ತೈಲ ಬೆಲೆ ಏರಿಕೆಯಾಗುತ್ತಿದಂತೆ ಎಲ್ಲಾ ಕಾರು ಉತ್ಪಾದಕ ಕಂಪೆನಿಗಳು ಎಲೆಕ್ಟ್ರಿಕ್ ಕಾರು ತಯಾರಿಸಲು ಮುಂದಾಗಿದ್ದಾರೆ. ಎಲೆಕ್ಟ್ರಿಕ್ ವಾಹನಗಳ ಟ್ರೆಂಡ್‌ಗೆ ತಾನೂ ಲಗ್ಗೆ ಇಟ್ಟಿರುವ ಹೋಂಡಾ, ಮುಂಬರುವ ವರ್ಷಗಳಲ್ಲಿ ತನ್ನ ಬ್ರಾಂಡ್‌ನ ಎಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಗೆ ತರಲು ಸಜ್ಜಾಗುತ್ತಿದೆ.

ಜಪಾನ್‌ನ ಆಟೋಮೊಬೈಲ್ ದಿಗ್ಗಜ ಇತ್ತೀಚೆಗಷ್ಟೇ ಎರಡು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡಿದ್ದು, ಮುಂದಿನ ಐದು ವರ್ಷಗಳಲ್ಲಿ ಚೀನಾದ ಮಾರುಕಟ್ಟೆಗೆಂದು ನಾಲ್ಕು ಚಕ್ರದ ಇನ್ನಷ್ಟು ಇವಿ ವಾಹನಗಳ ಉತ್ಪಾದನೆಗೆ ಮುಂದಾಗಿದೆ. ಈ ಕಾರುಗಳ ಬ್ಯಾಟರಿಗಳು ಒಂದು ಚಾರ್ಜ್‌ಗೆ 500ಕಿಮೀ ವರೆಗೂ ಚಲಿಸಬಲ್ಲವಾಗಿವೆ.
ಇದನ್ನೂ ಓದಿ: BMW C 400 GT : ಭಾರತದಲ್ಲಿ ಬುಕ್ಕಿಂಗ್ ಶುರು ಮಾಡಿದ ಬಿಎಂಡಬ್ಲ್ಯು ಸಿ 400 ಜಿಟಿ ಮ್ಯಾಕ್ಸಿ-ಸ್ಕೂಟರ್

ಒಟ್ಟಾರೆಯಾಗಿ ಮುಂದಿನ ಐದು ವರ್ಷಗಳಲ್ಲಿ ಚೀನಾದಲ್ಲಿ ಹತ್ತು ಹೊಸ ಇವಿ ವಾಹನಗಳನ್ನು ಹೋಂಡಾ ಬಿಡುಗಡೆ ಮಾಡಲಿದೆ. ಚೀನಾದ ಹೊರಗಿನ ಮಾರುಕಟ್ಟೆಗಳಲ್ಲಿ ಈ ಕಾರುಗಳನ್ನು ಯಾವಾಗ ಬಿಡುಗಡೆ ಮಾಡಲಿದೆ ಎಂಬ ಕುರಿತು ಹೋಂಡಾ ಸದ್ಯದ ಮಟ್ಟಿಗೆ ಏನನ್ನೂ ಹೇಳಿಲ್ಲ.

e:N ಸರಣಿಯಲ್ಲಿ ಚೀನಾದಲ್ಲಿ ಇವಿ ಕಾರುಗಳ ಬಿಡುಗಡೆ ಮಾಡಲಿರುವ ಹೋಂಡಾ, ಮೊದಲ ಎರಡು ಮಾಡೆಲ್‌ಗಳಿಗೆ e:NS1 ಮತ್ತು e:NP1 ಎಂದು ಹೆಸರಿಟ್ಟಿದೆ. ‘e’ ಅಕ್ಷರವು ಆಟೋಮೊಬೈಲ್ ಉತ್ಪಾದಕನ ಇ-ತಂತ್ರಜ್ಞಾನದ ಸೂಚಕವಾಗಿದ್ದು, ‘N’ ಅಕ್ಷರವು ಕಂಪನಿಯು ಈಗ ಮತ್ತು ಮುಂದಿನ ದಿನಗಳಲ್ಲಿ ಮೌಲ್ಯ ಸೃಷ್ಟಿ ಮಾಡುತ್ತಿರುವ ಸಂಕೇತವಾಗಿದೆ.
ಇದನ್ನೂ ಓದಿ: Toyota Legender 4X4 : ಲೆಜೆಂಡರ್ ಹೊಸ ಆವೃತ್ತಿ ಬುಕಿಂಗ್ ಶುರು

ಭಾರತದ ಮಾರುಕಟ್ಟೆ ವಿಚಾರಕ್ಕೆ ಬಂದರೆ, ಟಾಟಾ ಮೋಟರ್ಸ್ 10 ಹೊಸ ಇವಿ ವಾಹನಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗುತ್ತಿದ್ದು, ಇವಿ ಮಾರುಕಟ್ಟೆಯಲ್ಲಿ ಅಧಿಪತ್ಯ ಸಾಧಿಸುವ ಪ್ಲಾನ್ ಹೊಂದಿದೆ. ಮಹಿಂದ್ರಾ ಹಾಗೂ ಮಾರುತಿ ಸುಜ಼ುಕಿಗಳು ಸಹ ಇವಿ ಕ್ಷೇತ್ರೆದಲ್ಲಿ ತಮ್ಮದೇ ಗುರುತು ಸ್ಥಾಪಿಸಲು ಸಜ್ಜಾಗುತ್ತಿವೆ.
(Honda set to launch new 10 EV car)