ಕಾರು (Car) ಖರೀದಿಸುವಾಗ ಅದರ ವೈಶಿಷ್ಟ್ಯ, ವಿನ್ಯಾಸದ ಜೊತೆಗೆ ಗ್ರಾಹಕರು ಸುರಕ್ಷತೆಗೂ ಆದ್ಯತೆ ನೀಡುತ್ತಾರೆ (Safest Cars In India). ಉತ್ತಮ ಸುರಕ್ಷತಾ ವೈಶಿಷ್ಟ್ಯಗಳಿರುವ ಕಾರುಗಳನ್ನು ಚಾಲನೆ ಮಾಡುವಾಗ ಪ್ರಯಾಣಿಕರು ಹೆಚ್ಚು ಸುರಕ್ಷಿತವಾಗಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ವಾಹನಗಳಲ್ಲಿ ಸಾಕಾಷ್ಟು ಸುಧಾರಿತ ವೈಶಿಷ್ಟ್ಯಗಳು ಬರುತ್ತಿವೆ. ತುರ್ತು ಪರಿಸ್ಥಿತಿಯಲ್ಲಿ ಎಚ್ಚರಿಕೆ ನೀಡುವ ಸುಧಾರಿತ ವೈಶಿಷ್ಟ್ಯಗಳಿಂದ ಹಿಡಿದು, ಏರ್‌ಬ್ಯಾಗ್ಸ್, ಹಿಲ್ ಅಸಿಸ್ಟ್ಂಟ್, ABS ಮುಂತಾದವುಗಳನ್ನು ಅಳವಡಿಸಿರುತ್ತಾರೆ. ಅದು ಚಾಲಕರಿಗೆ ಬಹಳ ಸಹಾಯ ಮಾಡುತ್ತದೆ. ಗ್ಲೋಬಲ್ ಎನ್‌ಸಿಎಪಿ ಯಿಂದ 5 ಸ್ಟಾರ್ ರೇಟಿಂಗ್ ಪಡೆದಿರುವ ಭಾರತದ ಸುರಕ್ಷಿತ ಕಾರುಗಳ ಪಟ್ಟಿ ಇಲ್ಲಿದೆ.

ಮಹೇಂದ್ರಾ UV700:
ಇದು 5 ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದುಕೊಂಡ ಮಹೇಂದ್ರಾದ ಎರಡನೇ ಕಾರ್ ಆಗಿದೆ. ಇದು ಸೇಫರ್ ಚೊಯ್ಸ್ ಅವಾರ್ಡ್ ಅನ್ನು ಪಡೆದುಕೊಂಡಿದೆ. ಚೈಲ್ಡ್ ಪ್ರೊಟೆಕ್ಷನ್‌ನಲ್ಲಿ 4 ಸ್ಟಾರ್ ಪಡೆದಿದೆ. 7 ಏರ್‌ಬ್ಯಾಗ್ಸ್, ABS, ESP, ಅಡ್ವಾನ್ಸ್ ಡ್ರೈವರ್ ಅಸಿಸ್ಟಂಟ್ ಸಿಸ್ಟಿಮ್, ಎಮರ್ಜನ್ಸಿ ಬ್ರೆಕ್, ಲೇನ್ ಕೀಪ್ ಅಸಿಸ್ಟ್, ಬೂಸ್ಟರ್ ಹೆಡ್‌ಲೈಟ್ ಮುಂತಾದ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಕಾರಿನ ಆರಂಭಿಕ ಬೆಲೆಯು (ಎಕ್ಸ್ ಶೋ ರೂಂ) 13.18 ಲಕ್ಷ ರೂ. ಆಗಿದೆ.

