ಹಿಂದೆಲ್ಲಾ ವಿದೇಶಿಗರು ಎಲೆಕ್ಟ್ರಿಕ್ ವಾಹನಗಳಲ್ಲಿ ಓಡಾಡ್ತಾರೆ ಅನ್ನೋದನ್ನು ಕೇಳಿದ್ದೇವೆ. ಆದ್ರೀಗ ಕಾಲ ಬದಲಾಗಿದೆ. ಭಾರತದಲ್ಲಿ ಗಗನಕ್ಕೇರುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆ ವಾಹನ ಸವಾರರನ್ನು ಅನಿವಾರ್ಯವಾಗಿ ಎಲೆಕ್ಟ್ರಿಕ್ ವಾಹನ ಖರೀದಿಸುವಂತೆ ಮಾಡಿದೆ. ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಾಹನ ತಯಾರಕ ಕಂಪನಿಗಳು ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುತ್ತಿವೆ.

ಭಾರತದಲ್ಲಿ Tata Motors, MG Motor, Hyundai ಸೇರಿದಂತೆ ಹಲವು ಕಂಪನಿಗಳು ತಮ್ಮ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುತ್ತಿವೆ. ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸ ಬಯಸಿರುವವರಿಗೆ ಯಾವ ಕಾರುಗಳನ್ನು ಖರೀದಿಸಬೇಕೆಂಬ ಗೊಂದಲ ಉಂಟಾಗುವುದು ಸಹಜ. ಬಜೆಟ್ ಬೆಲೆಯ ಎಲೆಕ್ಟ್ರಿಕ್ ಕಾರುಗಳಾದ Tata Tigor EV, Nexon EV, MG ZS EV ಹಾಗೂ Hyundai Kona ಎಲೆಕ್ಟ್ರಿಕ್ ಕಾರುಗಳ ಬಗೆಗಿನ ವಿವರಗಳನ್ನು ನೋಡೋಣ.
ಇದನ್ನೂ ಓದಿ: 7 ಸೀಟ್ ಜೀಪ್ ಕಮಾಂಡರ್ ಎಸ್‌ಯುವಿ ಶೀಘ್ರದಲ್ಲೇ ಭಾರತಕ್ಕೆ

ಎಂಜಿ ಝಡ್‌ಎಸ್ ಎಲೆಕ್ಟ್ರಿಕ್ ಕಾರು ಬ್ಯಾಟರಿ ಶಕ್ತಿಯಲ್ಲೂ ಮುಂದಿದೆ. ಹೊಸ ಟಿಗೋರ್ ಇವಿ 26 ಕಿ.ವ್ಯಾ ಬ್ಯಾಟರಿ ಪ್ಯಾಕ್ ಹೊಂದಿದ್ದರೆ, ನೆಕ್ಸಾನ್ ಇವಿ 30.2 ಕಿ.ವ್ಯಾ ಬ್ಯಾಟರಿಯನ್ನು ಹೊಂದಿದೆ. ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಕಂಪನಿಯ ಕೋನಾ ಎಲೆಕ್ಟ್ರಿಕ್ ಕಾರು ಪೂರ್ತಿಯಾಗಿ ಚಾರ್ಜ್ ಆದ ನಂತರ 452 ಕಿ.ಮೀಗಳವರೆಗೆ ಚಲಿಸುತ್ತದೆ ಎಂದು ಹೇಳಲಾಗಿದೆ.

ಚಲನ ಶಕ್ತಿಯ ವಿಷಯದಲ್ಲಿ ಈ ಎಲ್ಲಾ ನಾಲ್ಕು ಎಲೆಕ್ಟ್ರಿಕ್ ಕಾರುಗಳು ಒಂದೇ ರೀತಿಯ ಮೋಟರ್ ಹೊಂದಿವೆ. ಎಂಜಿ ಝಡ್‌ಎಸ್ ಎಲೆಕ್ಟ್ರಿಕ್ ಕಾರಿನಲ್ಲಿರುವ ಎಲೆಕ್ಟ್ರಿಕ್ ಮೋಟರ್ 140 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಇನ್ನು ಟಾಟಾ ಮೋಟಾರ್ಸ್ ನ ಎರಡೂ ಎಲೆಕ್ಟ್ರಿಕ್ ಕಾರುಗಳು ಒಂದೇ ರೀತಿಯ ಕಾರ್ಯಕ್ಷಮತೆಯನ್ನು ಹೊಂದಿವೆ.

ಮೊದಲು ಈ ನಾಲ್ಕು ಎಲೆಕ್ಟ್ರಿಕ್ ಕಾರುಗಳ ನಡುವಿನ ಬೆಲೆ ವ್ಯತ್ಯಾಸ. ಟಾಟಾ ಮೋಟಾರ್ಸ್ ಕಂಪನಿಯು ಇತ್ತೀಚಿಗಷ್ಟೇ ತನ್ನ ಟಿಗೋರ್ ಎಲೆಕ್ಟ್ರಿಕ್ ಕಾರ್ ಅನ್ನು ಅನಾವರಣಗೊಳಿಸಿತ್ತು. ಈ ಕಾರಿನ ಬೆಲೆಯನ್ನು ಇನ್ನೂ ಘೋಷಿಸಲಾಗಿಲ್ಲ. ಆದರೆ ಈ ಎಲೆಕ್ಟ್ರಿಕ್ ಕಾರಿನ ಬೆಲೆ ರೂ. 9 ಲಕ್ಷಗಳಿಂದ ರೂ. 10 ಲಕ್ಷಗಳಾಗುವ ನಿರೀಕ್ಷೆಗಳಿವೆ.
ಇದನ್ನೂ ಓದಿ: Upcoming Cars : ಸಪ್ಟೆಂಬರ್‌ನಲ್ಲಿ ಭಾರತ ಮಾರುಕಟ್ಟೆಗೆ ಬರುತ್ತೆ ಈ ಕಾರುಗಳು

ಟಾಟಾ ಮೋಟಾರ್ಸ್ ಕಂಪನಿಯು ಬಿಡುಗಡೆಗೊಳಿಸಲಿರುವ ಟಿಗೋರ್ ಎಲೆಕ್ಟ್ರಿಕ್ ಕಾರು ಉಳಿದ ಎಲೆಕ್ಟ್ರಿಕ್ ಕಾರುಗಳಿಗಿಂತ ಕಡಿಮೆ ಬೆಲೆಯನ್ನು ಹೊಂದುವ ಸಾಧ್ಯತೆಗಳಿವೆ. ಇದರಿಂದ ಈ ಕಾರು ಭಾರತದ ಹಲವು ಗ್ರಾಹಕರ ಮೊದಲ ಆಯ್ಕೆಯ ಎಲೆಕ್ಟ್ರಿಕ್ ಕಾರ್ ಆಗುವ ನಿರೀಕ್ಷೆಗಳಿವೆ.