ಭಾರತೀಯ ಕಾರು ಮಾರುಕಟ್ಟೆಯಲ್ಲೀಗ 7 ಸೀಟರ್ ಕಾರುಗಳ ಕ್ರೇಜ್ ಹೆಚ್ಚುತ್ತಿದೆ. ಹುಂಡೈ ಮೋಟಾರ್ ಕೂಡ 7 ಸೀಟರ್ ನೂತನ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಜ್ಜಾಗಿದೆ.

ದೇಶದಲ್ಲಿ ಗ್ರಾಹಕರ ಮನ ಗೆದ್ದಿರುವ ಕ್ರೆಟಾ ಇದೀಗ ಹೊಸ ಅವತಾರದಲ್ಲಿ ಬಿಡುಗಡೆಯಾಗುತ್ತಿದೆ. ಸದ್ಯದಲ್ಲಿಯೇ 7 ಸೀಟರ್ ಕ್ರೆಟಾ ಕಾರು ಭಾರತದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

ಇತ್ತೀಚಿನ ದಿನಗಳಲ್ಲಿ 7 ಸೀಟರ್ ಕಾರ್ ಕ್ರೇಜ್ ಹೆಚ್ಚುತ್ತಿದ್ದು, ಗ್ರಾಹಕರು ಕೂಡ 7 ಸೀಟರ್ ಕಾರುಗಳನ್ನೇ ಹೆಚ್ಚಾಗಿ ಖರೀದಿ ಮಾಡುತ್ತಿದ್ದಾರೆ.

ಎಂಜಿ ಮೋಟಾರ್ಸ್ ಈಗಾಗಲೇ ಹೆಕ್ಟರ್ ಕಾರನ್ನು ಹೆಕ್ಟರ್ ಪ್ಲಸ್ ಆಗಿ ಪರಿವರ್ತಿಸಿದ್ರೆ, ಟಾಟಾ ಮೋಟಾರ್ಸ್ ತನ್ನ ಹ್ಯಾರಿಯರ್ ಕಾರನ್ನು 7 ಸೀಟರ್ ಗ್ರಾವಿಟಾಸ್ ಆಗಿ ಮೊಡಿಫೈ ಮಾಡಿದೆ.

ಈ ನಡುವಲ್ಲೇ ಹುಂಡೈ ಕೂಡ ಕ್ರೆಟಾ ಕಾರನ್ನು 7 ಸೀಟರ್ SUV ಬದಲಾವಣೆ ಕಂಡಿರುವುದು ಗ್ರಾಹಕರಿಗೆ ಕುತೂಹಲ ಮೂಡಿಸಿದೆ. ಕ್ರೆಟಾ ಕಾರಿನಲ್ಲಿರುವ ಫೀಚರ್ಸ್ ಗಳನ್ನೇ 7 ಸೀಟರ್ ಕ್ರೆಟಾ ಕಾರಿನಲ್ಲಿಯೂ ಬಳಕೆ ಮಾಡಲಾಗಿದೆ.

ಎಲ್ಇಡಿ ಹೆಡ್ ಲ್ಯಾಂಪ್, ಟೈಲ್ ಲ್ಯಾಂಪ್ಸ್ ಅಳವಡಿಸಿಕೊಳ್ಳಾಗಿದ್ದು, ವೈ ಸ್ಪೋಕ್ ಅಲೋಯ್ ವೀಲ್ ಬಳಕೆ ಮಾಡಲಾಗಿದೆ.

ಕಾರು 1.5 ಲೀಟರ್ ಪೆಟ್ರೋಲ್, 1.5 ಲೀಟರ್ ಡಿಸೇಲ್ ಹಾಗೂ 1.4 ಲೀಟರ್ ಟರ್ಬೋ ಚಾರ್ಜ್ ಎಂಜಿನ್ ಆಯ್ಕೆಯಲ್ಲಿ ಕಾರನ್ನು ಖರೀದಿ ಮಾಡಬಹುದಾಗಿದೆ.

ಎಕ್ಸ್ ಶೋ ರೂಂ ಕಾರಿನ ಬೆಲೆಯನ್ನು 13 ಲಕ್ಷದಿಂದ 19 ಲಕ್ಷ ಎಂದು ಅಂದಾಜಿಸಲಾಗಿದ್ದು, ಶೀಘ್ರದಲ್ಲಿಯೇ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಕಾರು ಲಭ್ಯವಾಗಲಿದೆ.