ಮಾರುತಿ ಸುಜುಕಿ ಇಂಡಿಯಾ (Maruthi Suzuki ) ಮಾತೃಸಂಸ್ಥೆ ಸುಜುಕಿ ಮೋಟಾರ್ ಕಾರ್ಪೋರೇಷನ್ (Suzuki Motor Corporation) ಅಕ್ಟೋಬರ್ 26 ರಿಂದ ನವೆಂಬರ್ 5 ರವರೆಗೆ ಟೋಕಿಯೊದಲ್ಲಿ ಜಪಾನ್ ಮೊಬಿಲಿಟಿ ಶೋ 2023 ( Japan Mobility Show 2023) ಆಯೋಜಿಸಿದೆ. ಈ ಶೋನಲ್ಲಿ ಮಾರುತಿ ತನ್ನ ಹೊಸ ಮಾರುತಿ ಸ್ವಿಫ್ಟ್ ಕಾರನ್ನು( Maruthi Swift New Cars) ಅನಾವರಣಗೊಳಿಸಲಿದೆ.
ಭಾರತದಲ್ಲಿ ಮಾರುತಿ ಕಂಪೆನಿಯ ಸ್ವಿಫ್ಟ್ ಕಾರುಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದ್ದವು. 2023 ರಲ್ಲಿ ಮಾರುತಿ ಹಲವು ಬದಲಾವಣೆ ಗಳೊಂದಿಗೆ ಸ್ವಿಫ್ಟ್ ಕಾರನ್ನು ಪರಿಚಯಿಸಿದ್ದು, ಇದೀಗ ಹೊಸ ವಿನ್ಯಾಸದ ಕಾರನ್ನು ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ.
ಮಾರುತಿ ಸ್ವಿಫ್ಟ್ ಕಾರು ಭಾರತದಲ್ಲಿ FY24 ರಲ್ಲಿ (ಏಪ್ರಿಲ್-ಸೆಪ್ಟೆಂಬರ್) 1,03,000 ಯುನಿಟ್‌ಗಳಲ್ಲಿ ಬಲೆನೊ ಮತ್ತು ವ್ಯಾಗನ್‌ಆರ್ ಕಾರುಗಳ ಮಾರಾಟಕ್ಕಿಂತಲೂ ಮುಂದಿದೆ. ಇದು FY23 ರಲ್ಲಿ 1,77,000 ಯುನಿಟ್‌ಗಳಲ್ಲಿ ನಾಲ್ಕನೇ ಅತಿ ಹೆಚ್ಚು ಮಾರಾಟವಾದ ಕಾರು ಮತ್ತು FY22 ನಲ್ಲಿ 1,68,000 ಯುನಿಟ್‌ಗಳಲ್ಲಿ ಎರಡನೆಯದು ಎನಿಸಿಕೊಂಡಿದೆ.
ಇದನ್ನೂ ಓದಿ : ಕೇವಲ 6.99 ಲಕ್ಷ ರೂ.ಗೆ ಬಿಡುಗಡೆಯಾಯ್ತು ಹ್ಯುಂಡೈ I20 ಕಾರು : ಫೀಚರ್ಸ್ ಮಾತ್ರ ಅತ್ಯದ್ಬುತ
ಸುಜುಕಿ ಮೋಟಾರ್ ಕಾರ್ಪೊರೇಷನ್ ಹೊಸ ಮಾರುತಿ ಸ್ವಿಫ್ಟ್ ಕಾರಿನ ಚಿತ್ರವನ್ನು ಹಂಚಿಕೊಂಡಿದೆ. ಹೊಸ ಸ್ವಿಫ್ಟ್ ಮುಂಭಾಗವನ್ನು ಮರು ವಿನ್ಯಾಸಗೊಳಿಸಲಾಗಿದೆ. ಪ್ರಮುಖವಾಗಿ ಗ್ರಿಲ್, ಹೆಡ್‌ಲ್ಯಾಂಪ್ ಮತ್ತು ಬಂಪರ್‌ಗಳಲ್ಲಿ ಸಾಕಷ್ಟು ಬದಲಾವಣೆಯನ್ನು ಮಾಡಿದೆ. ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಹೊಸ ಹೊಸ ಬದಲಾವಣೆಯನ್ನು ಮಾಡಿಕೊಳ್ಳಲಾಗಿದೆ.

ಇನ್ನು ಹೊಸ ಸ್ವಿಫ್ಟ್ ಡ್ಯುಯಲ್ ಸೆನ್ಸಾರ್ ಬ್ರೇಕ್ ಸಪೋರ್ಟ್, ಅಡಾಪ್ಟಿವ್ ಹೈ ಬೀಮ್ ಸಿಸ್ಟಮ್ ಮತ್ತು ಡ್ರೈವರ್ ಮಾನಿಟರಿಂಗ್ ಸಿಸ್ಟಮ್ ಸೇರಿದಂತೆ ಸುಧಾರಿತ ಸುರಕ್ಷತಾ ತಂತ್ರಜ್ಞಾನಗಳನ್ನು ಒಳಗೊಂಡಿದೆ. ಆದರೆ ಯಾವ ತಂತ್ರಜ್ಞಾನಗಳನ್ನು ಕಾರು ಒಳಗೊಂಡಿದೆ ಅನ್ನೋ ಬಗ್ಗೆ ಯಾವುದೇ ನಿಖರವಾದ ಮಾಹಿತಿಯನ್ನು ಕಂಪೆನಿ ಪ್ರಕಟಿಸಿಲ್ಲ.