ಟಾಟಾ ನೆಕ್ಸಾನ್:
ಸುರಕ್ಷತೆಯಲ್ಲಿ ಟಾಟಾ ನೆಕ್ಸಾನ್ 5 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ಇದು ಗ್ಲೋಬಲ್ ಎನ್‌ಸಿಎಪಿ ಯ ಕ್ರಾಶ್ ಟೆಸ್ಟ್‌ನಲ್ಲಿ 17 ಪಾಯಿಂಟ್ ಗಳಲ್ಲಿ 16.6 ಗಳಿಸಿದೆ. ಇದು ಪ್ರತಿ ಲೀಟರ್‌ಗೆ 21.5 ಕಿಮಿ ಮೈಲೇಜ್ ನೀಡುತ್ತದೆ. ಅಡಲ್ಟ್ ಪ್ರೊಟೆಕ್ಷನ್‌ನಲ್ಲಿ 5 ಸ್ಟಾರ್ ಪಡೆದುಕೊಂಡಿದ್ದರೆ, ಚೈಲ್ಡ್ ಪ್ರೊಟೆಕ್ಷನ್‌ನಲ್ಲಿ 3–ಸ್ಟಾರ್ ಪಡೆದಿದೆ. ಇದು 1499cc ಇಂಜಿನ್ ಹೊಂದಿದೆ. ಏರ್‌ಬ್ಯಾಗ್ಸ್, ಬ್ರೆಕ್ ಡಿಸ್ಕ್ ವೈಪಿಂಗ್, ಎಮರ್ಜನ್ಸಿ ಬ್ರೆಕ್, ಎಬಿಎಸ್, ರಿವರ್ಸ್ ಪಾರ್ಕಿಂಗ್ ಕ್ಯಾಮರ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ. ಇದರ ಆರಂಭಿಕ ಬೆಲೆಯು (ಎಕ್ಸ್ ಶೋ ರೂಂ) 7.54 ಲಕ್ಷಗಳು.

ಟಾಟಾ ಪಂಚ್ :
5–ಸ್ಟಾರ್ ರೇಟಿಂಗ್ ಪಡೆದುಕೊಂಡ ಚೀಪೆಸ್ಟ್ ಕಾರಾಗಿದೆ. ಗ್ಲೋಬಲ್ ಎನ್‌ಸಿಎಪಿ ಯಿಂದ 5–ಸ್ಟಾರ್ ಪಡೆದುಕೊಂಡಿದೆ. ಇದು ಚೈಲ್ಡ್ ಪ್ರೊಟೆಕ್ಷನ್‌ನಲ್ಲಿ 4 ಸ್ಟಾರ್ ಪಡೆದುಕೊಂಡಿದೆ. ಎರಡು ಏರ್ ಬ್ಯಾಗ್‌ಗಳು, ಸೀಟ್ ಬೆಲ್ಟ್ ರಿಮೈಂಡರ್, ಫ್ರಂಟ್ ಫಾಗ್ ಲ್ಯಾಂಪ್, ಅಟೊಮೆಟಿಕ್ ಹೆಡ್ ಲ್ಯಾಂಪ್, ರೇನ್ ಸೆನ್ಸಿಂಗ್ ವೈಪೆರ್ ಮತ್ತು ABS ಮುಂತಾದ ತಂತ್ರಜ್ಞಾನಗಳು ಟಾಟಾ ಪಂಚ್‌ನಲ್ಲಿದೆ. ಈ ಕಾರಿನ ಆರಂಭಿಕ ಬೆಲೆಯು (ಎಕ್ಸ್ ಶೋ ರೂಂ) 5.82 ಲಕ್ಷವಾಗಿದೆ.

