ಮಾರುತಿ ಸುಜುಕಿ ಕಂಪೆನಿ ಗ್ರಾಹಕರಿಗಾಗಿ ಆಗಾಗ ಡಿಸ್ಕೌಂಟ್ ಬೆಲೆಗೆ ಕಾರುಗಳನ್ನು ಮಾರಾಟ ಮಾಡುತ್ತಿರುತ್ತವೆ. ಆದರೀಗ ಲಾಕ್ಡೌನ್ ಅವಧಿಯಾಗಿದ್ದು, ಮಾರಾಟವನ್ನು ಹೆಚ್ಚಿಸುವ ಸಲುವಾಗಿ ಮತ್ತು ಮಾರುಕಟ್ಟೆಯನ್ನು ಅಭಿವೃದ್ಧಿಸುವ ಸಲುವಾಗಿ ಮಾರುತಿ ಸುಜುಕಿ ಡೀಲರ್ಗಳು ಕೆಲ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ ಘೋಷಿಸಿದ್ದಾರೆ.

ಮಾರುತಿ ಕಂಪೆನಿಯ ಅಲ್ಟೋ, ಸ್ವಿಫ್ಟ್, ಬಲೆನೋ, ಡಿಸೈರ್ ಕಾರುಗಳ ಮೇಲೆ ಡೀಲರ್ಸ್ಗಳು ಡಿಸ್ಕೌಂಟ್ ನೀಡಿದ್ದಾರೆ.

ಇದರ ಜೊತೆಗೆ ಸುಜುಕಿ ಅರೆನಾ ಹಾಗು ನೆಕ್ಸಾ ಕಾರಿನ ಮೇಲೆ ಡಿಸ್ಕೌಂಟ್ ಘೋಷಿಸಿದ್ದಾರೆ. ನಗದು ಡಿಸ್ಕೌಂಟ್ ಸೇರಿದಂತೆ ಕೆಲ ಕಾರಿನ ಮೇಲೆ ಎಕ್ಸ್ಚೇಂಜ್ ಬೋನಸ್ ಕೂಡ ನೀಡಿದ್ದಾರೆ. ಆದರೆ ಈ ಡಿಸ್ಕೌಂಟ್ಗಳು ಆಯ್ದ ಡೀಲರ್ಸ್ಗಳ ಬಳಿ ಮಾತ್ರ ಲಭ್ಯವಿದೆ.

ಸ್ವಿಫ್ಟ್ ಮತ್ತು ಡಿಸೈರ್ ಕಾರಿನ 20 ಸಾವಿರ ಮತ್ತು 25 ಸಾವಿರ ರೂಪಾಯಿ ಎಕ್ಸ್ಚೇಂಜ್ ಬೋನಸ್ ಆಫರ್ ಸೇರಿದಂತೆ 20 ಸಾವಿರ ರೂಪಾಯಿ ಕ್ಯಾಶ್ ಡಿಸ್ಕೌಂಟ್ ನೀಡಿದ್ದಾರೆ.

ಮಾರುತಿ ಸುಜುಕಿ ಅಲ್ಟೋ ಕಾರಿನ ಮೇಲೆ 20 ಸಾವಿರ ರೂಪಾಯಿ ಕ್ಯಾಶ್ ಡಿಸ್ಕೌಂಟ್ ಹಾಗೂ 15 ಸಾವಿರ ರೂಪಾಯಿ ಎಕ್ಸೇಂಜ್ ಬೋನಸ್ ಆಫರ್ ನೀಡಿದ್ದಾರೆ.

ಸೆಲೆರಿಯೋ ಕಾರಿನ ಮೇಲೆ 20 ಸಾವಿರ ರುಪಾಯಿ ಎಕ್ಸ್ಚೇಂಜ್ ಬೋನಸ್ ಆಫರ್ ಹಾಗೂ 25 ಸಾವಿರ ರೂಪಾಯಿ ಕ್ಯಾಶ್ ಆಫರ್ ನೀಡಿದ್ದಾರೆ.

ಮಾರುತಿ ಇಗ್ನಿಸ್ ಕಾರುಗಳಿಗೆ 15 ಸಾವಿರ ಎಕ್ಸ್ಚೇಂಜ್ ಬೋನಸ್ ಆಫರ್ ಮತ್ತು 20 ಸಾವಿರ ರೂಪಾಯಿ ಕ್ಯಾಶ್ ಡಿಸ್ಕೌಂಟ್ ಘೋಷಿಸಲಾಗಿದೆ.

ಬಲೆನೋ ಕಾರುಗಳಿಗೆ 15 ಸಾವಿರ ಎಕ್ಸ್ಚೇಂಜ್ ಬೋನಸ್ ಆಫರ್ ಮತ್ತು 20 ಸಾವಿರ ರೂಪಾಯಿ ಕ್ಯಾಶ್ ಡಿಸ್ಕೌಂಟ್ ಘೋಷಿಸಲಾಗಿದೆ.