ವಿಶಿಷ್ಟ ವಿನ್ಯಾಸದಿಂದಲೇ ಗ್ರಾಹಕರನ್ನು ಸೆಳೆಯುತ್ತಿದೆ ಟೊಯಾಟೋ ಯಾರೀಸ್

0

ವಿಶ್ವದ ಪ್ರಸಿದ್ದ ಕಾರು ತಯಾರಿಕಾ ಕಂಪೆನಿಯಾಗಿರುವ ಟೊಯೊಟಾ ಹೊಸ ಹೊಸ ಮಾದರಿಯ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಲೇ ಇರುತ್ತದೆ.

ಭಾರತದಲ್ಲಿಯೂ ಟೊಯಾಟೋ ಕಾರುಗಳು ಬಹು ಪ್ರಖ್ಯಾತಿ ಪಡೆದುಕೊಂಡಿವೆ. ಇದೀಗ ಟೊಯಾಟೋ ಕಂಪನಿಯು ತನ್ನ ಕಾಂಪ್ಯಾಕ್ಟ್ ಎಸ್‍ಯುವಿ ಯಾರೀಸ್ ಕ್ರಾಸ್ ಕಾರನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.

2020ರ ಆರಂಭದಲ್ಲಿಯೇ ಟೊಯಾಟೋ ಕಂಪೆನಿ ಜನಪ್ರಿಯ ಟೊಯಾಟೋ ಯಾರೀಸ್ ಕಾರನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಪ್ಲ್ಯಾನ್ ರೂಪಿಸಿತ್ತು.

ಮಾತ್ರವಲ್ಲ 2020ರ ಜಿನೀವಾ ಮೋಟಾರ್ ಶೋ ನಲ್ಲಿಯೂ ಟೊಯಾಟೋ ಯಾರೀಸ್ ಪ್ರದರ್ಶನ ಮಾಡುವುದಾಗಿಯೂ ಹೇಳಿಕೊಂಡಿತ್ತು. ಆದ್ರೀಗ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ತಡವಾಗಿ ಟೊಯಾಟೋ ಯಾರೀಸ್ ಮಾರುಕಟ್ಟೆಗೆ ಪ್ರವೇಶಿಸಿದೆ.

ಟೊಯಾಟೋ ಯಾರೀಸ್ ಕಾರನ್ನು ವಿಶಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ಯಾರೀಸ್ ಕ್ರಾಸ್ 4,180 ಎಂಎಂ ಉದ್ದ, 1765 ಎಂಎಂ ಅಗಲ, 1560 ಎಂಎಂ ಎತ್ತರದ ಜೊತೆಗೆ 2560 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ.

ಮಾತ್ರವಲ್ಲ ಮಾರುಕಟ್ಟೆಯಲ್ಲಿರುವ ಇತರ ಟೊಯಾಟೋ ಎಸ್ ಯುವಿ ಕಾರುಗಳಿಗೆ ಹೋಲಿಕೆ ಮಾಡಿದ್ರೆ ವಿಭಿನ್ನ ವಿನ್ಯಾಸವನ್ನು ಹೊಂದಿದ್ದು, ಟೊಯೊಟಾ ಕ್ರಾಸ್ ಕಾಂಪ್ಯಾಕ್ಟ್ ಎಸ್‍ಯುವಿಯ ಮುಂಭಾಗದಲ್ಲಿ ಟೊ – ಟೈರ್ ಗ್ರಿಲ್ ಅನ್ನು ಅಳವಡಿಸಲಾಗಿದೆ.

ಕಾರಿನ ಹೊರ ಭಾಗ ಮಾತ್ರವಲ್ಲದೇ ಕಾಂಪ್ಯಾಕ್ಟ್ ಎಸ್‍ಯುವಿಯಲ್ಲಿ ಸ್ಲೀಕ್ ಟೇಲ್ ಲ್ಯಾಂಪ್ ಅನ್ನು ಅಳವಡಿಸಲಾಗಿದ್ದು, ಕಾಂಪ್ಯಾಕ್ಟ್ ಎಸ್‍ಯುವಿಯಲ್ಲಿ 18 ಇಂಚಿನ ವ್ಹೀಲ್ ಹೊಂದಿದೆ.

ಟೊಯೊಟಾ ಯಾರೀಸ್ ಕ್ರಾಸ್ ಕಾಂಪ್ಯಾಕ್ಟ್ ಎಸ್‍ಯುವಿಯಲ್ಲಿ ಆಂಬಿಯೆಂಟ್ ಲೈಟಿಂಗ್ ಜೊತೆಗೆ ಅತ್ಯಾಧುನಿಕ ಫ್ಲೋಟಿಂಗ್ ಟಚ್‌ಸ್ಕ್ರೀನ್ ಡಿಸ್‍ ಪ್ಲೇ ಮತ್ತು ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಸೌಲಭ್ಯವನ್ನು ಒಳಗೊಂಡಿದೆ.

ಇನ್ನು ಟೊಯಾಟೋ ಯಾರೀಸ್ ಎಸ್‍ಯುವಿಯಲ್ಲಿ ಡಿಆರ್‌ಎಲ್‌ಗಳೊಂದಿಗೆ ಹೆಡ್ ಲ್ಯಾಂಪ್ ಮತ್ತು ಬಂಪರ್ ಕೆಳಭಾಗದಲ್ಲಿ ವೃತ್ತಾಕಾರದ ಫಾಂಗ್ ಲ್ಯಾಂಪ್ ಅನ್ನು ಅಳವಡಿಸಿದ್ದಾರೆ.

