ಸದ್ಯ ಭಾರತ (India) ದ ಆಟೊಮೊಬೈಲ್ ಮಾರುಕಟ್ಟೆಯಲ್ಲಿಅನೇಕ ಮಾದರಿಯ ಕಾರುಗಳಿವೆ. ಬಜೆಟ್ ಬೆಲೆಯ ಸಣ್ಣ ಕಾರುಗಳಿಂದ ಹಿಡಿದು, ಮಧ್ಯಮ ಮತ್ತು ದುಬಾರಿ ಬೆಲೆಯ ಕಾರುಗಳಿವೆ. ಆದರೆ ಸಣ್ಣ ಕೈಗೆಟುಕುವ ಕಾರುಗಳ ಬೇಡಿಕೆಯು ದೇಶದಲ್ಲಿ ಎಂದಿಗೂ ಕಡಿಮೆಯಾಗಿಲ್ಲ. ನೀವೂ ಕೂಡ ಹೊಸ ಸಣ್ಣ ಕಾರು ಖರೀದಿಸಬೇಕೆಂದಿದ್ದರೆ ನಿಮ್ಮ ಬಜೆಟ್ 5 ಲಕ್ಷ ರೂಪಾಯಿಗಿಂತ ಕಡಿಮೆಯಿದ್ದರೆ, ಅದಕ್ಕಾಗಿ ಇಲ್ಲಿ ಎರಡು ಕಾರುಗಳನ್ನು ಹೋಲಿಕೆ ಮಾಡಿ ಕೊಡಲಾಗಿದೆ. ಮಾರುತಿ ಸುಜುಕಿ ಆಲ್ಟೊ ಕೆ10 ಮತ್ತು ರೆನಾಲ್ಟ್ ಕ್ವಿಡ್ ಕಾರುಗಳ ಹೋಲಿಕೆ (Alto K10 Vs Kwid) ಇಲ್ಲಿದೆ ಓದಿ.
ಬೆಲೆ ಹೋಲಿಕೆ:
ಮಾರುತಿ ಸುಜುಕಿ ಆಲ್ಟೊ K10 ಕಾರು 4 ಟ್ರಿಮ್‌ಗಳಲ್ಲಿ STD (O), LXI, VXI ಮತ್ತು VXI+ ನಲ್ಲಿ ಲಭ್ಯವಿದೆ. ಈ ಕಾರಿನ ಎಕ್ಸ್ ಶೋ ರೂಂ ಬೆಲೆ 3.99 ಲಕ್ಷ ರೂ. ದಿಂದ 5.95 ಲಕ್ಷ ರೂ.ಗಳಾಗಿದೆ.
ರೆನಾಲ್ಟ್ ನ ಕ್ವಿಡ್ ಮಾರುಕಟ್ಟೆಯಲ್ಲಿ RXE, RXL, RXL (O), RXT ಮತ್ತು ಕ್ಲೈಂಬರ್ ಎಂಬ ಐದು ಟ್ರಿಮ್‌ಗಳಲ್ಲಿ ಲಭ್ಯವಿದೆ. ಇದರ ಎಕ್ಸ್ ಶೋ ರೂಂ ಬೆಲೆ 4.70 ಲಕ್ಷ ರೂ.ದಿಂದ 6.33 ಲಕ್ಷದವರೆಗಿದೆ.
ಬಣ್ಣ:
ಮಾರುತಿಯ ಆಲ್ಟೊ ಕೆ10 ಹ್ಯಾಚ್‌ಬ್ಯಾಕ್ ಆರು ಮೊನೊಟೋನ್ ಶೇಡ್‌ಗಳಲ್ಲಿ ಬರುತ್ತದೆ. ಇದರಲ್ಲಿ ಮೆಟಾಲಿಕ್ ಸಿಜ್ಲಿಂಗ್ ರೆಡ್, ಮೆಟಾಲಿಕ್ ಸಿಲ್ಕಿ ಸಿಲ್ವರ್, ಮೆಟಾಲಿಕ್ ಗ್ರಾನೈಟ್ ಗ್ರೇ, ಮೆಟಾಲಿಕ್ ಸ್ಪೀಡಿ ಬ್ಲೂ, ಪ್ರೀಮಿಯಂ ಅರ್ಥ್ ಗೋಲ್ಡ್ ಮತ್ತು ಸಾಲಿಡ್ ವೈಟ್ ಸೇರಿವೆ.
ರೆನಾಲ್ಟ್ ಕ್ವಿಡ್ ಸಹ ಆರು ಮೊನೊಟೋನ್ ಮತ್ತು ಎರಡು ಡ್ಯುಯಲ್-ಟೋನ್ ಶೇಡ್‌ಗಳಲ್ಲಿ ಲಭ್ಯವಿದೆ. ಇದರಲ್ಲಿ ಐಸ್ ಕೂಲ್ ವೈಟ್, ಮೆಟಲ್ ಮಸ್ಟರ್ಡ್, ಫಿಯರಿ ರೆಡ್, ಔಟ್‌ಬ್ಯಾಕ್ ಕಂಚು, ಮೂನ್‌ಲೈಟ್ ಸಿಲ್ವರ್, ಝನ್ಸ್‌ಕರ್ ಬ್ಲೂ, ಐಸ್ ಕೂಲ್ ವೈಟ್ ವಿತ್ ಬ್ಲ್ಯಾಕ್ ರೂಫ್ ಮತ್ತು ಮೆಟಲ್ ಮಸ್ಟರ್ಡ್ ಜೊತೆಗೆ ಬ್ಲ್ಯಾಕ್ ರೂಫ್ ಸೇರಿವೆ.