ಇದನ್ನೂ ಓದಿ : ಕೇವಲ ತಿಂಗಳಿಗೆ 2492ರೂ.ಗೆ ಖರೀದಿಸಿ ಹೊಸ ಬಜಾಜ್ ಪಲ್ಸರ್ P170 : ಮೈಲೆಜ್, ಫೀಚರ್ಸ್ ಕೇಳಿದ್ರೆ ಪಕ್ಕಾ ಸುಸ್ತಾಗ್ತೀರಿ !
ಹೊಸ ಸ್ವಿಫ್ಟ್ ಕಾರು ಹ್ಯಾಚ್‌ಬ್ಯಾಕ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಯೂನಿಟ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳನ್ನು ಒಳಗೊಂಡ ಕ್ಯಾಬಿನ್ ಹೊಂದಿದೆ. ಅಲಲ್ದೇ ಹೊಸ ಕಾರಿನಲ್ಲಿ ಸನ್ ರೂಫ್ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಇಂಡಿಯಾ-ಸ್ಪೆಕ್ ಸ್ವಿಫ್ಟ್ ಪ್ರಸ್ತುತ 1.2-ಲೀಟರ್ K-ಸೀರೀಸ್ ಡ್ಯುಯಲ್-ಜೆಟ್ ಡ್ಯುಯಲ್-VVT ಪೆಟ್ರೋಲ್ ಎಂಜಿನ್ ಅನ್ನು ಬಳಸುತ್ತದೆ, ಇದು 90PS ಮತ್ತು 113Nm ಅನ್ನು ಉತ್ಪಾದಿಸುತ್ತದೆ. ಪ್ರಸರಣ ಆಯ್ಕೆಗಳಲ್ಲಿ 5-ವೇಗದ MT ಮತ್ತು 5-ವೇಗದ AMT ಸೇರಿವೆ. ಇದು CNG ಆಯ್ಕೆಯನ್ನು ಸಹ ಪಡೆಯುತ್ತದೆ.
ಸದ್ಯ ಮಾರುತಿ ಸ್ವಿಫ್ಟ್ ಕಾರಿನ ಬೆಲೆ ರೂ 5,99,450 ಮತ್ತು ರೂ 9,03,000 (ಎಕ್ಸ್ ಶೋ ರೂಂ). 2024 ರಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ಹೊಸ ಕಾರಿನ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆದರೆ ಕಂಪೆನಿ ಈ ಕುರಿತು ಯಾವುದೇ ಅಧಿಕೃತ ಮಾಹಿತಿಯನ್ನು ಹೊರಬಿಟ್ಟಿಲ್ಲ.
ಇದನ್ನೂ ಓದಿ : Honda Elevate : ಕೇವಲ ₹18,653ಕ್ಕೆ ಮನೆಗೆ ತನ್ನಿ ಹೊಚ್ಚ ಹೊಸ ಐಷಾರಾಮಿ ಹೋಂಡಾ ಎಲಿವೇಟ್ ಎಸ್‌ಯುವಿ ಕಾರು
ಮಾರುತಿ ಕಾರು ಸದ್ಯ ಪೆಟ್ರೋಲ್, ಸಿಎನ್‌ಜಿ ಮಾದರಿಯಲ್ಲಿ ಗ್ರಾಹಕರಿಗೆ ಲಭ್ಯವಿದ್ದು, ಆಟೋಮೆಟಿಕ್ ಹಾಗೂ ಮ್ಯಾನುವೆಲ್ ಗೇರ್ಸ್ ಮಾದರಿಯಲ್ಲಿ ಗ್ರಾಹಕರು ಖರೀದಿಸಬಹುದಾಗಿದೆ. ಸ್ವಿಫ್ಟ್ ಎಲ್‌ಎಕ್ಸ್‌ಐ, ಸ್ವಿಫ್ಟ್ ವಿಎಕ್ಸ್‌ಐ, ಸ್ವಿಫ್ಟ್ ವಿಎಕ್ಸ್ ಎಎಂಟಿ, ಸ್ವಿಫ್ಟ್ ಝಡ್‌ಎಕ್ಸ್‌ಐ, ಸ್ವಿಫ್ಟ್ ಸಿಎನ್‌ಜಿ, ಸ್ವಿಫ್ಟ್ ಝಡ್‌ಎಕ್ಸ್‌ಐ ಎಎಂಟಿ ಮಾದರಿಯಲ್ಲಿ ಕಾರು ಲಭ್ಯವಿದೆ.

ಅಲ್ಲದೇ ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿರುವ ಸ್ವಿಫ್ಟ್ ಝಡ್‌ಎಕ್ಸ್‌ಐ ಪ್ಲಸ್, ಸ್ವಿಫ್ಟ್ ಝಡ್‌ಎಕ್ಸ್‌ಐ ಡ್ಯೂಲ್‌ಟೋನ್, ಸ್ವಿಫ್ಟ್ ಝಡ್‌ಎಕ್ಸ್‌ಐ ಸಿಎನ್‌ಜಿ, ಸ್ವಿಫ್ಟ್ ಝಡ್‌ಎಕ್ಸ್‌ಐ ಪ್ಲಸ್ ಎಎಂಟಿ, ಸ್ವಿಫ್ಟ್ ಝಡ್‌ಎಕ್ಸ್‌ಐ ಪ್ಲಸ್ ಎಎಂಟಿ ಡ್ಯೂಲ್ ಟೋನ್ ಮಾದರಿಯಲ್ಲಿ ಕಾರನ್ನು ಖರೀದಿಸಬಹುದಾಗಿದೆ.
Maruti Suzuki Unveiled New Swift Very Low Price Japan Mobility Show 2023