Tata Punch ICNG : ಪೆಟ್ರೋಲ್, ಡಿಸೇಲ್ ಬದಲು ಇತ್ತೀಚಿನ ದಿನಗಳಲ್ಲಿ ಎಲೆಕ್ಟಿಕ್ ಕಾರುಗಳು ರಸ್ತೆಗೆ ಇಳಿಯುತ್ತಿವೆ. ಅದ್ರಲ್ಲೂ ಸಿಎನ್‌ಜಿ ಮಾದರಿಯ ಕಾರುಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಇದೀಗ ಟಾಟಾ ಕಂಪೆನಿಯ ಅತೀ ಹೆಚ್ಚಿನ ಬೇಡಿಕೆ ಪಡೆದುಕೊಂಡಿರುವ ಟಾಟಾ ಪಂಚ್ ಇದೀಗ ಸಿಎನ್‌ಜಿ ಮಾದರಿಯಲ್ಲಿ ಬಿಡುಗಡೆಯಾಗಿದೆ. ಈ ಕಾರು ಅತ್ಯಂತ ಕಡಿಮೆ ಬೆಲೆಗೆ ಹಲವು ವೈಶಿಷ್ಟ್ಯತೆಗಳನ್ನು ಗ್ರಾಹಕರಿಗೆ ಪರಿಚಯಿಸಿದೆ.
ಟಾಟಾ ಪಂಚ್ iCNG ರೂ 7.10 ಲಕ್ಷಕ್ಕೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಪ್ರಮುಖವಾಗಿ ಧ್ವನಿ-ಸಕ್ರಿಯಗೊಳಿಸಿದ ಎಲೆಕ್ಟ್ರಿಕ್ ಸನ್‌ರೂಫ್ ಫೀಚರ್ಸ್ ಪರಿಚಯಿಸಿದೆ. ಜನವರಿಯಲ್ಲಿ 2023 ಆಟೋ ಎಕ್ಸ್‌ಪೋದಲ್ಲಿ ಈ ಕಾರನ್ನು ಪ್ರದರ್ಶಿಸಲಾಗಿದೆ. ಟಾಟಾ ಪಂಚ್ iCNG ಮೂರು ಮಾದರಿಯಲ್ಲಿ ಲಭ್ಯವಿದೆ. ಈಗಾಗಲೇ ಆಲ್ಟ್ರೋಜ್ ಸಿಎನ್‌ಜಿಯಲ್ಲಿ ಪರಿಚಯಿಸಿರುವ ಅವಳಿ ಸಿಲಿಂಡರ್ ಸಿಎನ್‌ಜಿ ತಂತ್ರಜ್ಞಾನವನ್ನು ಒಳಗೊಂಡಿದೆ.

ಪಂಚ್ ಸಿಎನ್‌ಜಿಯು 1.2-ಲೀಟರ್ ಮೂರು-ಸಿಲಿಂಡರ್, ಎನ್‌ಎ ಪೆಟ್ರೋಲ್ ಎಂಜಿನ್ ಜೊತೆಗೆ ಫ್ಯಾಕ್ಟರಿ-ಫಿಟ್ ಮಾಡಿದ ಸಿಎನ್‌ಜಿ ಕಿಟ್‌ನಿಂದ ನಿಯಂತ್ರಿಸಲ್ಪಡುತ್ತದೆ. ಮೋಟಾರು, CNG ಮೋಡ್‌ನಲ್ಲಿ, 76bhp ಮತ್ತು 97Nm ಟಾರ್ಕ್ ಮಾದರಿಯಲ್ಲಿದೆ. ಐದು-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಳವಡಿಸಲಾಗಿದೆ. ಇತರ ಸಿಎನ್‌ಜಿ ಕಾರುಗಳಂತೆಯೇ ಪಂಚ್ ಅನ್ನು ನೇರವಾಗಿ ಸಿಎನ್‌ಜಿ ಮೋಡ್‌ನಲ್ಲಿ ಪ್ರಾರಂಭಿಸಬಹುದು, ಈ ವೈಶಿಷ್ಟ್ಯವನ್ನು ಮಾರುತಿ ಅಥವಾ ಹ್ಯುಂಡೈ ನೀಡುವುದಿಲ್ಲ.ಈ ಎರಡು ಸಿಲಿಂಡರ್‌ಗಳಿಂದಾಗಿ ಅತೀ ಹೆಚ್ಚಿನ ಬೂಟ್ ಸ್ಪೇಸ್ ಒಳಗೊಂಡಿದೆ. ಇನ್ನು ಸುರಕ್ಷತೆಗಾಗಿ ಕಂಪೆನಿ ಸಾಕಷ್ಟು ಫೀಚರ್ಸ್‌ಗಳನ್ನು ನೀಡಿದೆ.
