ಭಾನುವಾರ, ಏಪ್ರಿಲ್ 27, 2025
HomeautomobileOla Electric Scooter: ಕೊನೆಗೂ ಮಾರುಕಟ್ಟೆಗೆ ಲಗ್ಗೆಯಿಡಲು ಸಿದ್ಧವಾದ ಓಲಾ ಸ್ಕೂಟರ್‌ಗಳು; ಬಿಡುಗಡೆಯ ದಿನಾಂಕ ಇಲ್ಲಿದೆ

Ola Electric Scooter: ಕೊನೆಗೂ ಮಾರುಕಟ್ಟೆಗೆ ಲಗ್ಗೆಯಿಡಲು ಸಿದ್ಧವಾದ ಓಲಾ ಸ್ಕೂಟರ್‌ಗಳು; ಬಿಡುಗಡೆಯ ದಿನಾಂಕ ಇಲ್ಲಿದೆ

- Advertisement -

ಕೊರೊನ ಹಾಗೂ ಲಾಕ್‌ಡೌನ್‌ನಿಂದಾಗಿ ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳ ವಿತರಣೆಯನ್ನು ಮುಂದೂಡಿದ್ದ ನಂತರ, ಓಲಾ ಎಲೆಕ್ಟ್ರಿಕ್ ಈಗ ಅಂತಿಮವಾಗಿ ತನ್ನ S1 ಮತ್ತು S1 ಪ್ರೊ ಮಾಡೆಲ್‌ಗಳ ಹೊಸ ವಿತರಣಾ ದಿನಾಂಕವನ್ನು ಘೋಷಿಸಿದೆ. ಓಲಾ ಸಂಸ್ಥಾಪಕ ಮತ್ತು ಸಿಇಒ ಭವಿಶ್ ಅಗರ್ವಾಲ್ ಅವರು ತಮ್ಮ ಕಂಪನಿಯು ಡಿಸೆಂಬರ್ 15 ರಿಂದ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ವಿತರಿಸಲು ಪ್ರಾರಂಭಿಸುತ್ತದೆ ಎಂದು ಟ್ವಿಟರ್‌ನಲ್ಲಿ ಬಹಿರಂಗಪಡಿಸಿದ್ದಾರೆ.

ಭವಿಶ್ ಅಗರ್ವಾಲ್ ಟ್ವಿಟರ್‌ನಲ್ಲಿ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದು, ಇದರಲ್ಲಿ ಓಲಾ ಕಾರ್ಖಾನೆಯೊಳಗೆ ಸಾಲಾಗಿ ನಿಂತಿರುವ ಎಸ್ 1 ಮತ್ತು ಎಸ್ 1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ನೋಡಬಹುದು. ಈ ಸ್ಕೂಟರ್‌ಗಳ ಬೇಡಿಕೆ ಹೆಚ್ಚಿದ್ದು, ಉತ್ಪಾದನೆಯನ್ನು ಹೆಚ್ಚಿಸಲಾಗಿದೆ ಎಂದು ಉನ್ನತ ಅಧಿಕಾರಿಗಳು ಹೇಳಿದ್ದಾರೆ.  ತಮ್ಮ ಟ್ವಿಟ್ಟರ್ ಪೋಸ್ಟ್‌ನಲ್ಲಿ, ಭವಿಶ್ ಆಗಸ್ಟ್ ತಿಂಗಳಲ್ಲಿ ಬುಕಿಂಗ್ ಪ್ರಾರಂಭವಾಗಿತ್ತು. ಆದರೆ, ಸಮಯಕ್ಕೆ ಸರಿಯಾಗಿ ಡೆಲಿವರಿ ಸಾಧ್ಯವಾಗಿಲ್ಲ. ಗ್ರಾಹಕರ ತಾಳ್ಮೆಗಾಗಿ ಧನ್ಯವಾದಗಳು ಎಂದಿದ್ದಾರೆ.

