ಮುಂಬೈ: ದೇಶದ ಪ್ರಮುಖ ಕಾರು ತಯಾರಿಕಾ ಕಂಪೆನಿ ಮಾರುತಿ ಸುಜುಕಿ ಇಂಡಿಯಾ ಬಿಎಸ್ -6 ಮಾದರಿಯ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಇದೀಗ ಬಿಎಸ್-6 ಮಾನದಂಡಗಳನ್ನು ಪೂರೈಸುವ ಸೆಲೆರಿಯೋ ಶ್ರೇಣಿಯ ಎಸ್-ಸಿಎನ್ ಜಿ ಮಾದರಿಯ ಕಾರನ್ನು ಮಾರುಕಟ್ಟೆಯ ಪರಿಚಯಿಸಿದೆ. ಹಿಂದಿಗಿಂಯಲೂ ಸೆಲೆರಿಯೋ ವಿಭಿನ್ನವಾಗಿದ್ದು ಗ್ರಾಹಕರಿಗೆ ಆಕರ್ಷಣೆಯನ್ನು ಮೂಡಿಸುವಂತಿದೆ.

ನಗರಗಳಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಸೆಲೆರಿಯೋ ಕಾರನ್ನು ಮಾರುತಿ ಈಗಾಗಲೇ ಪರಿಚಯಿಸಿದೆ.

ಆದ್ರೀಗ ಬಿಎಸ್ -6 ಮಾನದಂಡವನ್ನು ಅಳವಡಿಸಿಕೊಂಡು ಸೆಲೆರಿಯೋ ಕಾರಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದೆ.

ಆಟೋ ಎಕ್ಸ್ ಪೋ 2020 ಯಲ್ಲಿ ಘೋಷಿಸಲಾಗಿರುವಂತೆಯೇ ಕಂಪೆನಿ ಮಿಷನ್ ಗ್ರೀನ್ ಮಿಲಿಯನ್ ದೃಷ್ಟಿಗೆ ಅನುಗುಣವಾಗಿ ಮಾರುತಿ ಸುಜುಕಿ ಸೆಲೆರಿಯೋ ಎಸ್-ಸಿಎನ್ ಜಿ ಕಾರನ್ನು ಸಿದ್ದಪಡಿಸಿ ಮಾರುಕಟ್ಟೆಗೆ ಪರಿಚಯಿಸಲಾಗಿದೆ.

ಸೆಲೆರಿಯೊ ಡಿಸೈನ್ ತುಂಬಾನೆ ಆಕರ್ಷಣೀಯವಾಗಿದ್ದು, ನಗರ ಪ್ರದೇಶಗಳಲ್ಲಿ ಚಾಲನೆಗೆ ಅನುಕೂಲವನ್ನು ಕಲ್ಪಿಸುತ್ತಿದೆ. ಅದ್ರಲ್ಲೂ ಯುವ ದಂಪತಿಗಳನ್ನು ಸೆಳೆಯುವ ಮೂಲಕ ಜನಪ್ರಿಯವಾಗಿದೆ.

ಕಾರಿನ ಎಕ್ಸ್ ಟೀರಿಯರ್ ಹಾಗೂ ಇಂಟಿಯರ್ ಅತ್ಯಾಕರ್ಷಕವಾಗಿದೆ. ಅಲ್ಲದೇ ಕಾರು ಆರಾಮದಾಯಕ ಸವಾರಿ, ಸುಲಭ ಕುಶಲತೆ ಮತ್ತು ಅತ್ಯುತ್ತಮ ಇಂಧನ ದಕ್ಷತೆಯಿಂದಾಗಿ ಗ್ರಾಹಕರ ಮೆಚ್ಚುಗೆ ಪಡೆದಿದೆ.

ಸೆಲೆರಿಯೋ ಎಸ್-ಸಿಎನ್ ಜಿ ಕಾರು ಎರಡು ಪೆಡಲ್ ತಂತ್ರಜ್ಞಾನದ ಪ್ರವರ್ತಕ ಕಂಪೆನಿಯಾಗಿ ಭಾರತದಲ್ಲಿ ಆಟೋ ಗೇರ್ ಶಿಫ್ಟ್ ತಂತ್ರಜ್ಞಾನವನ್ನು ಪರಿಚಯಿಸಿದ ಮೊದಲ ಕಾರು ಎನಿಸಿಕೊಂಡಿದೆ.

ಸೆಲೆರಿಯೋ ಎಸ್-ಸಿಎನ್ ಜಿ ಕಾರಿನ ಮಾರುಕಟ್ಟೆಯ ದರ ಬೆಲೆ 5.36 ಲಕ್ಷ ರೂ. ನಿಗದಿಯಾಗಿದೆ. ಈಗಾಗಲೇ ದೇಶದಾದ್ಯಂತ 5 ಲಕ್ಷಕ್ಕೂ ಹೆಚ್ಚು ಗ್ರಾಹಕರು ಸೆಲೆರಿಯೊವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಕಾರು ಮಾರುಕಟ್ಟೆಗೆ ಬಿಡುಗಡೆಯಾಗಿದೆ ಎಂದು ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕ (ಮಾರುಕಟ್ಟೆ ಮತ್ತು ವ್ಯಾಪಾರ) ಶ್ರೀ ಶಶಾಂಕ್ ಶ್ರೀವಾಸ್ತವ ತಿಳಿಸಿದ್ದಾರೆ.