ಟಾಟಾ ಅಲ್ಟ್ರೂಜ್:
ಸುರಕ್ಷತೆಯಲ್ಲಿ 5 ಸ್ಟಾರ್ ರೇಟಿಂಗ್ ಪಡೆದುಕೊಂಡ ಟಾಟಾ ಮತ್ತೊಂದು ಕಾರು ಅಲ್ಟ್ರೂಜ್. 1399 cc ಇಂಜಿನ್ ಇರುವ ಈ ಕಾರು ಪ್ರತಿ ಲೀಟರ್‌ಗೆ 25.11 ಕಿಮಿ ಮೈಲೇಜ್ ನೀಡುತ್ತದೆ. ಅಡಲ್ಟ್ ಪ್ರೊಟೆಕ್ಷನ್‌ನಲ್ಲಿ 5–ಸ್ಟಾರ್ ಪಡೆದುಕೊಂಡಿದ್ದರೆ, ಚೈಲ್ಡ್ ಪ್ರೊಟೆಕ್ಷನ್‌ನಲ್ಲಿ 4 ಸ್ಟಾರ್ ಪಡೆದುಕೊಂಡಿದೆ. ಈ ಕಾರಿನಲ್ಲಿ ಮುಂಭಾಗದಲ್ಲಿ ಡ್ಯುಯಲ್ ಏರ್‌ಬ್ಯಾಗ್, EBD ತಂತ್ರಜ್ಞಾನ ಹೊಂದಿರುವ ABS, ವೈಸ್ ಅಲರ್ಟ್, ಫಾಗ್ ಲ್ಯಾಂಪ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಮತ್ತು ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್ ವೈಶಿಷ್ಟ್ಯಗಳಿವೆ. ಈ ಕಾರಿನ ಆರಂಭಿಕ ಬೆಲೆಯು (ಎಕ್ಸ್ ಶೋ ರೂಂ) 5.69 ಲಕ್ಷವಾಗಿದೆ.

ಮಹೆಂದ್ರಾ XUV300
ಇದು ಮಹೆಂದ್ರಾ ಗ್ರೂಪ್‌ನ ಕಾರುಗಳಲ್ಲಿ 5 ಸ್ಟಾರ್ ರೇಟಿಂಗ್ ಪಡೆದುಕೊಂಡಿರುವ ಮೊದಲ ಕಾರಾಗಿದೆ. ಅಡಲ್ಟ್ ಪ್ರೊಟೆಕ್ಷನ್‌ನಲ್ಲಿ 5–ಸ್ಟಾರ್ ರೆಟ್ ಅನ್ನೂ, ಚೈಲ್ಡ್ ಪ್ರೊಟೆಕ್ಷನ್‌ನಲ್ಲಿ 4 ಸ್ಟಾರ್ ಅನ್ನು ಪಡೆದಿದೆ. ಇದರಲ್ಲಿ ಆಧುನಿಕ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. EBD ತಂತ್ರಜ್ಞಾನ ಹೊಂದಿರುವ ABS, ನಾಲ್ಕು ಚಕ್ರಗಳಿಗೆ ಡಿಸ್ಕ್ ಬ್ರೆಕ್, 6–ಸ್ಪೀಡ್ ಟ್ರಾನ್ಸ್‌ಮಿಷನ್, ಎಲ್‌ಇಡಿ ಟೈಲ್ ಲ್ಯಾಂಪ್, 4 ಪವರ್ ವಿಂಡೊ ಗಳಿವೆ. ಮಹೆಂದ್ರಾ XUV300 ಕಾರು ಪ್ರತಿ ಲೀಟರ್‌ಗೆ 20 ಕಿಮಿ ಕ್ರಮಿಸುತ್ತದೆ. ಇದರ ಆರಂಭಿಕ ಬೆಲೆಯು (ಎಕ್ಸ್ ಶೋ ರೂಂ) 8.42 ಲಕ್ಷವಾಗಿದೆ.
ಇದನ್ನೂ ಓದಿ : Aadhaar-PAN Linking : ಎಚ್ಚರ! ಆಧಾರ್–ಪಾನ್ ಲಿಂಕ್ ಮಾಡ್ಲಿಲ್ಲ ಅಂದ್ರೆ ಫೈನ್ ಅಷ್ಟೇ ಬೀಳಲ್ಲ, ನಿಮ್ಮ ಕಾರ್ಡ್ ಡಿಲೀಟ್ ಆಗಬಹುದು
ಇದನ್ನೂ ಓದಿ : Vespa : ಸೂಪರ್ ರೆಟ್ರೊ ಲುಕ್‌ನಲ್ಲಿ ಹೊಸದಾಗಿ ಅಪ್ಡೇಟ್ ಆದ ವೆಸ್ಪಾ GTV ಸ್ಕೂಟರ್
(Safest Cars In India with 5-star ratings)