ಎರಡನೇ ಸುತ್ತಿನ ಬುಕಿಂಗ್ ಡಿಸೆಂಬರ್ 16 ರಿಂದ ಪ್ರಾರಂಭವಾಗಲಿದೆ. ಒಂದೊಮ್ಮೆ ಬುಕಿಂಗ್ ಹಿಂಪಡೆದಲ್ಲಿ ಹಣ ರೀಫಂಡ್ ಆಗಲಿದೆ ಎಂದು ಕಂಪೆನಿ ತಿಳಿಸಿದೆ.ಈ ಕಂಪೆನಿಯ ಹೆಗ್ಗಳಿಕೆ ಎಂದರೆ ಬುಕಿಂಗ್ ಪ್ರಾರಂಭವಾಗಿ ಕೇವಲ ಎರಡು ದಿನಗಳಲ್ಲಿ 1100 ಕೋಟಿ ರೂಪಾಯಿಗಳ ಮೊತ್ತದ ಓಲಾ ಸ್ಕೂಟರ್ ಬುಕಿಂಗ್ ಆಗಿವೆ. ಸ್ಕೂಟರ್ ದರದ ಕುರಿತು ಹೇಳುವುದಾದರೆ ಎಸ್ 1.1 ಲಕ್ಷ ಹಾಗೂ ಎಸ್1 ಪ್ರೊ 1.3 ಲಕ್ಷ ಕ್ಕೆ  ಗ್ರಾಹಕರಿಗೆ ಸಿಗಲಿದೆ.

ಏನೆಲ್ಲಾ ವಿಶೇಷತೆಗಳನ್ನು ಹೊಂದಿದೆ?
ಈ ಸಿರೀಸ್ ಸ್ಕೂಟರ್ ಸ್ಮಾರ್ಟ್ ಆನ್ ಬೋರ್ಡ್ ಸಂವೇದನೆಯನ್ನು ಹೊಂದಿದೆ. ಇದರಿಂದಾಗಿ ಸ್ವಯಂ ಚಲಿತವಾಗಿ ಲಾಕ್ ಹಾಗೂ ಅನ್ ಲಾಕ್ ಆಗುತ್ತದೆ. ಅಷ್ಟೇ ಅಲ್ಲದೇ ಧ್ವನಿ ಗುರುತಿಸುವಿಕೆಯನ್ನೂ ಹೊಂದಿದ್ದು ಗ್ರಾಹಕರಿಗೆ ಮತ್ತಷ್ಟು ಸಹಕಾರಿಯಾಗಲಿದೆ ಎಂದು ಓಲಾ ಸಂಸ್ಥೆ ಹೇಳಿದೆ. ಅಷ್ಟೇ ಅಲ್ಲದೆ, ಜಿಪಿಎಸ್, ವೈ ಫೈ, ಟಚ್ ಸ್ಕ್ರೀನ್ ಹಾಗೂ 4 ಜಿ ಸೌಲಭ್ಯವೂ ಇರಲಿದೆ.

ಈ ಎರಡೂ ವಾಹನಗಳು ಒಮ್ಮೆ ಚಾರ್ಜ್ ಮಾಡಿದಲ್ಲಿ  ಕ್ರಮವಾಗಿ 120 ಹಾಗೂ 180 ಕಿ ಮೀ ದೂರಗಳನ್ನು ಕ್ರಮಿಸುವ ಸಾಮರ್ಥ್ಯ ಹೊಂದಿವೆ. ಕಳ್ಳತನ ತಡೆಯುವ ನಿಟ್ಟಿನಲ್ಲಿ, ಕಳ್ಳತನ ವಿರೋಧಿ ಎಚ್ಚರಿಕೆ ವ್ಯವಸ್ಥೆಯನ್ನೂ ಇದು ಒಳಗೊಂಡಿದೆ. ಈ ವಾಹನದ ಇನ್ನೊಂದು ಪ್ರಮುಖ ಆಕರ್ಷಣೆ ಎಂದರೆ “ಹಿಲ್ ಹೋಲ್ಡ್” ವೈಶಿಷ್ಟ್ಯತೆ. ಇದು ಇಳಿಜಾರಿನಲ್ಲಿ ಸುಗಮವಾಗಿ ಸಾಗಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Sanjana Garlani : ಓಲಾ ಡ್ರೈವರ್‌ ಜೊತೆ ನಟಿ ಸಂಜನಾ ಗಲ್ರಾನಿ ಕಿರಿಕ್‌

(Ola Electric Scooter Delivery To Start From December 15th 2021 Announced By Company CEO Bhavish Aggarwal)

RELATED ARTICLES

Most Popular