ಪ್ರಮುಖವಾಗಿ ಟಾಟಾ ಪಂಚ್ ಸಿಎನ್‌ಜಿ ಒಟ್ಟು ಆರು ಏರ್‌ಬ್ಯಾಗ್‌ಗಳನ್ನು ಒಳಗೊಂಡಿದೆ. ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, 16-ಇಂಚಿನ ಡೈಮಂಡ್-ಕಟ್ ಅಲಾಯ್ ಚಕ್ರಗಳು, ಏಳು-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಟೋಮ್ಯಾಟಿಕ್ ಎಸಿ ಕಂಟ್ರೋಲ್, ಧ್ವನಿ-ಸಕ್ರಿಯ ಎಲೆಕ್ಟ್ರಿಕ್ ಸನ್‌ರೂಫ್, ರೈನ್ ಸೆನ್ಸಿಂಗ್ ವೈಪರ್‌ಗಳು, 7.0-ಇಂಚಿನ ಟಚ್‌ಸ್ಕ್ರೀನ್ ಮತ್ತು ಡಿಜಿಟಲ್ ತಂತ್ರಜ್ಞಾನವನ್ನು ಒಳಗೊಂಡಿದೆ. ಡ್ರೈವರ್‌ನ ಡಿಸ್‌ಪ್ಲೇ, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಸಂಪರ್ಕ, ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್, ಸ್ವಯಂಚಾಲಿತ ಕ್ಲೈಮೇಟ್ ಕಂಟ್ರೋಲ್, ಸ್ವಯಂಚಾಲಿತ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಜೊತೆಗೆ ಎತ್ತರ ಹಾಗೂ ಹೊಂದಾಣಿಕೆ ಮಾಡುವ ಡ್ರೈವರ್ ಸೀಟ್ ವ್ಯವಸ್ಥೆಯನ್ನು ನೀಡಲಾಗಿದೆ.

ಟಾಟಾ ಪಂಚ್ CNG ಬೆಲೆ :
ಟಾಟಾ ಪಂಚ್ iCNG ಆರಂಭಿಕ ಬೆಲೆ ಟಾಟಾ ಪಂಚ್ CNG Pure 7,09,900ರೂ.ಗೆ ಲಭ್ಯವಿದೆ. ಎರಡನೇ ಮಾದರಿ Adventure 7,84,900 ರೂ., Adventure Rhythm 8,19,900 ರೂ., Accomplished 8,84,900 ರೂ., Accomplished Dazzle S 9,67,900 ರೂಪಾಯಿಗೆ ಲಭ್ಯವಿದೆ. ಹೆಚ್ಚುವರಿಯಾಗಿ ವಾಯ್ಸ್ ಎನೇಬಲ್ ಮಾಡಿರುವ ಸಿಂಗಲ್ ಪೇನ್ ಸನ್‌ರೂಫ್, ಮೊಬೈಲ್ ಚಾರ್ಜಿಂಗ್‌ಗೆ ಅನುಕೂಲವಾಗುವ ಸಲುವಾಗಿ ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಹಾಗೂ ಮುಂಭಾಗದಲ್ಲಿ ಆರ್ಮ್ ರೆಸ್ಟ್ ಫೀಚರ್ಸ್ ನೀಡಲಾಗಿದೆ.
ಇದನ್ನೂ ಓದಿ : Royal Enfield company : ಶೀಘ್ರದಲ್ಲೇ ಭಾರತದಲ್ಲಿ 3 ಹೊಸ ಬೈಕ್‌ಗಳನ್ನು ಪರಿಚಯಿಸಲಿದೆ ರಾಯಲ್ ಎನ್‌ಫೀಲ್ಡ್ ಕಂಪೆನಿ
ಇದನ್ನೂ ಓದಿ : Maruti Suzuki Swift car : ಹೊಸ ವೈಶಿಷ್ಟ್ಯತೆಯೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟ ಮಾರುತಿ ಸುಜುಕಿ ಸ್ವಿಫ್ಟ್