- ಸುಶ್ಮಿತಾ ಸುಬ್ರಹ್ಮಣ್ಯ
ಕೋವಿಡ್ ಎರಡನೇ ಅಲೆಯಿಂದಾಗಿ ಇಡೀ ಪ್ರಪಂಚವೇ ತತ್ತರಿಸಿಹೊಗಿದೆ. ಭಾರತದ ದೊಡ್ಡ ದೊಡ್ಡ ಕಾರು ಮಾರಾಟ ಕಂಪೆನಿಗಳು ಮಾರಾಟವಿಲ್ಲದೆ ಗ್ರಾಹಕರನ್ನು ಎದುರು ನೋಡುವ ಸ್ಥಿತಿ ನಿರ್ಮಣವಾಗಿತ್ತು. ಆದರೆ ಇಂತಹ ಸ್ಥಿತಿಯಲ್ಲಿ ಮಾರುತಿ, ಹುಂಡೈ ಹಾಗೂ ಟಾಟಾ ಕಂಪೆನಿಗಳು ಜುಲೈ ತಿಂಗಳಲ್ಲಿ ಕಾರು ಮಾರಾಟದಲ್ಲಿಯೇ ದಾಖಲೆ ಬರೆದಿವೆ.

ಮೇ, ಜೂನ್ ತಿಂಗಳಲ್ಲಿ ದೇಶದಲ್ಲಿ ಕಾರು ಮಾರಾಟದ ಪ್ರಮಾಣ ಕಡಿಮೆಯಾಗಿತ್ತು. ಆದರೆಜುಲೈ ತಿಂಗಳ ವರದಿ ಮಾರುತಿ, ಟಾಟಾ, ಹ್ಯುಂಡೈ ಕಂಪೆನಿಗಳೇ ಅಚ್ಚರಿ ಪಡುವಂತಿದೆ. ಹಿಂದೆಂದಿಗಿಂತಲೂ ಅಧಿಕ ಸಂಖ್ಯೆಯಲ್ಲಿ ಕಾರುಗಳ ಮಾರಾಟವಾಗಿದ್ದು, ಗ್ರಾಹಕರಿಗೂ ಅಚ್ಚರಿಯನ್ನು ತಂದಿದೆ.

ಮಾರುತಿ ಕಂಪೆನಿ ಜೂನ್‌ನಲ್ಲಿ 1,08,064 ಕಾರುಗಳನ್ನುಮಾರಾಟ ಮಾಡಿತ್ತು. ಜುಲೈನಲ್ಲಿ, ಬ್ರಾಂಡ್ ದೇಶೀಯ ಮಾರುಕಟ್ಟೆಯಲ್ಲಿ ಮಾರಾಟ ಮತ್ತು ರಫ್ತು ಸೇರಿದಂತೆ ಒಟ್ಟು 1,62,462 ಕಾರುಗಳನ್ನು ಮಾರಾಟ ಮಾಡಿದೆ. ಆದರೆ ಜೂನ್ ತಿಂಗಳಿಗೆ ಹೋಲಿಸಿದರೆ ಕಾರುಗಳ ಮಾರಾಟದಲ್ಲಿ 50.33 % ಏರಿಕೆಯಾಗಿದೆ.

ಹ್ಯುಂಡೈ ಕಾರು ತಯಾರಿಕಾ ಕಂಪೆನಿ ಕೂಡ ಅತ್ಯಧಿಕ ಸಂಖ್ಯೆಯಲ್ಲಿಯೇ ಕಾರುಗಳನ್ನು ಮಾರಾಟ ಮಾಡಿದೆ. ಈ ವರ್ಷದ ಜುಲೈ ತಿಂಗಳ ಹುಂಡೈ ಒಟ್ಟು 48,042 ಕಾರುಗಳನ್ನು ಮಾರಾಟವನ್ನು ಮಾಡಿದೆ. ಇತ್ತೀಚೆಗೆ ಬಿಡುಗಡೆಯಾದ ಹ್ಯುಂಡೈ ಅಲ್ಕಾಜಾರ್ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ಪ್ರೀಮಿಯಂ ಏಳು ಆಸನಗಳ ಎಯುವಿಯ ಹೊರತಾಗಿ, ಹ್ಯುಂಡೈ ಕ್ರೆಟಾ, ಹ್ಯುಂಡೈವೆನ್ಯೂ ಮತ್ತು ಹ್ಯುಂಡೈ ಐ 20 ಕಾರುಗಳ ಮಾರಾಟವೂ ವೃದ್ದಿಸಿದೆ.

ಅಷ್ಟೇ ಯಾಕೆ ಟಾಟಾ ಮೋಟಾರ್ಸ್ ಕಾರು ಮಾರಾಟದಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಜುಲೈನಲ್ಲಿ 30,185 ಪ್ರಯಾಣಿಕ ವಾಹನಗಳ ಮಾರಾಟ ಮಾಡಿದೆ. 23,848 ವಾಣಿಜ್ಯ ವಾಹನಗಳ ಮಾರಾಟ ಮಾಡಿದೆ ಅದರಲ್ಲಿ 2052 ಕಾರುಗಳನ್ನು ಮಾಡಲಾಗಿದೆ.

ಮಾರುತಿ ಸುಜುಕಿ, ಹ್ಯುಂಡೈ ಮತ್ತು ಟಾಟಾ ಮೋಟಾರ್ಸ್ ಮತ್ತೆ ಟ್ರ್ಯಾಕ್‌ಗೆ ಮರಳಿವೆ ಎಂದು ವರದಿ ಸ್ಪಷ್ಟವಾಗಿ ತೋರಿಸುತ್ತಿದೆ. ಜುಲೈನಲ್ಲಿ ಈ ಮೂರು ಕಾರು ತಯಾರಕರ ವಿವಿಧ ಮಾಡೆಲ್‌ಗಳು ಗ್ರಾಹಕರನ್ನ ಸೆಳೆಯುವಲ್ಲಿ ಯಶಸ್ವಿಯಾಗಿವೆ. ಮಾರುತಿ ಒಂದು ಲಕ್ಷಯೂನಿಟ್‌ಗಳನ್ನು ಮಾರಾಟ ಮಾಡುವ ಮೂಲಕ ಕಾರು ಮಾರಾಟದಲ್ಲಿಯೇ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.