ಈ ಕಾಂಪ್ಯಾಕ್ಟ್ ಎಸ್‍ಯುವಿಯು ಸ್ಕ್ವೇರ್ ಆಫ್ ವ್ಹೀಲ್ ಕಮಾನುಗಳು ಮತ್ತು ಬ್ಲ್ಯಾಕ್ ಪ್ಲೋಟಿಂಗ್ ರೂಪ್ ಹೊಂದಿದ್ದು, ಗ್ರಾಹಕರಿಗೆ ಇಷ್ಟವಾಗುವಂತಿದೆ.

ದೂರದ ಪ್ರಯಾಣಕ್ಕೆ ಹೇಳಿ ಮಾಡಿಸಿದಂತಿರುವ ಟೊಯಾಟೋ ಯಾರೀಸ್ ಕಾರನ್ನು ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ. ಇಂಟಿರಿಯರ್ ನಲ್ಲಿ ಉತ್ತಮ ಸ್ಪೇಸ್ ಅನ್ನು ಹೊಂದಿದೆ.

ಈ ಕಾಂಪ್ಯಾಕ್ಟ್ ಎಸ್‍ಯುವಿಯಲ್ಲಿ ಆರಾಮದಾಯಕವಾಗಿ ದೂರ ಪ್ರಯಾಣ ಮಾಡಬಹುದು. ಅದ್ರಲ್ಲೂ ಅತ್ಯಾಕರ್ಷಕವಾಗಿರುವ ಕಾರಿನ ಇಂಟಿರಿಯರ್ ಗ್ರಾಹಕರನ್ನು ತನ್ನತ್ತ ಸೆಳೆಯುವುದರಲ್ಲಿ ಅನುಮಾನವೇ ಇಲ್ಲಾ.

ಟೊಯಾಟೋ ಯಾರೀಸ್ ಕ್ರಾಸ್ ಕಾಂಪ್ಯಾಕ್ಟ್ ಎಸ್‍ಯುವಿ ಹೈಬ್ರಿಡ್ ಎಂಜಿನ್ ಒಳಗೊಂಡಿದ್ದು, 1.5-ಲೀಟರ್, ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಎಲೆಕ್ಟ್ರಿಕ್ ಮೋಟರ್ ನೊಂದಿಗೆ ಅಳವಡಿಸಲಾಗಿದೆ.

ಹೀಗಾಗಿ ಬಿಎಸ್ 6 ಪ್ರಯೋಜನದ ಜೊತೆಗೆ ಎಲೆಕ್ಟರಿಕಲ್ ಕಾರಿನ ಸೌಲಭ್ಯವನ್ನು ಗ್ರಾಹಕರು ಪಡೆಯಬಹುದಾಗಿದೆ. ಎಂಜಿನ್ 108 ಬಿಹೆಚ್‍ಪಿ ಪವರ್ ಮತ್ತು 140 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾಂಪ್ಯಾಕ್ಟ್ ಎಸ್‍ಯುವಿಯಲ್ಲಿ ಆಲ್-ವೀಲ್-ಡ್ರೈವ್ ಸಿಸ್ಟಂ ಅನ್ನು ಕೂಡ ಅಳವಡಿಸಲಾಗಿದೆ.

ಟೊಯಾಟೋ ಯಾರಿಸ್ ಕಾರು ವಿನ್ಯಾಸದಿಂದಲೇ ಗ್ರಾಹಕರ ಗಮನ ಸೆಳೆಯುತ್ತಿದೆ. ಈಗಾಗಲೇ ಟೊಯಾಟೋ ಕಂಪೆನಿಯ ತವರೂರಾಗಿರುವ ಜಪಾನ್ ನಲ್ಲಿ ಕಾರು ಮಾರುಕಟ್ಟೆಗೆ ಬಿಡುಗಡೆಯಾಗಿದೆ.

ವಿದೇಶಿ ಗ್ರಾಹಕರನ್ನ ಈಗಾಗಲೇ ಮೋಡಿ ಮಾಡಿರುವ ಟೊಯಾಟೋ ಯಾರೀಸ್ ಯಾವಾಗ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತೆ ಅನ್ನೋ ಕುರಿತು ಕಂಪೆನಿ ಹೇಳಿಲ್ಲ.

ಒಂದೊಮ್ಮೆ ಯಾರೀಸ್ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದ್ರೆ, ಮಾರುತಿ ಸುಜುಕಿ ವಿಟಾರಾ ಬ್ರೇಝಾ, ಹ್ಯುಂಡೈ ವೆನ್ಯೂ, ಮಹೀಂದ್ರಾ 300 ಮತ್ತು ಟಾಟಾ ನೆಕ್ಸಾನ್ ಕಾಂಪ್ಯಾಕ್ಟ್ ಎಸ್‍ಯುವಿಗಳಿಗೆ ಫೈಪೋಟಿ ನೀಡುವುದು ಗ್ಯಾರಂಟಿ.

Leave A Reply

Your email address will not be published.