ದೇಶದ ಜನರು ಕೊರೊನಾ ವೈರಸ್ ಸೋಂಕಿನ ತತ್ತರಿಸಿದ್ದಾರೆ. ಹೀಗಾಗಿ ಆಟೋ ಮೋಬೈಲ್ ಇಂಡಸ್ಟ್ರೀ ಕುಸಿತವನ್ನು ಕಂಡಿದೆ. ಆದ್ರೀಗ ಭಾರತದ ಪ್ರಮುಖ ಆಟೋ ಬ್ರಾಂಡ್ ಟಾಟಾ ಮೋಟಾರ್ಸ್ ತನ್ನು ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದೆ.

ಶೂನ್ಯ ಡೌನ್ ಪೇಮೆಂಟ್ ನಲ್ಲಿ ಕಾರನ್ನು ಖರೀದಿಸಬಹುದಾಗಿದ್ದು, 6 ತಿಂಗಳ ವರೆಗೆ ಇಎಂಐ ವಿನಾಯಿತಿಯನ್ನು ಪಡೆಯಬಹುದಾಗಿದೆ. ಮಾತ್ರವಲ್ಲ 5 ವರ್ಷಗಳ ಸಾಲದ ಅವಧಿಗೆ ಶೇಕಡಾ 100ರಷ್ಟು ಆನ್ ರೋಡ್ ಧನಸಹಾಯವನ್ನು ಘೋಷಿಸಿದೆ.

ಟಾಟಾ ಮೋಟಾರ್ಸ್ ಕಂಪೆನಿ ತನ್ನ ಜನಪ್ರಿಯ ಬ್ರ್ಯಾಂಡ್‍ಗಳಾದ ಟಿಯಾಗೊ, ಆಲ್ಟ್ರೋಜ್ ಹಾಗೂ ನೆಕ್ಸನ್ ಕಾರುಗಳ ಮೇಲೆ ಭರ್ಜರಿ ಆಫರ್ ನೀಡಿದೆ.

ಟಾಟಾ ಮೋಟಾರ್ಸ್ ಅಂತರಾಷ್ಟ್ರೀಯ ಗುಣಮಟ್ಟ, ವಿನ್ಯಾಸ ಹಾಗೂ ಸುರಕ್ಷತೆಯೊಂದಿಗೆ ಕಾರನ್ನು ತಯಾರಿಸುತ್ತಿದೆ. ಕೊರೊನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರವನ್ನು ಕಾಪಾಡುವ ನಿಟ್ಟಿನಲ್ಲಿ ಅಗತ್ಯಕ್ರಮಗಳನ್ನು ಕೈಗೊಂಡಿದೆ.

ಟಾಟಾ ಮೋಟಾರ್ಸ್ 8 ವರ್ಷದ ವರೆಗಿನ ದೀರ್ಫಾವಧಿಯ ಸಾಲದ ಮೇಲೆ ಕೈಗಟುಕವ ದರದಲ್ಲಿ, ಹಣಕಾಸು ಪಾಲುದಾರ ಸಹಯೋಗದೊಂದಿಗೆ ಸ್ಟೆಪ್ ಅಪ್ ಇಎಂಐ ನೀಡುತ್ತಿದೆ.

ಕೇವಲ 5,555 ರೂಪಾಯಿಗಳ ಮೊದಲ ಇಎಂಐನೊಂದಿಗೆ 5 ಸ್ಟಾರ್ ಜಿಎನ್ ಸಿಎಪಿ ಸುರಕ್ಷತೆಯ ಪ್ರೀಮಿಯಂ ಹ್ಯಾಚ್ ಬ್ಯಾಕ್ ಆಲ್ಟ್ರೋಜ್ ಕಾರನ್ನು ಖರೀದಿಸಬಹುದಾಗಿದೆ.

ಇನ್ನು ಎಸ್ ಯುವಿ ನೆಕ್ಸನ್ 7,999 ರೂಪಾಯಿ ಇಎಂಐ ಹಾಗೂ ಹ್ಯಾಚ್ ಬ್ಯಾಕ್ ಟಿಯಾಗೋ ಕಾರುಗಳು 4,999 ರೂಪಾಯಿ ಇಎಂಐಗೆ ಲಭ್ಯವಿದೆ.

ಕಾರು ಖರೀದಿಸಲು ಆಸಕ್ತರು ಟಾಟಾ ಮೋಟಾರ್ಸ್ ಘೋಷಣೆ ಮಾಡಿರುವ ವಿಶಿಷ್ಟ ಆಫರ್ ಬಳಸಿಕೊಳ್ಳಬಹುದಾಗಿದೆ.

6 ತಿಂಗಳ ಕಾಲ ಇಎಂಐ ವಿನಾಯಿತಿ ಪಡೆಯಬಹುದಾಗಿದ್ದರೂ ಕೂಡ ಬಡ್ಡಿಯನ್ನು ಮಾಸಿಕವಾಗಿ ಪಾವತಿ ಮಾಡಬೇಕಾಗುತ್ತದೆ ಎಂದು ಟಾಟಾ ಮೋಟಾರ್ಸ್ ತಿಳಿಸಿದೆ.