ಭಾನುವಾರ, ಏಪ್ರಿಲ್ 27, 2025
HomeautomobileNew Hyundai Creta: ಇಂಡೋನೇಷ್ಯಾ ಆಟೋ ಶೋನಲ್ಲಿ ವಿಶ್ವದಾದ್ಯಂತ ಪಾದಾರ್ಪಣೆ ಮಾಡಲಿದೆ ಹೊಸ ಹುಂಡೈ ಕ್ರೆಟಾ

New Hyundai Creta: ಇಂಡೋನೇಷ್ಯಾ ಆಟೋ ಶೋನಲ್ಲಿ ವಿಶ್ವದಾದ್ಯಂತ ಪಾದಾರ್ಪಣೆ ಮಾಡಲಿದೆ ಹೊಸ ಹುಂಡೈ ಕ್ರೆಟಾ

- Advertisement -

ಹೊಸ ಹುಂಡೈ ಕ್ರೆಟಾ ನವೆಂಬರ್ 11 ರಿಂದ 21 ರ ನಡುವೆ ಆಯೋಜಿಸಲಿರುವ ಇಂಡೋನೇಷ್ಯಾ ಅಂತರರಾಷ್ಟ್ರೀಯ ಆಟೋ ಶೋನಲ್ಲಿ (ಜಿಐಎಎಸ್) ವಿಶ್ವದಾದ್ಯಂತ ಪಾದಾರ್ಪಣೆ ಮಾಡಲಿದೆ. ಹುಂಡೈ ತನ್ನ ಇಂಡೋನೇಷ್ಯಾದ ವೆಬ್ ಸೈಟ್ ನಲ್ಲಿ ಮುಂಬರುವ ಕ್ರೆಟಾ ಫೇಸ್ ಲಿಫ್ಟ್ ನ ಮೊದಲ ಟೀಸರ್ ಚಿತ್ರಗಳನ್ನು ಬಿಡುಗಡೆಗೊಳಿಸಿದೆ.

ಇಂಡೋನೇಷ್ಯಾದಲ್ಲಿ ಹುಂಡೈ ತಯಾರಿಸಿದ ಮೊದಲ ಕಾರು ಕ್ರೆಟಾ. ಹುಂಡೈನ ಹೊಸ ವಿನ್ಯಾಸ ಫಿಲೋಸಫಿಯನ್ನು ಅನುಸರಿಸಿದೆ. ಈ ಹೊಸ ಕ್ರೆಟಾ ಡೇ ರನ್ನಿಂಗ್ ಲೈಟ್ ಗಳನ್ನು ಒಳಗೊಂಡಿದೆ. ಜೊತೆಗೆ ‘ಪ್ಯಾರಾಮೆಟ್ರಿಕ್ ಜ್ಯುವೆಲ್ ಪ್ಯಾಟರ್ನ್’ ಗ್ರಿಲ್ ಅನ್ನು ಒಳಗೊಂಡಿದೆ. ಇದು ಕ್ರೆಟಾದ ಹೊಸ ಜನರೇಷನ್‌ ನ ಅತಿದೊಡ್ಡ ನವೀಕರಣವಾಗಿದೆ.

ಇದನ್ನೂ ಓದಿ: Electrical cars : ಪ್ರಪಂಚದಾದ್ಯಂತ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್‌ ಕಾರುಗಳು

ಹೊಸ ಹುಂಡೈ ಕ್ರೆಟಾದ ಪ್ಯಾರಾಮೆಟ್ರಿಕ್ ಜ್ಯುವೆಲ್ ಪ್ಯಾಟರ್ನ್’ ಗ್ರಿಲ್ ಅನ್ನು ಮೊದಲ ಬಾರಿಗೆ ಪ್ರದರ್ಶಿಸಲಾಯಿತು. ಹಾಗೂ ಇದು ಹೊಸದಾಗಿ ವಿನ್ಯಾಸಗೊಳಿಸಲಾದ ಹೆಡ್ ಲೈಟ್ ಗಳು ಮತ್ತು ಸಿಂಗಲ್ ಪೀಸ್ ಏರ್ ಇನ್ ಲೆಟ್ ನೊಂದಿಗೆ ಬರುವ ಹೊಸ ಬಂಪರ್ ಅನ್ನು ಹೊಸ ಹುಂಡೈ ಕ್ರೆಟಾ ಒಳಗೊಂಡಿದೆ.

ಹೊಸ ಹುಂಡೈ ಕ್ರೆಟಾ ಹಿಂಭಾಗದಲ್ಲಿ ಈ ಹಿಂದೆ ಬಳಸಲಾದ ಮಾದರಿಯಂತೆಯೇ ಹಿಂಭಾಗದ ಲೈಟ್‌ ನ ಮಾದರಿಯು ವಿನ್ಯಾಸಗೊಂಡಿದೆ. ಅಲ್ಲದೇ ಮರುವಿನ್ಯಾಸಗೊಳಿಸಿದ ಟೈಲ್ ಗೇಟ್, ಹೊಸ ಸ್ಪಾಯ್ಲರ್ ಮತ್ತು ಮಿಶ್ರಲೋಹದ ಚಕ್ರಗಳ ಸೆಟ್ ಅನ್ನು ಒಳಗೊಂಡಿದೆ. ಹುಂಡೈ ತನ್ನ ಪ್ರಸ್ತುತ ಮಾದರಿಯಂತೆಯೇ ಅದೇ ಎಂಜಿನ್ ಮತ್ತು ಟ್ರಾನ್ಸ್ ಮಿಷನ್ ನೊಂದಿಗೆ ಹೊಸ ಕ್ರೆಟಾವನ್ನು ನೀಡುವ ಸಾಧ್ಯತೆಯಿದೆ.

ಇದನ್ನೂ ಓದಿ: Honda New Car : ಹೊಸ 10 ಇವಿ ಕಾರು ಬಿಡುಗಡೆ ಮಾಡಲು ಸಜ್ಜಾದ ಹೋಂಡಾ

(New Hyundai Creta to debut worldwide at Indonesia Auto Show)

RELATED ARTICLES

Most Popular