ದೇಶದ ಪ್ರಮುಖ ಕಾರು ಉತ್ಪಾದಕ ಸಂಸ್ಥೆಯಾಗಿರುವ ಹುಂಡೈ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದೆ. ದೀಪಾವಳಿಯ ಪ್ರಯುಕ್ತ ಈ ಡಿಸ್ಕೌಂಟ್ ಆಫರ್ ಘೋಷಿಸಿದೆ.

ಹಬ್ಬದ ದಿನದಂದು ಕಾರು ಖರೀದಿಸಲು ಪ್ಲ್ಯಾನ್ ಮಾಡಿದವರಿಗೆ ಅನುಕೂಲವಾಗಿದೆ. ಅದ್ರಲ್ಲೂ ಸ್ಯಾಂಟ್ರೋ, ಸೇಡಾನ್ ಕಾರಿನ ಮೇಳೆ ಭರ್ಜರಿ ಆಫರ್ ಘೋಷಿಸಿದೆ.

ಹುಂಡೈ ಪ್ರಮುಖವಾಗಿ ಸ್ಯಾಂಟ್ರೊ, ಗ್ರಾಂಡ್10, ಗ್ರಾಂಡ್ ಐ10 ನಿಯೋಸ್, ಸೆಡಾನ್ ಕಾರುಗಳಾದ ಎಲೆನ್ಟ್ರಾ, ಔರಾ ಕಾರಿನ ಮೇಲೆ ಆಫರ್ ನೀಡಿದೆ. ಅಷ್ಟೇ ಅಲ್ಲದೇ ವೆನ್ಯು, ಕ್ರೆಟಾ 2020, ವರ್ನಾ ಕಾರಿನ್ನು ಡಿಸ್ಕೌಂಟ್ ಬೆಲೆ ಮಾರಾಟ ಮಾಡುತ್ತಿದೆ.

ಸ್ಯಾಂಟ್ರೋ ಕಾರಿನ ಮೇಲೆ 25 ಸಾವಿರ ಡಿಸ್ಕೌಂಟ್ ಜೊತೆಗೆ 15 ಸಾವಿರ ಎಕ್ಸ್ಚೇಂಜ್ ಬೋನಸ್, 5 ಸಾವಿರ ಕಾರ್ಪೊರೇಟ್ ಬೋನಸ್ ಘೋಷಿಸಿದೆ. ಅಷ್ಟೇ ಅಲ್ಲದೇ 15 ಸಾವಿರ ಕ್ಯಾಶ್ ಡಿಸ್ಕೌಂಟ್ ನೀಡುತ್ತಿದೆ.

ಗ್ರಾಂಡ್ ಐ10 ಪ್ರೆಟ್ರೋಲ್ ಮಾಡೆಲ್ ಕಾರಿನ ಮೇಲೆ 40 ಸಾವಿರ ಡಿಸ್ಕೌಂಟ್, 15 ಸಾವಿರ ಎಕ್ಸ್ಚೇಂಜ್ ಬೋನಸ್, 5 ಸಾವಿರ ಕಾರ್ಪೋರೇಟ್ ಬೋನಸ್ ನೀಡುತ್ತಿದೆ.

ಗ್ರಾಂಡ್ ಐ10 ನಿಯೋಸ್ ಕಾರಿನ ಮೇಲೆ 10 ಸಾವಿರ ಡಿಸ್ಕೌಂಟ್, 10 ಸಾವಿರ ಎಕ್ಸ್ಚೇಂಜ್ ಬೋನಸ್, 5 ಸಾವಿರ ಕಾರ್ಪೊರೇಟ್ ಬೆನಿಫಿಟ್ ನೀಡುತ್ತಿದೆ.

ಹುಂಡೈ ಎಲೈಟ್ ಕಾರಿನ ಮೇಲೆ 50 ಸಾವಿರ ಡಿಸ್ಕೌಂಟ್, 20 ಸಾವಿರ ಎಕ್ಸ್ಚೇಂಜ್ ಬೆನಿಫಿಟ್, 5 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್ ನೀಡುತ್ತಿದೆ.