾನ್ ಯೋಜನೆಯ ಪ್ರಯೋಜನವನ್ನು ಪಡೆಯಬಹುದು. ಸ್ವಂತ ಜಮೀನು ಇಲ್ಲದೇ ಪರರ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿರುವ ಅನೇಕ ರೈತರು ದೇಶದಲ್ಲಿದ್ದಾರೆ. ಇಂತಹ ರೈತರು ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಲಾಭ ಪಡೆಯಲು ಸಾಧ್ಯವಿಲ್ಲ. ಪ್ರಧಾನ ಮಂತ್ರಿ ಕಿಸಾನ್ ಯೋಜನೆಗೆ ಸಂಬಂಧಿಸಿದ ಯಾವುದೇ ರೀತಿಯ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 155261 ಅಥವಾ 1800115526 ಅನ್ನು ನೀಡಲಾಗಿದೆ.

PM Kisan Yojana : Here is the reason why beneficiaries are less in this scheme

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular