ಫ್ರೆಂಚ್ ಆಟೋಮೊಬೈಲ್ ಕಂಪನಿಯಾದ ಸಿಟ್ರೊಯ್ನ್, C3 (Citroen C3) ಅನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇದು ಮಲ್ಟಿ-ಸ್ಪೋಕ್ ಅಲಾಯ್ ವೀಲ್‌ಗಳು ಮತ್ತು ಸುತ್ತಲೂ ಬಾಡಿ ಕ್ಲಾಡಿಂಗ್ ಜೊತೆಗೆ ಮುಂಭಾಗ ಮತ್ತು ಹಿಂಭಾಗದದಲ್ಲಿ ದಪ್ಪನಾದ ಸ್ಕಿಡ್ ಪ್ಲೇಟ್‌ಗಳಿಂದ ನಿರ್ಮಿತವಾಗಿದೆ. C3, ಫ್ರೆಂಚ್ ತಯಾರಕರ ಎರಡನೇ ಕಾರ್ ಆಗಿದೆ. C3 ಇದು C5 ಏರ್‌ಕ್ರಾಸ್ ನಂತರ ಭಾರತದಲ್ಲಿ ಬಿಡುಗಡೆ ಮಾಡಿದ ಕಾರ್. ಈ ಕಾರಿನ ಎಕ್ಸ್ ಶೋ ರೂಂ ಬೆಲೆಯು 5.70 ಲಕ್ಷ.
ಸಿಟ್ರಾಯ್ನ್ C3 ಕಾರು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಅನ್ನು ಬೆಂಬಲಿಸುವ 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸ್ಟೀರಿಂಗ್ ವೀಲ್‌ನಲ್ಲಿ ಆಡಿಯೋ ಮತ್ತು ಫೋನ್ ನಿಯಂತ್ರಣಗಳು, ನಾಲ್ಕು ಸ್ಪೀಕರ್, ಮುಂಭಾಗ ಮತ್ತು ಹಿಂಭಾಗದ USB ಚಾರ್ಜಿಂಗ್ ಪೋರ್ಟ್ ಮುಂತಾದ ವೈಶಿಷ್ಟ್ಯಗಳನ್ನೊಳಗೊಂಡಿದೆ.
ಸಿಟ್ರೊಯ್ನ್ C3 ನ ವೈಶಿಷ್ಟ್ಯಗಳು ಹೀಗಿವೆ:
- ಸುತ್ತಲೂ ಬಾಡಿ ಕ್ಲಾಡಿಂಗ್ ಹೊಂದಿರುವ ಕಾರ್, ಮಲ್ಟಿ-ಸ್ಪೋಕ್ ಅಲಾಯ್ ವೀಲ್‌ಗಳನ್ನು ಅಳವಡಿಸಿಕೊಳ್ಳಬಹುದಾಗಿದೆ. ಜೊತೆಗೆ ಮುಂಭಾಗ ಮತ್ತು ಹಿಂಭಾಗದ ದಪ್ಪನಾದ ಸ್ಕಿಡ್ ಪ್ಲೇಟ್‌ಗಳನ್ನು ಹೊಂದಿದೆ.
- C3 ನ ಮುಂಭಾಗವು ಸಿಟ್ರೊಯ್ನ್ ಸಿಗ್ನೇಚರ್ ಗ್ರಿಲ್ ವಿಭಜಿತ ಹೆಡ್‌ಲ್ಯಾಂಪ್ಸ್ ನಿಂದ ಸುತ್ತುವರೆದಿದೆ ಮತ್ತು ಇದು LED DRL ಬೆಳಕನ್ನು ಕಾರು ಚಲಾಯಿಸುವಾಗ ನೀಡುತ್ತದೆ.
- 1.2-ಲೀಟರ್‌ನ ಮೂರು-ಸಿಲಿಂಡರ್ ನೈಸರ್ಗಿಕ ವಾಗಿ ಪೆಟ್ರೋಲ್ ಎಂಜಿನ್‌ನಿಂದ ಚಲಿಸುವ ಸಿಟ್ರೊಯ್ನ್ C3 ಕಾರ್ 81 hp ಮತ್ತು 115 Nm ಟಾರ್ಕ್ ಶಕ್ತಿ ಬಿಡುಗಡೆ ಮಾಡುವುದು.
- ಇದು 180 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 315 ಲೀಟರ್ ಬೂಟ್ ಸ್ಪೇಸ್ ಹೊಂದಿದೆ.
- ಗ್ರಾಹಕರು 109 hp ಮತ್ತು 190 Nm ಟಾರ್ಕ್ ಶಕ್ತಿ ಹೊರಹಾಕುವ ಎಂಜಿನ್‌ನ ಟರ್ಬೋಚಾರ್ಜ್ಡ್ ಆವೃತ್ತಿಯನ್ನು ಆಯ್ಕೆ ಮಾಡಬಹುದು.
- ಎರಡೂ ಎಂಜಿನ್ ಆಯ್ಕೆಗಳು ಕ್ರಮವಾಗಿ 5 ಮತ್ತು 6 -ಸ್ಪೀಡ್ ಮ್ಯಾನ್ಯುವಲ್ ವೇರಿಯಂಟ್ ಹೊಂದಿದೆ.
- ಇದರಲ್ಲಿ ಸ್ವಯಂಚಾಲಿತ ಗೇರ್ ಬಾಕ್ಸ್ (ಆಟೋಮೆಟಿಕ್ ಗೇರ್‌ಬಾಕ್ಸ್) ಅನ್ನು ಪರಿಚಯಿಸಲಾಗಿಲ್ಲ.
- ಸಾಮಾನ್ಯ ಎಂಜಿನ್ ಮತ್ತು ಟರ್ಬೋಚಾರ್ಜ್ಡ್ ಒನ್ ಕ್ರಮವಾಗಿ ಪ್ರತಿ ಲೀಟರ್‌ಗೆ 19.8 ಕಿ.ಮಿ ಮತ್ತು 19.4 ಕಿ.ಮಿ. ಮೈಲೇಜ್ ಕೊಡುತ್ತದೆ.
- ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಬ್ರೆಕ್ ಸಿಸ್ಟಮ್ ಇಬಿಡಿ ಯೊಂದಿಗೆ ಎಬಿಎಸ್ ತಂತ್ರಜ್ಞಾನ, ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್, ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ಹೈ-ಸ್ಪೀಡ್ ಅಲರ್ಟ್ ಸಿಸ್ಟಮ್ ಸೇರಿವೆ.
- ಇವೆಲ್ಲವುಗಳ ಜೊತೆಗೆ ಸಿಟ್ರೊಯ್ನ್ C3 ಇನ್ನೂ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ಇದನ್ನೂ ಓದಿ : Ola Electric Sportscar : ಭಾರತದಲ್ಲೂ ಪ್ರಾರಂಭವಾಗಲಿರುವ ಓಲಾ ಎಲೆಕ್ಟ್ರಿಕಲ್ ಸ್ಪೋರ್ಟ್ಸ್ ಕಾರ್!
(Citroen C3 sub-compact SUV launched in India here is the price and specification)