ಬೆಂಗಳೂರು : ರೈತರಿಗೆ ಬೆಂಬಲ ನೀಡುವ ಉದ್ದೇಶದಿಂದ ಹಾಗೂ ರೈತರ ಸ್ವಾವಲಂಬಿ ಬದುಕಿಗೆ ಸಹಕಾರ ನೀಡುವ ಸಲುವಾಗಿ ಕರ್ನಾಟಕ ರಾಜ್ಯ ಸರ್ಕಾರ ಭರ್ಜರಿ ರೈತರಿಗೆ ಸಿಹಿ ಸುದ್ದಿ ನೀಡಿದೆ. ರಾಜ್ಯದ 30 ಲಕ್ಷ ರೈತರಿಗೆ 20,810 ಕೋಟಿ ಕೃಷಿ ಸಾಲ ನೀಡಲು ಮುಂದಾಗಿದೆ.
ರೈತರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುವುದೇ ನಮ್ಮ ಸರ್ಕಾರದ ಗುರಿ. ನಮ್ಮದು ರೈತ ಪರ, ರೈತರ ಕಷ್ಟಗಳಿಗೆ ಸದಾ ಸ್ಪಂದಿಸುವ ಸರ್ಕಾರವಾಗಿದೆ. ರೈತರ ಸ್ವಾವಲಂಬಿ ಬದುಕಿಗೆ ಬೇಕಿರುವ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ನಾವು ಸದಾ ಮುಂದು ಎಂಬುದನ್ನು ಕಳೆದ ಭಾರಿ ಕೃಷಿ ಸಾಲ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ: ಅಕ್ಟೋಬರ್ 30 ರಂದು ಸರಕಾರಿ ನೌಕರರಿಗೆ ವೇತನ ಸಹಿತ ರಜೆ : ರಾಜ್ಯ ಸರಕಾರದ ಮಹತ್ವದ ಘೋಷಣೆ
ಅಕ್ಟೋಬರ್ ತಿಂಗಳಿನಲ್ಲಿ ಅಲ್ಪಾವದಿ, ಮಧ್ಯಮ/ ದೀರ್ಘಾವಧಿ ಸಾಲ ವಿತರಣೆಯಲ್ಲಿ ಗಮನಿಸ ಬೇಕಾದ ಸಾಧನೆ ಮಾಡಿದೆ. ಅಲ್ಪಾವಧಿ ಸಾಲ ನೀಡಿಕೆ ವಿಭಾಗದಲ್ಲಿ 30,25,788 ರೈತರಿಗೆ 19,370 ಕೋಟಿ ರೂಪಾಯಿ ಸಾಲ ನೀಡವ ಗುರಿಯನ್ನು ಹೊಂದಿದ್ದೇವೆ. ಈಗಾಗಲೇ 12,25,027 ರೈತರಿಗೆ 8,742.10 ಕೋಟಿ ರೂಪಾಯಿ ಸಾಲವನ್ನು ವಿತರಿಸಿ ಶೇಕಡಾ 45.55 ಸಾಧನೆಯನ್ನು ಮಾಡಲಾಗಿದೆ.
ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲ ನೀಡುವ ವಿಭಾಗದಲ್ಲಿ 59,856 ಅನ್ನದಾತರಿಗೆ 1,440 ಕೋಟಿ ರೂಪಾಯಿ ಸಾಲ ನೀಡಿಕೆ ಗುರಿಯನ್ನು ಹಾಕಿಕೊಂಡಿದ್ದೇವೆ. ಇದರಲ್ಲಿ 10009 ರೈತರಿಗೆ 394.79 ಕೋಟಿ ರೂಪಾಯಿ ಸಾಲವಾಗಿ ವಿತರಿ 27.41 ರಷ್ಟ ಸಾಧನೆ ಮಾಡಲಾಗಿದೆ.
ಇದನ್ನೂ ಓದಿ: PUB ATTACK : ಮಂಗಳೂರಲ್ಲಿ ಪಬ್ ಮೇಲೆ ಪೊಲೀಸರ ದಾಳಿ
3 ವಿಭಾಗದಲ್ಲಿ 30,85,644 ರೈತರಿಗೆ 20810 ಕೋಟಿ ಕೃಷಿ ಸಾಲ ನೀಡುವ ಗುರಿಯಲ್ಲಿ ಅಕ್ಟೋಬರ್ 23 ರವರೆಗೆ 12,35,033 ರೈತರಿಗೆ 9,136.89 ಕೋಟಿ ಸಾಲವನ್ನು ನೀಡುವ ಮುಖಾಂತರ 72.96 % ಸಾಧನೆಯನ್ನು ಈಗಾಗಲೇ ನಾವು ಮಾಡಿದ್ದೇವೆ. ಎಂದು ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.
(State Government gives GOOD NEWS: 30 lakh farmers to get 20,810 crore farm loans)