ದೀಪಾವಳಿಯಂದು ಟಾಪ್ ಮೈಲೇಜ್ ನೀಡುವ ಕಾರನ್ನು ಖರೀದಿಸಲು ನೀವು ಬಯಸಿದರೆ ನಿಮಗೆ ಗುಡ್ ನ್ಯೂಸ್ ಇದೆ. ಮಾರುತಿ ಸುಜುಕಿ ಹೊಸ ಆವೃತ್ತಿಯ ಮಾರುತಿ ಸುಜುಕಿ ಸೆಲೆರಿಯೊವನ್ನು ನವೆಂಬರ್ 10 ರಂದು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಕಾರನ್ನು ಹೆಚ್ಚಿನ ಜನರು ಬಹಳ ಸಮಯದಿಂದ ನಿರೀಕ್ಷಿಸುತ್ತಿದ್ದಾರೆ. ಮಾರುತಿ ಕಂಪನಿಯು ಸುಜುಕಿ ಸೆಲೆರಿಯೊ ಕಾರಿನ ಬುಕಿಂಗ್ ಶುರುಮಾಡಿದೆ.

ಸುಜುಕಿ ಸೆಲೆರಿಯೊ ಕಾರು ದೇಶದ ಅತಿ ಹೆಚ್ಚು ಮೈಲೇಜ್ ಪೆಟ್ರೋಲ್ ಕಾರು ಎಂದು ಕಂಪನಿ ಹೇಳಿಕೊಂಡಿದೆ. ಕಂಪನಿಯ ಪ್ರಕಾರ, ಸೆಲೆರಿಯೊ 26 ಕಿ.ಮೀ.ಪಿ.ಎಲ್ ವರೆಗೆ ಅತ್ಯುತ್ತಮ ಮೈಲೇಜ್ ನೀಡುತ್ತದೆ. ಮಾರುಕಟ್ಟೆಯಲ್ಲಿ, ಈ ಕಾರು ಡಾಟ್ಸನ್ ಗೋ, ಟಾಟಾ ಟಿಯಾಗೊ ಮತ್ತು ಹುಂಡೈ ಸ್ಯಾಂಟ್ರೋದೊಂದಿಗೆ ಸ್ಪರ್ಧಿಸಲಿದೆ. ಈ ಕಾರು ಹೊಸ ಮಾಡೆಲ್ ಉತ್ತಮ ಸ್ಟೈಲ್ ನೊಂದಿಗೆ ಸಿದ್ದಪಡಿಸಲಾಗಿದೆ.

ಬ್ಲೂಟೂತ್ ವ್ಯವಸ್ಥೆ, ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್ ಗಳು, ಅಜೆಸ್ಟ್ ಮಾಡಬಹುದಾದ ಎತ್ತರದ ಸೀಟ್, ಪವರ್ ವಿಂಡೋಗಳು ಮತ್ತು ಮ್ಯಾನುವಲ್ ಎಸಿಯಂತಹ ವೈಶಿಷ್ಟ್ಯಗಳನ್ನು ಮಾರುತಿ ಕಂಪನಿಯು ಸೆಲೆರಿಯೊದ ಪ್ರಸ್ತುತ ಮಾದರಿಯಲ್ಲಿ ನೀಡುತ್ತದೆ. ಸೆಲೆರಿಯೊದ ಹೊಸ ಮಾದರಿಯು ಪ್ರಸ್ತುತ ಮಾದರಿಗಿಂತ ದೊಡ್ಡದಾಗಿರುತ್ತದೆ. ಇದು ನಿಮಗೆ ಮೊದಲಿನ ಮಾದರಿಗಿಂತ ಹೆಚ್ಚಿನ ಸ್ಥಳವನ್ನು ನೀಡುತ್ತದೆ.

ಮಾರುತಿ ಕಂಪೆನಿಯ ಪ್ರಕಾರ ಹೊಸ ಸೆಲೆರಿಯೊ ಕಾರಿನ ಉತ್ಪಾದನೆ ಹರಿಯಾಣದ ಮನೇಸರ್ ಘಟಕದಲ್ಲಿ ಪ್ರಾರಂಭವಾಗಿದೆ. ಸೆಲೆರಿಯೊದ ಹೊಸ ಮಾದರಿಯ ಕಾರನ್ನು 11,000 ರೂ.ಗಳ ಟೋಕನ್ ಮೊತ್ತವನ್ನು ಪಾವತಿಸುವ ಮೂಲಕ ಬುಕಿಂಗ್ ಮಾಡಬಹುದು ಎಂದು ಕಂಪೆನಿ ಹೇಳಿದೆ. ಮಾರುತಿ ಸುಜುಕಿ https://www.marutisuzuki.com/ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಬುಕ್ ಮಾಡಬೇಕು.
ಇದನ್ನೂ ಓದಿ: Electrical cars : ಪ್ರಪಂಚದಾದ್ಯಂತ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಕಾರುಗಳು

ಅಧಿಕೃತ ಮಾರುತಿ ಶೋರೂಂಗಳಿಂದ ಕಾರಿನ ಬುಕಿಂಗ್ ಸಹ ಮಾಡಬಹುದು. ಈಗ ಹೊಸ ಪೆಟ್ರೋಲ್ ಎಂಜಿನ್, ವಿಶೇಷ ವಿನ್ಯಾಸ ಮತ್ತು ಸೆಗ್ಮೆಂಟ್-ಫಸ್ಟ್ ವೈಶಿಷ್ಟ್ಯಗಳೊಂದಿಗೆ, ಸೆಲೆರಿಯೊದ ಹೊಸ ಮಾದರಿಯು ಮತ್ತೊಮ್ಮೆ ಕಾಂಪ್ಯಾಕ್ಟ್ ವಿಭಾಗಕ್ಕೆ ಉತ್ಸಾಹವನ್ನು ತರಲಿದೆ. ಈ ಕಾರು ಮಾರುಕಟ್ಟೆಯಲ್ಲಿ ಉತ್ತಮ ಹಿಡಿತ ಸಾಧಿಸಿದೆ. ಎಂದು ಮಾರುತಿ ಸುಜುಕಿ ಇಂಡಿಯಾದ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್ ಶ್ರೀವಾಸ್ತವ ತಿಳಿಸಿದ್ದಾರೆ.
(Top Mileage Car Suzuki Celerio Ready for Booking on Diwali)