ಎಂಜಿನ್ ಹೋಲಿಕೆ:
ಮಾರುತಿ ಆಲ್ಟೊ K10 1-ಲೀಟರ್ ಡ್ಯುಯಲ್ಜೆಟ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ. ಇದು 67PS ಪವರ್ ಮತ್ತು 89Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದನ್ನು 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅಥವಾ 5-ಸ್ಪೀಡ್ AMT ಗೆ ಜೋಡಿಸಲಾಗಿದೆ. ಅದೇ ಎಂಜಿನ್ CNG ರೂಪಾಂತರದಲ್ಲಿ 57PS ಪವರ್ ಮತ್ತು 82.1Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ ಮತ್ತು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಮಾತ್ರ ಸಂಯೋಜಿತವಾಗಿದೆ.
ಇನ್ನು ರೆನಾಲ್ಟ್ ಕ್ವಿಡ್ 1-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ. ಇದು 68PS ಪವರ್ ಮತ್ತು 91Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಮತ್ತು ಐದು-ಸ್ಪೀಡ್ AMT ಟ್ರಾನ್ಸ್‌ಮಿಷನ್ ಆಯ್ಕೆಯನ್ನು ಪಡೆಯುತ್ತದೆ.
ಮೈಲೇಜ್ ಹೋಲಿಕೆ:
ಆಲ್ಟೊ K10 ಪೆಟ್ರೋಲ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಪ್ರತಿ ಲೀಟರ್‌ಗೆ 24.39 km ಮೈಲೇಜ್ ನೀಡುತ್ತದೆ. ಆದರೆ ಪೆಟ್ರೋಲ್ AMT ಯು ಪ್ರತಿ ಲೀಟರ್‌ಗೆ 24.90 km ಮೈಲೇಜ್ ನೀಡುತ್ತದೆ. ಆದರೆ ಸಿಎನ್‌ಜಿ ರೂಪಾಂತರದಲ್ಲಿ ಈ ಕಾರು ಕೆಜಿಗೆ 33.85 ಕಿಮೀ ಮೈಲೇಜ್ ನೀಡುತ್ತದೆ.
ಕ್ವಿಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಪ್ರತಿ ಲೀಟರ್‌ಗೆ 22.3km ಮೈಲೇಜ್ ನೀಡಿದರೆ ಅದರ ಆಟೊಮೆಟಿಕ್ ಟ್ರಾನ್ಸ್‌ಮಿಷನ್ ಪ್ರತಿ ಲೀಟರ್‌ಗೆ 21.46km ಮೈಲೇಜ್ ನೀಡುತ್ತದೆ.
ವೈಶಿಷ್ಟ್ಯಗಳ ಹೋಲಿಕೆ:
ಅಲ್ಟೊ ಕೆ10 ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋದೊಂದಿಗೆ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕೀಲೆಸ್ ಎಂಟ್ರಿ ಮತ್ತು ಡಿಜಿಟೈಸ್ಡ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ಗಳಂತಹ ವೈಶಿಷ್ಟ್ಯಗಳನ್ನು ಪಡೆಯುತ್ತದೆ. ಇದರಲ್ಲಿ ಡ್ಯುಯಲ್ ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆಗೆ ಇಬಿಡಿ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಸುರಕ್ಷತಾ ವೈಶಿಷ್ಟ್ಯಗಳಾಗಿ ನೀಡಲಾಗಿದೆ.
ರೆನಾಲ್ಟ್‌ನ ಕ್ವಿಡ್ ಎಂಟು-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಫೋರ್ ವೇ ಅಡ್ಜೆಸ್ಟೇಬಲ್ ಡ್ರೈವರ್ ಸೀಟ್ ಮತ್ತು 14-ಇಂಚಿನ ಚಕ್ರಗಳನ್ನು ಹೊಂದಿದೆ. ಇದು ಕೀಲೆಸ್ ಎಂಟ್ರಿ, ಮ್ಯಾನುಯಲ್ ಎಸಿ ಮತ್ತು ಎಲೆಕ್ಟ್ರಿಕ್ ಒಆರ್‌ವಿಎಂ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್‌ಪಿ), ಹಿಲ್ ಸ್ಟಾರ್ಟ್ ಅಸಿಸ್ಟ್ (ಎಚ್‌ಎಸ್‌ಎ), ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ (ಟಿಸಿಎಸ್) ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಂಎಸ್), ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆಗೆ ಇಬಿಡಿ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳಂತಹ ವೈಶಿಷ್ಟ್ಯಗಳು ಇದರಲ್ಲಿ ಲಭ್ಯವಿದೆ.
ಇದನ್ನೂ ಓದಿ : CBSE Assessment : CBSE ಮೌಲ್ಯಮಾಪನದಲ್ಲಿ ಬದಲಾವಣೆ
ಇದನ್ನೂ ಓದಿ : ಕಿಯಾ ಇಂಡಿಯಾ : ಏಪ್ರಿಲ್ 15 ರಂದು ಭಾರತದಲ್ಲಿ EV6 ಗಾಗಿ ಮರು ಬುಕಿಂಗ್ ಓಪನ್ : ಇಲ್ಲಿದೆ ಸಂಪೂರ್ಣ ವಿವರ
(Alto K10 Vs Kwid car comparison. Know the price, color, specifications)